*"ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿ ವಿಶಿಷ್ಟ ಹಾಗೂ ವೈವಿಧ್ಯಮಯವಾಗಿದೆ"*~
*ಡಾ.ಮಧುರಾ ಎಂ ಜೋಶಿ*
ಶಿರಗುಪ್ಪಿ: ನಮ್ಮ ಅಖಂಡ ಭಾರತ ದೇಶದಲ್ಲಿ ಸನಾತನವಾಗಿ ಬಳುವಳಿಯಾಗಿ ಬಂದಿರುವ ಅನೇಕ ಹಬ್ಬಗಳು ಇಂದಿಗೂ ತಮ್ಮ ಮಹತ್ವವನ್ನು ಉಳಿಸಿಕೊಂಡು ಆಚರಿಸಲ್ಪಡುತ್ತಿವೆ.ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿ ವಿಶಿಷ್ಟ ಹಾಗೂ ವೈವಿಧ್ಯಮಯವಾಗಿದೆ ಎಂದು ಚಿಕ್ಕೋಡಿ ಆರ್.ಡಿ.ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಮಧುರಾ ಎಂ.ಜೋಶಿ ಹೇಳಿದರು.
ಕಾಗವಾಡ ತಾಲ್ಲೂಕು ಕೆ.ಎಲ್.ಇ. ಪದವಿ ಮಹಾವಿದ್ಯಾಲಯ ಶಿರಗುಪ್ಪಿಯಲ್ಲಿ ಬುಧವಾರ. ದಿ.17 ರಂದು ಎನ್. ಎಸ್.ಎಸ್.ಸಹಯೋಗದಲ್ಲಿ ಮಕರ ಸಂಕ್ರಾಂತಿಯ ಅಂಗವಾಗಿ ಹಮ್ಮಿಕೊಂಡಿದ್ದ "ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ" ವರ್ಣರಂಜಿತ ವಿಶೇಷ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಹಬ್ಬಗಳು ಪ್ರತಿಯೊಬ್ಬ ವ್ಯಕ್ತಿಗೂ ಖುಷಿ ನೀಡುತ್ತವೆ.ನಮ್ಮ ತನು ಮನ ಸಂತೈಸಲಿಕ್ಕೆ ನಮ್ಮ ಪೂರ್ವಜರು ಈ ಹಬ್ಬಗಳನ್ನು ಆಚರಣೆಗೆ ತಂದರು.ನಿಸರ್ಗಕ್ಕೆ ಹಾಗೂ ಭೂ ತಾಯಿಗೆ ಉನ್ನತ ಸ್ಥಾನ ಕೊಟ್ಟಿರುವ ಈ ನಮ್ಮ ದೇಶದಲ್ಲಿ ಸಂಸ್ಕೃತಿ ಹಾಗೂ ಸಂಸ್ಕಾರದಂತಹ ಉನ್ನತ ಮಾನವೀಯ ಮೌಲ್ಯಗಳು ಅಡಕವಾಗಿವೆ. ಈ ಹಬ್ಬಗಳು ಮಾನವ ಮಾನವರ ನಡುವೆ ಸಹಕಾರ ಸಹಬಾಳ್ವೆ ಸಹೋದರತೆ ಐಕ್ಯತೆಯನ್ನು ಗಟ್ಟಿಗೊಳಿಸುತ್ತವೆ ಎಂದು ವಿಶ್ಲೇಷಿಸಿದರು.
ಇದಕ್ಕೂ ಮೊದಲು ಆಗಮಿಸಿದ ಗಣ್ಯರು ಗಾಳಿಪಟ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಮಂತ್ರಿತ ಅತಿಥಿಗಳಾಗಿ ಆಗಮಿಸಿದ್ದ ಹಿಂದಿ ಪ್ರಾಧ್ಯಾಪಕ ಪ್ರೊ.ಎ.ಎಸ್.ಶಿರಗುಪ್ಪೆ ಮಾತನಾಡಿ " ವೈವಿಧ್ಯತೆಯಲ್ಲಿ ಐಕ್ಯತೆ ಹೊಂದಿರುವ ಈ ಭಾರತ ದೇಶದಲ್ಲಿ ಪ್ರತಿಯೊಂದು ಹಬ್ಬಕ್ಕೂ ಒಂದು ವಿಶೇಷ ವಿಶಿಷ್ಟವಾದ ಹಿನ್ನೆಲೆ ಇದೆ.ಬೇರೆ ಬೇರೆ ರಾಜ್ಯಗಳಲ್ಲಿ ಆಚರಿಸುವ ಹಬ್ಬಗಳು ನಮ್ಮ ಜ್ಞಾನದ ಕಣ್ಣು ತೆರೆಸಿ ಸನ್ಮಾರ್ಗದತ್ತ ಕೊಂಡೊಯ್ಯುವ ರಹದಾರಿಯನ್ನು ತೋರಿಸುತ್ತವೆ.ಪ್ರಸ್ತುತ ಈ ಸಂಕ್ರಮಣ ಎಂದರೆ ಬದಲಾವಣೆ ಏಳಿಗೆ ಎಂದು ಹೇಳಬಹುದು. ಬೆಳಕಿ ಕೊಡುವ ಹಬ್ಬವೇ ಸಂಕ್ರಾಂತಿ ಸೂರ್ಯ ಪಥ ಬದಲಿಸಿದಂತೆ ಮಾನವೀಯ ಮೌಲ್ಯಗಳನ್ನು ನಮ್ಮ ಅಂತರಂಗದಲ್ಲಿ ಅಳವಡಿಸಿಕೊಂಡು ನಮ್ಮ ಬದುಕು ಸಹ ಪರಿವರ್ತನೆಯ ಪಥದಲ್ಲಿ ಸಾಗಬೇಕೆಂದರು. ಸಮಾರಂಭದ ಘನ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಎಸ್.ಬಿ.ಪಾಟೀಲ ಅವರು ತಮ್ಮ ಆಶಯ ನುಡಿಗಳನ್ನಾಡುತ್ತ "ಭಾರತೀಯ ಹಬ್ಬಗಳು ಸಮಾಜದಲ್ಲಿ ನೆಮ್ಮದಿಯಾಗಿ ಸುಸಂಸ್ಕೃತರಾಗಿ ಜೀವಿಸುವ ದಾರಿ ತೋರಿಸಿಕೊಡುತ್ತವೆ. ನಿಮ್ಮೆಲ್ಲರ ಉತ್ಸಾಹ ಸಂತೋಷ ಇಮ್ಮಡಿಗೊಳಿಸಿದ ಈ ಸಮಾರಂಭ ನಿಮ್ಮ ಜೀವನದ ದಿಕ್ಕನ್ನೇ ಬದಲಿಸಲಿ ಎಂದು ಮನಃಪೂರ್ವಕವಾಗಿ ಆಶಿಸಿದರು. ವಾಣಿಜ್ಯ ವಿಭಾಗದ ಸಂಯೋಜಕ ಪ್ರೊ.ಎಲ್.ಎಸ್.ವಂಟಮೂರೆ,ಎಂ.ಎಸ್.ಎಸ್.ಕಾರ್ಯಕ್ರಮ ಅಧಿಕಾರಿ ಶ್ರೀ ಎಂ.ಎಸ್.ಕೌಲಗುಡ್ಡ ಕನ್ನಡ ಪ್ರಾಧ್ಯಾಪಕ ಡಾ.ಜಯವೀರ ಎ.ಕೆ.ಪ್ರೊ.ಬಿ.ಆರ್.ನರವಾಡೆ, ಪ್ರೊ.ರಾಧಿಕಾ ಯಾದವ,ಪ್ರೊ.ಎಸ್.ಎಸ್.ಮಿರ್ಜೆಗ್ರಂಥಪಾಲಕರಾದ ಪ್ರೊ.ಎಸ್.ಟಿ.ಬೆನಾಡೆ ಮತ್ತಿತರ ಗಣ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಕು.ಗಾಯತ್ರಿ ದಾಬಡೆ ಸ್ವಾಗತಿಸಿದರು. ಕು.ಸುಮಿತ್ರಾ ಮಾದಾಳೆ ನಿರೂಪಿಸಿದರು. ಕು.ಸುಶಾಂತ ಪಾಟೀಲ ವಂದಿಸಿದರು. ನಂತರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಸ್ತುತಪಡಿಸಿದ ವೈವಿಧ್ಯಮಯ ಸಾಂಸ್ಕೃತಿಕ ಗೀತ ನೃತ್ಯ ಸ್ಫರ್ಧೆಗಳು ಎಲ್ಲರ ಮನಸೂರೆಗೊಂಡವು. ಪ್ರೊ.ಶೈಲಶ್ರೀ ಚೌಗಲೆ ಹಾಗೂ ಪ್ರೊ. ಅಕಿವಾಟೆ ಅವರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.
*ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments