*7 ನೇ ತಾಲ್ಲೂಕು ಸಮ್ಮೇಳನ: ಕವಿಗಳˌಸಾಧಕರ ಮಾಹಿತಿ ಆಹ್ವಾನ*
ರಾಯಬಾಗ: ಕನ್ನಡ ಸಾಹಿತ್ಯ ಪರಿಷತ್ತು, ರಾಯಬಾಗ ತಾಲೂಕು ಘಟಕದ 7 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು 17 ಪೆಬ್ರುವರಿ 2024 ರಂದು ತಾಲ್ಲೂಕಿನ ಹಂದಿಗುಂದ ಗ್ರಾಮದಲ್ಲಿ ನಿಜಶರಣ ಶ್ರೀ ಆಯ್. ಆರ್. ಮಠಪತಿ ಗುರುಗಳ ಸರ್ವಾಧ್ಯಕ್ಷತೆಯಲ್ಲಿ ಜರುಗಲಿದೆ. ಮೆರವಣಿಗೆ,ವಿವಿಧ ಗೋಷ್ಠಿಗಳು,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಾಧಕರ ಸನ್ಮಾನ, ಹಾಗೂ ಕವಿಗೋಷ್ಠಿಗಳು ನಡೆಯಲಿದ್ದು ರಾಯಬಾಗ ತಾಲೂಕಿನ ಕವಿಗಳು ಮತ್ತು ಸಾಧಕರು ತಮ್ಮ ಕವಿತೆಗಳ/ಸಾಧನೆಯ ಕುರಿತಾದ ಮಾಹಿತಿಯೊಂದಿಗೆ ಸಂಪೂರ್ಣ ಸ್ವವಿವರವನ್ನು ಕ. ಸಾ. ಪ ಪದಾಧಿಕಾರಿಗಳಾದ ಶ್ರೀ ಟಿ. ಎಸ್. ವಂಟಗೂಡಿ(9740638585) , ಶ್ರೀ ಶಂಕರ ಕ್ಯಾಸ್ತಿ(7795361557) , ಶ್ರೀ ಸಂತೋಷ ತಮದಡ್ಡಿ(9591319967) ರವರಿಗೆ ಖುದ್ದಾಗಿ ಅಥವಾ ವಾಟ್ಸಾಪ್ ಮೂಲಕ ಜನೆವರಿ 15 ರೊಳಗಾಗಿ ಕಳುಹಿಸಬೇಕೆಂದು ಕ.ಸಾ.ಪˌ ತಾಲೂಕು ಘಟಕದ ಅಧ್ಯಕ್ಷ ರವೀಂದ್ರ ಪಾಟೀಲ ಮಾಹಿತಿ ನೀಡಿದ್ದಾರೆ.
*ವರದಿ:ಡಾ.ಜಯವೀರ ಎ.ಕೆ.*
*ಖೇಮಲಾಪುರ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments