* ಮುಂಜಾನೆಯ ಸೊಗಸು*

 *ಮುಂಜಾನೆಯ ಸೊಗಸು*



ಬೆಳಕಿನ ಸೀರೆಯನುಡಿಸಿ

ಬಂದನು ರವಿ ಉದಿಸಿ

ಮೂಡಣದ ಅಂಚಿನಿಂದ

ಮಾಗಿಯ ಚಳಿಯಲ್ಲಿ 

ಮಂಜಿನ ಹನಿಯಲ್ಲಿ

ಹೊಳೆವ ಅವನು ಬಲು ಚಂದ


ಎಲೆಗಳ ಮರೆಯಲಿ

ಕೋಗಿಲೆ ಕೂಗಲು

ಮುಂಜಾನೆ ಇದು ಸೊಗಸು

ಬಿರಿಯುವ ಮೊಗ್ಗಲಿ

ಹಾಡುವ ದುಂಬಿಯ.

ಕಂಡು ನಲಿವುದು ಮನಸು


ಈ ಬಯಲಿನ ತುಂಬ 

ಪ್ರಖರ ಕಿರಣಗಳ ಜಂಭ

ನೋಡುವುದೇ ಭಾಗ್ಯ ಕಂಗಳಿಗೆ

ಪ್ರಕೃತಿಯ ಮಡಿಲಲಿ

ಮಗುವಾಗುವುದೇ ಸುಖ

ಬದುಕುವ ಭರವಸೆ ಇದು ನಾಳೆಗೆ


ಮತ್ತೆ ಮತ್ತೆ ಬರುವ 

ಮುಂಜಾನೆಗೆ ನಮನ

ಅದರಂತೆಯೇ ನಮ್ಮ ಜೀವನ

ನೋವಿನ ಕತ್ತಲ ಓಡಿಸಿ

ನಗುವಿನ ಬೆಳಕಲಿ ಸಂಚರಿಸಿ

ಆನಂದಿಸಲು ಇದುವೆ ನಿತ್ಯ ಪ್ರೇರಣ


0710ಎಎಂ18012019


ಅಮು ಭಾವಜೀವಿ

Image Description

Post a Comment

0 Comments