"ಕಾಡಿದ ಅದ್ಭುತ ಚಿತ್ರ ಮೂಡಿಸಿದ ಸಾಲುಗಳು. ನಾನು ನನ್ನ ಕವಿತೆಗಳಿಗೆ ಚಿತ್ರ ಹುಡುಕಿ ಹಾಕುತ್ತೇನೆ ಹೊರತು ಚಿತ್ರಕ್ಕಾಗಿ ಕವಿತೆ ಬರೆಯುವುದಿಲ್ಲ. ಆದರೆ ಈ ಚಿತ್ರ, ನೋಡುತ್ತ್ತಲೇ ಕಾಡಿಸಿ ಬರೆಯುವಂತೆ ಮಾಡಿತು. ಯುಗ ಯುಗಗಳ ಜಗದ ಕಥೆ-ವ್ಯಥೆಗಳ ಸಾರವನ್ನೇ ಬಿಂಬಿಸುವಂತಿರುವ ಈ ಚಿತ್ರಕ್ಕೆ, ಇದನ್ನು ಪರಿಕಲ್ಪಿಸಿ ಮೂಡಿಸಿದ ಆ ಅನಾಮಿಕ ಚಿತ್ರಕಾರನಿಗೊಂದು ತುಂಬಿದೆದೆಯ ಸಲ್ಯೂಟ್." - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ತಲೆಯೇ ಭಾರ..!
ಎಲ್ಲೆಲ್ಲೂ ಹಾರಬೇಕು
ನಮ್ಮದೇ ಬಾವುಟ.!
ಎಲ್ಲಡೆಯೂ ಸಿಗಬೇಕು
ನಮಗೇ ಕಿರೀಟ.!
ಸಕಲೆಡೆ ತೀರಬೇಕು
ನಮ್ಮದೇ ಹಟ.!
ಎಲ್ಲಡೆ ತೂಗಬೇಕು
ನಮ್ಮದೇ ಪಟ.!
ಲೋಕದೆಲ್ಲ ಸಂಕಟ
ನೋವುಗಳಿಗೆ ಕಾರಣ..
ಈ ಆತ್ಮರತಿ ಹಾರಾಟ
ಅಹಮ್ಮಿನ ಆರ್ಭಟ.!
ಈ 'ನಾನು' 'ನಾನೆಂಬ'
ಅಹಂಭಾವದಿ ತಲೆಯೇ
ಭುಜಕಾಗಿಹುದು ಭಾರ.!
ಬದುಕಿಗೇ ಸಂಚಕಾರ.!
ಎ.ಎನ್.ರಮೇಶ್. ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments