ಶೀರ್ಷಿಕೆ : *ಸೌಂದರ್ಯ*

 🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏


ಶೀರ್ಷಿಕೆ : *ಸೌಂದರ್ಯ*



ನೋಡುಗರ ನೋಟದಲ್ಲಿದೆಯು

ಅನುಭವಿಸುವ ಮನದಲ್ಲಿದೆ

ಯು 

ಹೆಣ್ಣಿನ ಒನಪು ವಯ್ಯಾರ ದಲ್ಲಿದೆಯು

ಪ್ರಕೃತಿಯ ಬನ ಸಿರಿಯಲ್ಲಿ ದೆಯು


ದ್ರೌಪದಿ ಕೇಶ ಸೌಂದರ್ಯವೇ 

ಕುರುವಂಶ ಅವನತಿಯಲ್ಲವೇ

ಸೀತೆಯ ರೂಪ ಲಾವಣ್ಯವೇ

ಲಂಕಾದಹನಕ್ಕೆನಾಂದಿಯಲ್ಲವೇ


ಇಂದ್ರನ ಷಡ್ಯಂತ್ರಕ್ಕೆ ಅಹಲ್ಯ ಅಲ್ಲವೇ

ಶಿಲೆಯಾಗಿ ನೆಲೆ ನಿಂತಿದ್ದಲ್ಲವೇ

ನಂತರ ಅವನೂ ಸಹಸ್ರಾಕ್ಷ ನಾಗೆಂದು ಶಪಿಸಲಿಲ್ಲವೇ 

ಋಷಿ ಮುನಿಯ ಕೋಪಕ್ಕೆ ತುತ್ತಾಗ ಲಿಲ್ಲವೇ


ಹೀಗೆ ಹೆಣ್ಣಿನ ಸೌಂದರ್ಯವು

ಮೋಹದ ಜೊತೆ ಅವನತಿಯು ಹೊಂದುವವು

ವರವಾಗುವಂತೆ  ಅದರ ಹಿಂದೆ ಶಾಪವು

ಒಟ್ಟಿನಲ್ಲಿ ಹೆಣ್ಣಿಗೆ ಸೌಂದರ್ಯ ಸ್ವಂತವಲ್ಲವು.


✍️ *ಮಳೆಬಿಲ್ಲು ಲೀಲಾ ಗುರುರಾಜ್* ತುಮಕೂರು.

Image Description

Post a Comment

0 Comments