* ಬೆಳಗಿನ ಸೊಬಗು *

 *ಡಾ. ವಾಣಿಶ್ರೀ ಕಾಸರಗೋಡು*

*ಗಡಿನಾಡ ಕನ್ನಡತಿ*


ಬೆಳಗಿನ ಸೊಬಗು 



ಮೂಡಿ  ಬಂದಿರುವನು  ಬಾಸ್ಕರನು  ಬಾನoಗಳದಲಿ

ಮೋಡಿ ಮಾಡಿಹನು ನೋಟವನು ಬಲು  ಅಂದದಲಿ 

ನೋಡಿ  ಚಂದಮಾಮ  ಮರೆಯಾದನು ಮೋಡದಲಿ

ಜೋಡಿ ಕಣ್ಣುಗಳು ಮಿನುಗಿದವು ಕಂಡ ಆನಂದದಲಿ


ಕಿರಣ ಸ್ಪರ್ಶದಿoದ ಜಗ ಬೆಳಗಿತು ಶುಭೋದಯದಲಿ

ಧರೆಯ ಪ್ರಾoಗಣವು ಜಗಮಗಿಸಿತು ಮುಂಜಾವಿನಲಿ

ಗಿಡಮರವು ಚಿಗುರೊಡೆಯಿತು ಅರುಣೋದಯದಲಿ

ಹೂವರಳಿ ಪರಿಮಳ ಸೂಸಿತು ಬೆಳಗಿನ  ಸಡಗರದಲಿ


ಹಕ್ಕಿಗಳ ಚಿಲಿಪಿಲಿ ಕಲರವ ಧ್ವನಿಸಿತು ಸುಪ್ರಭಾತದಲಿ

ಕೋಗಿಲೆಯು ಸುಮಧುರ ಗಾನ ಹಾಡಿತು ಸಂತಸದಲಿ

ಸುಂದರವದ ದಿನವೊಂದು ಉದಯಿಸಿತು ಬುವಿಯಲಿ

ಸೇರಿತು ಸಂಭ್ರಮದ ದಿನವೊಂದು ಬದುಕಿನ ಪುಟದಲಿ

Image Description

Post a Comment

0 Comments