* ಶ್ರೀಧರ ಗೌಡರ ಗೆ ಪಿಎಚ್.ಡಿ *

 ಶ್ರೀಧರ ಗೌಡರ ಗೆ ಪಿಎಚ್.ಡಿ .



ಕೂಡಲಸಂಗಮ : ಕೂಡಲಸಂಗಮದ ಸಕಾ೯ರಿ ಪ್ರೌಡಶಾಲೆಯ ಶಿಕ್ಷಕರಾದ ಶ್ರೀಧರ ಗಂಗನಗೌಡ ಗೌಡರಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ. ವಿಜಯಪುರದ ಮಾನ್ಯತಾ ಸಂಸ್ಥೆಯಾದ ವಚನ ಪಿತಾಮಹ ಡಾ.ಫ.ಗು ಹಳಕಟ್ಟಿ  ಸಂಶೋಧನಾ ಕೇಂದ್ರದ ಮಾಗ೯ದಶಕರಾದ ಸಿಂದಗಿಯ ಜಿ.ಪಿ.ಪೋರವಾಲ್ ಕಲಾ ವಾಣಿಜ್ಯ ಹಾಗೂ ವ್ಹಿ.ವ್ಹಿ. ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಮಾ ಎಸ್. ನಿಣಿ೯ ಇವರ ಮಾಗ೯ದಶನದಲ್ಲಿ " ತೊಂಟದಾಯ೯ ಮಠದ ಸಮಾಜಮುಖಿ ಚಳುವಳಿಗಳು: ವಿಶ್ಲೇಷಣಾತ್ಮಕ ಅಧ್ಯಯನ " ವಿಷಯದ ಕುರಿತು ಪ್ರಬಂಧ ಮಂಡನೆ ಮಾಡಿ ಪಿಎಚ್ಡಿ ಪದವಿಗೆ ಭಾಜನರಾದ ಇವರಿಗೆ ಬಸವಧರ್ಮ ಪೀಠದ ಉಪಾಧ್ಯಕ್ಷರಾದ ಪೂಜ್ಯಶ್ರೀ ಮಹದೇಶ್ವರ ಸ್ವಾಮಿಜಿ , ಕುಟುಂಬ ವರ್ಗ, ಸ್ನೇಹಿತರು, ವಿಜಯಪುರ  ಮಾನ್ಯಾತಾ ಕೇಂದ್ರದ ಕಾಯದಶಿ೯ಗಳಾದ ಡಾ.ಎಂ.ಎಸ್. ಮಧಬಾವಿ, ಸಂಯೋಜನಾಧಿಕಾರಿಗಳಾದ ಡಾ.ವಿ.ಡಿ.ಐಹೊಳ್ಳಿ,  ಕೂಡಲಸಂಗಮದ ಸಕಾ೯ರಿ ಪ್ರೌಢ ಶಾಲೆಯ ಮುಖ್ಯಗುರುಗಳಾದ ಶ್ರೀ ಸಿ.ಎಸ್.ಚಟ್ಟೇರ ಹಾಗೂ ಸಿಬ್ಬಂದಿವರ್ಗ ಹಾಗೂ ಹಿರೇಓತಗೇರಿಯ ಸಕಾ೯ರಿ ಪ್ರೌಢಶಾಲೆಯ ಮುಖ್ಯಗುರುಗಳಾದ ಶ್ರೀ ಪಿ.ಎಚ್.ಹುನಗುಂದ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಅಭಿನಂಧನೆ ಸಲ್ಲಿಸಿದ್ದಾರೆ.

ವರದಿ :ಡಾ. ವಿಲಾಸ ಕಾಂಬಳೆ

ಹಾರೂಗೇರಿ 

Image Description

Post a Comment

0 Comments