* ಆಗಂತುಕ (ಪತ್ತೇದಾರಿ ಕಾದಂಬರಿ*)

 ಆಗಂತುಕ (ಪತ್ತೇದಾರಿ ಕಾದಂಬರಿ)



ಸಂಚಿಕೆ -೭೨


ಹಿಂದಿನ ಸಂಚಿಕೆಯಲ್ಲಿ :


ಕರುಣನ್ ನ ತಮ್ಮನು  ನಿಮ್ಮ ತಂಗಿಯನ್ನು ಮದುವೆಯಾಗಲು ಅಪಹರಿಸಿದ್ದಾನೆಂದು ಹೇಳಿ ಅವನ ಕಡೆಯವನು ಕಿಶೋರ್ ಗೆ ಫೋನ್ ಮಾಡಿ ತಾನಿರುವ ಸ್ಥಳದ ಲೊಕೇಶನ್ ಕಳುಹಿಸಿದಾಗ, ಕಿಶೋರ್ ನಾನೀಗಲೇ ಬರುತ್ತೇನೆ ಎನ್ನುತ್ತಾನೆ


ಕಥೆಯನ್ನು ಮುಂದುವರೆಸುತ್ತಾ


ಕರುಣನ್ ನ ತಮ್ಮನ ಸಹಚರನು ಕಿಶೋರ್ ತಂಗಿಯನ್ನು ಅಪಹರಿಸಿ ಇಟ್ಟಿರುವ ಸ್ಥಳದ ಲೊಕೇಶನ್ ಕಳುಹಿಸಿ,  ಈಗಲೇ ಬೇಗ ಬನ್ನಿ ಇಲ್ಲದಿದ್ದರೆ ನಾಳೆಯೇ ನಿಮ್ಮ ತಂಗಿಯನ್ನು ಬಲವಂತವಾಗಿ ವಿವಾಹವಾದರೂ ಆಗಬಹುದೆಂದು ಹೇಳಿ ಯಾರಾದರೂ ಬರುತ್ತಾರೆಂದು ತಕ್ಷಣ ಫೋನ್ ಕಟ್ ಮಾಡುತ್ತಾನೆ. 

ಕಿಶೋರ್ ತನ್ನ ಸಹಚರರನ್ನು ಕರೆದು ಐದು ಕಾರುಗಳನ್ನು ಅರೇಂಜ್ ಮಾಡಲು ಹೇಳಿದಾಗ

ಏಕೆ ಬಾಸ್ ಎಂದು ಕೇಳಲು, 

ಈಗ ಅದೆಲ್ಲಾ ಹೇಳುವುದಕ್ಕೆ ಸಮಯವಿಲ್ಲ. ನಾನು ಹೇಳಿದ ಕಡೆ ನಡೆಯಿರಿ ದಾರಿಯಲ್ಲಿ ಎಲ್ಲವನ್ನೂ ಹೇಳುತ್ತೇನೆಂದಾಗ

ಆಯ್ತು ಬಾಸ್ ಎಂದು ಹೇಳಿ ಅವರ ಕಡೆಯವರಿಗೆಲ್ಲಾ ಸುದ್ದಿ ಮುಟ್ಚಿಸುತ್ತಾನೆ . ಯಾರಾದರೂ ಅವರ ಅಡಗುತಾಣಕ್ಕೆ ಬಂದರೆ ತಕ್ಷಣ ಬಾಸ್ ಗೆ ತಿಳಿಸಲು , ಕೆಲವರು ಮರವೇರಿದ್ದವರು , ಕೆಲವರು ಬಂಡೆಯ ಮೇಲಿದ್ದವರೆಲ್ಲಾ ದಡ ದಡನೆ ಬಂದು ಗುಂಪು ಗೂಡುತ್ತಾರೆ. 

ಎಲ್ಲರಿಗೂ ಈ ಜಾಗ ಬಿಟ್ಟು ರಸ್ತೆಗೆ ತೆರಳಿ ಎಂದಾಗ, 

ಕಿಶೋರ್ ಜೊತೆಗೆ ಎಲ್ಲರೂ  ಕುದುರೆಗಳ  ಮೇಲೇರಿ  ಬಂದು  ರಸ್ತೆಯ ಪಕ್ಕದಲ್ಲಿ ನಿಲ್ಲುತ್ತಾರೆ. 

ನಾಲ್ಕು ಜನರು ಪುನಃ ಕುದುರೆ ಏರಿ ಅವರ ಜಾಗಕ್ಕೆ ಹೋದ ಕೆಲವೇ ಕ್ಷಣಗಳಲ್ಲಿ ಆರು ಕಾರುಗಳು ಬಂದು ನಿಂತ ತಕ್ಷಣ

ಕಿಶೋರನು ಮೊದಲ ಕಾರಿನಲ್ಲಿ ಕುಳಿತು ನನ್ನನ್ಮು ಫಾಲೋ ಮಾಡಿ ಎಂದು ಹೇಳಿ ಕರುಣನ್ ನ ತಮ್ಮನಿರುವ ಲೊಕೇಶನ್ನನ್ನು ಡ್ರೈವರ್ ಗೆ ಕೊಟ್ಟು ಆದಷ್ಟೂ ಬೇಗ ಅಲ್ಲಿಗೆ ಹೋಗುವಂತೆ ಹೇಳುತ್ತಾನೆ.


ಡ್ರೈವರ್ ಕಾರನ್ನು ಚಾಲನೆ ಮಾಡುತ್ತಾ ಕಿಶೋರ್ ಕೊಟ್ಟ ಲೊಕೇಶನ್ ತಲುಪುತ್ತಿರುವಾಗ

ಇನ್ನೂ ಎಷ್ಚು ದೂರ ಹೋಗಬೇಕೆಂದು ಡ್ರೈವರ್ ನ ಕಿಶೋರ್ ಕೇಳಲು

ಸುಮಾರು ಅರ್ಧ ಕಿಲೋಮೀಟರ್ ಇದೆ ಎಂದ ತಕ್ಷಣ

ವಾಹನವನ್ನು ಇಲ್ಲೇ ನಿಲ್ಲಿಸು ನಾವೆಲ್ಲರೂ ಮುಂದೆ ನಡೆದುಕೊಂಡು ಹೋಗೋಣವೆಂದಾಗ

ಎಲ್ಲಾ ವಾಹನಗಳನ್ನು ಅಲ್ಲೇ ನಿಲ್ಲಿಸಿ , 

ತನಗೆ ಫೋನ್ ಮಾಡಿದ್ದ ಕರುಣನ್  ಕಡೆಯವನಿಗೆ ಕಿಶೋರ್ ಫೋನ್ ಮಾಡಿ ನಾವುಗಳು ಬಂದು ಅರ್ಧ ಕಿಲೋಮೀಟರ್ ದೂರದಲ್ಲಿದ್ದೇವೆ ಎನ್ನಲು 

ನಾನೀಗಲೇ ನಿಮ್ಮ ಬಳಿ ಬರುತ್ತೇನೆಂದು ಸಹಚರನು ಹೇಳಿ ಕಿಶೋರ್ ಇದ್ದಲ್ಲಿಗೆ ಬಂದು ನಡೆಯಿರಿ ಎನ್ನುತ್ತಾನೆ. 

ಯಾರೂ ಮೊಬೈಲ್ ಟಾರ್ಚ್ ಆನ್ ಮಾಡದೆ ನನ್ನ ಹಿಂದೆ ಬನ್ನಿರಿ ರಸ್ತೆ ಚೆನ್ನಾಗಿದೆ ಎಂದು ಹೇಳುತ್ತಾ ಮುನ್ನಡೆಯುತ್ತಿರುವಾಗ, 

ಎಲ್ಲರೂ ನಿಶ್ಯಬ್ದದಿಂದ ಅವನನ್ನು ಹಿಂಬಾಲಿಸುತ್ತಿರುತ್ತಾರೆ. 

ಕರುಣನ್ ಕಡೆಯವನು ಮಾತನಾಡಿ ನೀವು ಒಳಗೆ ಬಂದಾಗ ಯಾರಾದರೂ ಅಟ್ಯಾಕ್ ಮಾಡಲು ಬಂದರೆ ಮುಲಾಜಿಲ್ಲದೆ ಶೂಟ್ ಮಾಡಿ ಎಂದು ಹೇಳಿ ಅಲ್ಲಿಗೆ ಕರೆದುಕೊಂಡು ಬಂದಿದ್ದು, 

ಆಗಲೇ ರಾತ್ರಿ ಹನ್ನೆರಡು ಗಂಟೆಯಾಗಿದ್ದರಿಂದ ಎಲ್ಲರೂ ಗಾಢ ನಿದ್ರೆಯಲ್ಲಿದ್ದು ಕೆಲವರು ಮಾತ್ರ ರಾತ್ರಿ ಪಾಳೆಯ ಕೆಲಸ ಮಾಡುತ್ತಿರುತ್ತಾರೆ.

ಕಿಶೋರನ ಸಹಚರರು ಕರುಣನ್ ತಾಣಕ್ಕೆ ಬಂದವರಿಗೆ ಎಲ್ಲೆಲ್ಲೂ ಕತ್ತಲೆ ಆವರಿಸಿದ್ದು ಯಾವೊಂದು ವಸ್ತುವೂ ಕಾಣುತ್ತಿರುವುದಿಲ್ಲ. 

ಕರುಣನ್ ನ ಸಹಚರನು  ಕಿಶೋರ್ ಕಡೆಯವರನ್ನು ಹಿಂದಿನ ಬಾಗಿಲಿನಿಂದ ಕರೆದುಕೊಂಡು ಹೋಗಿ ಲೇಡಿ ಬಾಸ್ ಇದ್ದ ಸ್ಥಳಕ್ಕೆ ಬಿಟ್ಟಾಗ 

ಲೇಡಿ ಬಾಸ್ ಯಾರೋ  ಬಂದರೆಂದು ಯಾರು ನೀವು ಎಂದು ಜೋರಾಗಿ ಕೂಗಿಕೊಳ್ಳಲು

ನಾನು ಕಿಶೋರ್ ನಿಮ್ಮಣ್ಣ ಎಂದಾಗ

ಅಣ್ಣಾ ನೀನು ಬಂದಿದ್ದು ಧೈರ್ಯವಾಯಿತು ನನ್ನನ್ನು ಬೇಗ ಕರೆದುಕೊಂಡು ಹೋಗಣ್ಣಾ ಎನ್ನುತ್ತಾಳೆ.

ಇವಳ ಕೂಗಿಗೆ ಎಲ್ಲರಿಗೂ ಎಚ್ಚರವಾಗಿದ್ದು, ಕೆಲವರು ಯಾರೋ ಒಳನುಗ್ಗಿದ್ದಾರೆಂದು  ಗೋಡೆಗೆ ಇಟ್ಟಿದ್ದ ಉರಿಯುತ್ತಿರುವ ಪಂಜುಗಳನ್ನು ಎತ್ತಿಕೊಂಡು ಹೋ …. ಎನ್ನುತ್ತಾ …ಯಾರೋ ನಮ್ಮ ಪಾಳಯಕ್ಕೆ ನುಗ್ಗಿದ್ದಾರೆ ಎಲ್ಲರೂ ಎಚ್ಚರಗೊಳ್ಳಿ ಎಂದು ಕೂಗುತ್ತಾ ಮಲಗಿದ್ದವರನ್ನು ಎಬ್ಬಿಸಲು ಓಡಾಡುತ್ತಿರುತ್ತಾರೆ. 

ಆಗ ಪಂಜು ಹಿಡಿದಿದ್ದವನನ್ನು ಗುರಿ ಮಾಡಿ ಕಿಶೋರ್ ಶೂಟ್ ಮಾಡಿದಾಗ ಅವನು ಅಲ್ಲೇ ಕುಸಿದು ಬಿದ್ಜಾಗ ಕೈಯ್ಯಲ್ಲಿ ಹಿಡಿದಿದ್ದ ಪಂಜು ನೆಲಕ್ಕೆ ಬೀಳುತ್ತದೆ.

ಆ ಪಂಜನ್ನು ಕಿಶೋರ್ ಎತ್ತಿಕೊಂಡು ಮುನ್ನುಗ್ಗಿ ಬರುತ್ತಿರುವಾಗ,

ಗುರಿಯಿಲ್ಲದೆ ಕತ್ತಲಲ್ಲಿ ಹಾರಿಸಿದ ಒಂದು ಗುಂಡು ಯಾರಿಗೂ ತಾಕದೆ ನೇರವಾಗಿ ಗೋಡೆಗೆ ಹೋಗಿ ಬಡಿಯುತ್ತದೆ. 

ಅದೇ ನೇರಕ್ಕೆ ಕಿಶೋರ್ ಗುಂಡು ಹಾರಿಸಿದಾಗ

ಅಯ್ಯೋ ಎಂಬ ಶಬ್ದ ಕೇಳಿಬಂದ ನಂತರ ದೊಪ್ಪೆಂದು ಶಬ್ದ ಬರುತ್ತದೆ . ಇದರಿಂದ ಇನ್ನೊಬ್ಬ ಸತ್ತನೆಂದು ತಿಳಿದು ಕಿಶೋರ್ ಜೊತೆ ಮುಂದೆ ಬರುತ್ತಿರುವಾಗ 

ಎದುರಿಗೆ ಆರು ಪಂಜುಗಳನ್ನು ಹಿಡಿದು ಆರು ಜನರು ಬರುತ್ತಿರುವುದನ್ನು ನೋಡಿದ ಕಿಶೋರ್ ತನ್ನ ಗನ್ ನಿಂದ ಒಂದೇ ಸಮನೆ ಗುಂಡು ಹಾರಿಸಿದಾಗ ಎಲ್ಲರೂ ನೆಲಕ್ಕುರುಳಿದಾಗ, ಅವರ ಕೈಲಿದ್ದ ಪಂಜುಗಳು ಚೆಲ್ಲಾ ಪಿಲ್ಲಿಯಾಗಿ ಬೀಳುತ್ತವೆ.

ತಕ್ಷಣ ಕಿಶೋರನ ಕಡೆಯವರು ಅದನ್ನು ಎತ್ತಿಕೊಂಡು ಬರುತ್ತಿರುವಾಗ

ನಾಲ್ಕು ಜನರು ಕತ್ತಲಲ್ಲಿ ಯದ್ವಾತದ್ವ ಗುಂಡು ಹಾರಿಸಿಕೊಂಡು ಬರುತ್ತಿದ್ದು  ಈ ಗುಂಡುಗಳು ಕಿಶೋರ್ ಕಡೆಯವರಿಗೆ ತಗುಲಿ ನಾಲ್ಕು ಜನ ಕೆಳಗೆ ಬಿದ್ದು ಅಸುನೀಗುತ್ತಾರೆ. 

ಪಂಜು ಹಿಡಿದುಕೊಂಡೇ ಕಿಶೋರನು ಅವರ ಮೂಗಿನ ಬಳಿ ಬೆರಳನ್ನಿಟ್ಟಾಗ ಉಸಿರಾಡುತ್ತಿರುವುದು ತಿಳಿಯುವುದಿಲ್ಲ. ಓ …. ನಮ್ಮವರೂ ಸತ್ತರೆಂದುಕೊಂಡು ಎದೆಗುಂದದೆ 

ಕಿಶೋರ್ ಕಡೆಯವರು ಗೋಡೆಯ ಮರೆಯಲ್ಲಿ ನಿಲ್ಲುತ್ತಾರೆ. 

ಗುಂಡಿನ ಶಬ್ದ ನಿಂತ ನಂತರ, ಕಿಶೋರ್ ಕಡೆಯವರು ಕರುಣನ್  ಕಡೆಯವರು ನಿಂತಿದ್ದ ಕಡೆ ಶೂಟ್ ಮಾಡಿದಾಗ 

ಅಯ್ಯಯ್ಯೋ ಎಂದು ಇಬ್ಬರು ಕೂಗುತ್ತಾ ನೆಲಕ್ಕುರುಳುತ್ತಾರೆ.

ಆ ವೇಳೆಗೆ ಕಿಶೋರ್ ತನ್ನ ತಂಗಿಯ ರೂಮಿನ ಬಳಿ ಹೋಗಿ ತನ್ನ ಕೈಲಿದ್ದ ಗನ್ ನಿಂದ ಬೀಗಕ್ಕೆ ಹೊಡೆದಾಗ ಬೀಗ ಒಡೆದು ಹೋದಾಗ ಬಾಗಿಲನ್ನು ತೆಗೆದು ಲೇಡಿ ಬಾಸ್ ನನ್ನು ಹೊರಗೆ ಕರೆದುಕೊಂಡು ಬಂದು ಇನ್ನು ಯಾರಾದರೂ ಇದ್ದಾರಾ ಎಂದು ಕತ್ತಲಲ್ಲಿ ಅವಿತಿಟ್ಟುಕೊಂಡಿರುವಾಗ

ನಾಲ್ಕು ಜನರು ಪಂಜನ್ನು ಹಿಡಿದು ನಾವು ನಿಮಗೆ ಸರಂಡರ್ ಆಗಿದ್ದೇವೆ ಶೂಟ್ ಮಾಡಬೇಡಿರಿ ಎಂದು ಕೂಗುತ್ತಾ ಬಂದಾಗ

ನಿಮ್ಮ ಕೈಯ್ಯನ್ನು ಮೇಲಕ್ಕೆ ಎತ್ತಿ ನನ್ನ ಕಡೆ ಒಬ್ಬೊಬ್ಬರಾಗಿ ಬನ್ನಿ ಎನ್ನಲು

ನಾಲ್ಕು ಜನರೂ ಕಿಶೋರ್ ಬಳಿ ಬರುತ್ತಾರೆ.

ಘಾಡ ನಿದ್ರೆಯಲ್ಲಿದ್ದ ಕರುಣನ್ ತಮ್ಮನಿಗೆ ಎಚ್ಚರವಾದಾಗ ತನ್ನ ಪಾಳಯದಲ್ಲಿ ಏನೋ ಅನಾಹುತವಾಗಿದೆಯೆಂದೆನಿಸಿ ಅವನು ಒಂದು ಕೈಯ್ಯಲ್ಲಿ ಪಂಜು ಇನ್ನೊಂದು ಕೈಯ್ಯಲ್ಲಿ ಗನ್ ಹಿಡಿದುಕೊಂಡು ನನ್ನ ಪಾಳೆಯಕ್ಕೆ ನುಗ್ಗಿರುವವರು ಯಾರೆಂದು ಕೇಳುತ್ತಾ ಬರುತ್ತಿರುವಾಗ, 

ಸರಂಡರ್ ಆದವರು ಮಾತನಾಡಿ, ಅವನೇ ಕರುಣನ್ ನ ತಮ್ಮ ಹೇಡಿ ಅವನನ್ನು ಶೂಟ್ ಮಾಡಿರಿ ಎಲ್ಲರೂ ನಿಮ್ಮವರಾಗುತ್ತಾರೆ ಎನ್ನಲು,

ಕಿಶೋರ್ ನೇರವಾಗಿ ಕರುಣನ್ ತಮ್ಮನಿಗೆ ಶೂಟ್ ಮಾಡಲು ಹೋದಾಗ ಗನ್ ನಲ್ಲಿ ಗುಂಡುಗಳು ಖಾಲಿಯಾಗಿರುತ್ತದೆ. 

ಕತ್ತಲಲ್ಲಿ ಅವನ ಹಿಂದಿನಿಂದ ಹೋಗಿ ಬೆನ್ನಿಗೆ ಗುದ್ದಿದಾಗ 

ಅವನ ಕೈಲಿದ್ದ ಪಂಜು ಕೆಳಕ್ಕೆ ಬೀಳುತ್ತದೆ. 

ನಂತರ ಕಿಶೋರ್ ಹಾಗೂ ಕರುಣನ್ ತಮ್ಮನಿಗೆ ದೊಡ್ಡ ಹೊಡೆದಾಟವಾಗಿ. ಕಡೆಗೆ ಕಿಶೋರ್ ಕೈ ಮೇಲಾಗಿದ್ದು. ಜೋರಾಗಿ ಅವನ ಎದೆಗೆ ಗುದ್ದಿದಾಗ ಕರುಣನ್ ನ ತಮ್ಮ ರಕ್ತ ಕಾರುತ್ತಾ , ಎಲ್ಲರೂ ಇಲ್ಲಿಂದ ತಪ್ಪಿಸಿಕೊಳ್ಳಿ ಯಾರೋ ನಮ್ಮ ಪಾಳೆಯಕ್ಕೆ ನುಗ್ಗಿದ್ದಾರೆಂದು ಜೋರಾಗಿ ಕೂಗುತ್ತಾ  ಅಸುನೀಗುತ್ತಾನೆ. 

ಕರುಣನ್ ನ ತಮ್ಮ ಕೂಗಿದ್ದನ್ನು ಕೇಳಿಸಿಕೊಂಡ ಇನ್ನೂ ಉಳಿದವರು ಹೊರಗೆ ಬಂದಾಗ, 

ಕಿಶೋರ್ ಕಡೆಯವರೂ ಹೊರಗೆ ಬರುತ್ತಾರೆ.

ಹೊರಗೆ ಬಂದಿದ್ದ ಕರುಣನ್ ಕಡೆಯವರಲ್ಲಿ ಒಬ್ಬನು ಇನ್ನೂ ಒಳಗಡೆ ಬೇರೆ ಯಾರೋ ಇರುವರೆಂದು ತಿಳಿದು,  ತನ್ನ ಕೈಲಿದ್ದ ಕೈ ಬಾಂಬ್ ಎಸೆಯುತ್ತಾನೆ. ಆಗ  ಅದು  ಢಂ ಎಂದು ಜೋರಾಗಿ ಶಬ್ದ ಮಾಡುತ್ತಾ ಸ್ಪೋಟಿಸಿದಾಗ  ಬೆಂಕಿಯುಂಡೆ ಮೇಲಕ್ಕೆದ್ದು , ಎಲ್ಲಾ ಕಡೆಯೂ ಆವರಿಸುತ್ತಾ , ಕರುಣನ್ ಶೇಖರಿಸಿ ಇಟ್ಟಿದ್ದ ಕೈ ಬಾಂಬ್ ಗಳ ಕೋಣೆಗೂ ಜ್ವಾಲೆಯು ನುಗ್ಗಿ ಆ ಸ್ಥಳವೆಲ್ಲಾ ಹತ್ತಿ ಉರಿಯುತ್ತಿದ್ದು, ಜೋರಾಗಿ ಶಬಿದ ಮಾಡುತ್ತಾ ಅದರ ಜ್ವಾಲೆ ಆಕಾಶದೆತ್ತರಕ್ಕೆ ಪ್ರಜ್ವಲಿಸುತ್ತಿರುತ್ತದೆ. ಆ ಬೆಂಕಿಗೆ  ಕರುಣನ್ ಇದ್ದ ಪ್ರದೇಶವೆಲ್ಲಾ ಸುಟ್ಟು ಕರಕಲು ಆಗುತ್ತಿದ್ದು, ಅದರಲ್ಲಿ ಗುಂಡಿಗೆ ಬಲಿಯಾದವರ  ದೇಹಗಳು ಸುಟ್ಟು ಕರಕಲಾಗುತ್ತವೆ.

ಸರೆಂಡರ್ ಆದ ನಾಲ್ಕು ಜನರೂ ಕಿಶೋರ್ ಜೊತೆ ಹೆಜ್ಜೆ ಹಾಕುತ್ತಿರುವಾಗ,

ಹಿಂದಿನಿಂದ ಯಾರೋ ಕೂಗಿದ ಶಬ್ದ ಕೇಳಿಸಿ ಹಿಂದಿರುಗಿದಾಗ, 

ಉರಿಯುತ್ತಿರುವ ಬೆಳಕಿನಲ್ಲಿ ನಾಲ್ಕು ಜನರೂ ಗನ್ ಹಿಡಿದಿರುವುದನ್ನು ಕಂಡ ಕಿಶೋರ್ ಈಗೇನುಮಾಡುವುದೆಂದು ಯೋಚಿಸಿ,

ನೀವು ನಾಲ್ಕೇ ಜನ ಉಳಿದಿರುವುದು ನಿಮ್ಮ ಜೀವ ಉಳಿಸಿಕೊಳ್ಳಬೇಕಾದರೆ ನಿಮ್ಮ ಕೈಲಿರುವ ಗನ್ ಗಳನ್ನುಪಕ್ಕಕ್ಕೆ ಎಸೆದು ನನ್ನ ಜೊತೆಗೆ ಬನ್ನಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದಾಗ

ಇಲ್ಲಾ ನಾವುಗಳು ಬರುವುದಿಲ್ಲ ನಮ್ಮ ಬಾಸ್ ನನ್ನು ಕೊಂದವನ ಜೊತೆ ನಾವುಗಳು ಬರುವುದಿಲ್ಲವೆನ್ನುತ್ತಾರೆ.

ಕರುಣನ್ ಕಡೆಯಿಂದ ಕಿಶೋರ್ ಕಡೆಗೆ ಬಂದಿದ್ದ ನಾಲ್ಕು ಜನರೂ ನಾವು ಇವರ ಜೊತೆ ಹೋಗುತ್ತಿದ್ದೇವೆ ನೀವೂ ಬಂದು ಬಿಡಿ ನಾಲ್ಕು ಜನ ಏನೂ ಮಾಡುವುದಕ್ಕೆ ಆಗುವುದಿಲ್ಲವೆಂದಾಗ,

ಇಲ್ಲ ನಾವುಗಳು ಜೀವ ಬಿಡುತ್ತೇವೆ ವಿನಃ ನಿಮ್ಮ ಕಡೆ ಬರುವುದಿಲ್ಲವೆಂದು ಖಡಾ ಖಂಡಿತವಾಗಿ ಹೇಳಲು, 

ಆಯ್ತು ನಿಮ್ಮಿಷ್ಟವೆಂದು ಹೇಳಿ ಎರಡು ಹೆಜ್ಜೆ ಮುಂದೆ ಬಂದು , ತಕ್ಷಣ ಕಿಶೋರ್ ಹಿಂತಿರುಗಿ ನೋಡುವ ವೇಳೆಗೆ

ನಿಮ್ಮ ಜೊತೆ ಬರುವುದಿಲ್ಲವೆಂದು ಹೇಳಿದ್ದ ಒಬ್ಬನು ಇನ್ನೇನು ಕೈಲಿದ್ದ ಕೈ ಬಾಂಬನ್ನು ಎಸೆಯಬೇಕು ಎನ್ನುವಷ್ಟರಲ್ಲಿ

ಕಿಶೋರ್ ತಕ್ಷಣ ತನ್ನ ಗನ್ ನಿಂದ ಶೂಟ್ ಮಾಡುತ್ತಾನೆ. 

ಕೈನಲ್ಲಿ ಹಿಡಿದಿದ್ದ ಕೈ ಬಾಂಬು ನೆಲಕ್ಕೆ ಬಿದ್ದಾಗ ಪಕ್ಕದಲ್ಲಿದ್ದವನು ತಕ್ಷಣ ಅದನ್ನು ತೆಗೆದುಕೊಂಡು ಕಿಶೋರ್ ಕಡೆ ಎಸೆದಾಗ

ಕಿಶೋರ್ ಮುನ್ನುಗ್ಗಿ ಅದನ್ನು ಕ್ಯಾಚ್ ಹಿಡಿದು ಅವರ ಕಡೆಯೇ ಎಸೆದಾಗ

ಅದು ಸ್ಪೋಟಿಸಿ    ಎಲ್ಲರೂ ಸುಟ್ಟುಕರಕಲಾಗುತ್ತಾರೆ.

ನಮ್ಮ ವೈರಿ ಪಡೆ ದ್ವಂಸವಾಯಿತೆಂದುಕೊಂಡು ಸಮಾಧಾನದಿಂದ ಕಾರಿನಲ್ಲಿ ಕುಳಿತುಕೊಂಡು ಎಲ್ಲರೂ ಬಂದ್ರಾ ಎಂದು ಎಲ್ಲಾ ಕಾರುಗಳನ್ನು ನೋಡಲು ಎರಡು ಕಾರುಗಳು ಜನರಿಲ್ಲದೆ ಖಾಲಿ ಇರುತ್ತದೆ. 

ಏಕೆ ಇನ್ನೂ ಯಾರೂ ಬಂದಿಲ್ಲವೆಂದಾಗ

ಇಲ್ಲಾ ಬಾಸ್ ಎಲ್ಲರೂ ಬಂದಿದ್ದಾರೆನ್ನುತ್ತಾರೆ. 

ಈ ಎರಡು ಕಾರುಗಳು ಖಾಲಿ ಇದೆ ಎನ್ನಲು

ಅವರೆಲ್ಲರೂ ಮೃತರಾಗಿದ್ದಾರೆ ಎಂದಾಗಲೇ 

ಕಿಶೋರನಿಗೆ ತಮ್ಮವರಲ್ಲಿ ಹತ್ತು ಜನರು ಮೃತಪಟ್ಟಿದ್ದು ತಿಳಿಯುತ್ತದೆ. ಛೇ ಅವನ ಕೆಟ್ಟ ಹಠದಿಂದ ಇಬ್ಬರ ಕಡೆಯೂ ಜನಗಳನ್ನು ಕಳೆದುಕೊಳ್ಳುವಾಯಿತೆಂದು ಪಶ್ಚಾತ್ತಾಪ ಪಡುತ್ತಾನೆ.



ಮುಂದುವರೆಯುತ್ತದೆ 


 ಡಾ. ಎನ್ ಮುರಳೀಧರ್

ವಕೀಲರು ಹಾಗೂ ಸಾಹಿತಿ

ನೆಲಮಂಗಲ

Image Description

Post a Comment

0 Comments