*ತ್ಯಾಗ *

 ತ್ಯಾಗ



ಅಂದು ಅಮ್ಮ ಹಣೆಗೆ ಮುತ್ತಿಕ್ಕಿ 

ತಿಲಕವಿಟ್ಟು ಭಾರತಾಂಬೆಯ ಮಕ್ಕಳ 

ರಕ್ಷಣೆಗೆ ರಕ್ಕಸನಾಗು ರಣರಂಗದಲ್ಲಿ 

ಎಂದೇಳಿ ಭಾರತಾಂಬೆಯ ಮಡಿಲಿಗೆ ಹಾಕಿದಳು 


ಅಂದು ಅಪ್ಪ ಎದೆ ಸೆಟಿಸಿ ಸಾರ್ಥಕ 

ಭಾವನೆಯಲ್ಲಿ ತೇಲಾಡಿದರೂ 

ಅವನ ಕಣ್ಣುಗಳು ತೇವಗೊಂಡದ್ದು 

ಯಾರಿಗೂ ತಿಳಿಯಲೇ ಇಲ್ಲ 


ಅದೊಂದು ದಿನ ಆತ ಶತ್ರುಗಳ 

ಎದೆ ಬಗೆದು ರಣರಂಗದಲ್ಲಿ ನುಗ್ಗುವಾಗ 

ಬೀಸಿ ಬಂದ ಗುಂಡುಗಳಿಗೆ ಎದೆ ಕೊಟ್ಟ ಧೀರ 

ಕತ್ತಲೆಯ ರಕ್ತದ ಮಡುವಿನಲಿ ಬಿದ್ದ ವೀರ 


ಇಂದಿಗೂ ಯುದ್ಧ ಸಬುದ ಕೇಳಿದೊಡನೆ 

ಅಮ್ಮ ಕನಸಿನಲ್ಲೂ ಬೆಚ್ಚುತ್ತಿರುತ್ತಾಳೆ 

ಅಪ್ಪ ಆತಂಕದಿಂದ ಎದ್ದು ಕೂತು 

ಕತ್ತಲೆ ಕರಗುವುದನ್ನೇ ನೋಡುತ್ತಿರುತ್ತಾನೆ



ಉದಂತ ಶಿವಕುಮಾರ್

ಕವಿ ಮತ್ತು ಲೇಖಕ

ಜ್ಞಾನ ಭಾರತಿ ಅಂಚೆ

ಬೆಂಗಳೂರು -೫೬೦೦೫೬

ಮೊಬೈಲ್ ನಂ:9739758558

Image Description

Post a Comment

0 Comments