*ಶುಭೋದಯ*
*ವಚನ*
ಏನಿದು ಬೇಗೆ ಸಾದಿಸುವರು ಬರೀ ಹಗೆ,,
ಕವಿದ ಕಣ್ಣು ಕಾಣಿಸದಂತಹ ದ್ವೇಷದ ಹೊಗೆ,,
ಮನ ನೋಯಿಸಿ ನಲುಗಿಸಿ ಗಹಗಹಿಸೋ ನಗೆ,,
ಎಲ್ಲರೂ ತೊಟ್ಟಿಹರು ಸೋಗಿನ ಉಡುಗೆ,,
ಹೃದಯವಂತಿಕೆ ಸತ್ಯ ನ್ಯಾಯ ನಿಷ್ಠೆಯಾ ಕಗ್ಗೊಲೆ,
ಕಪಟ ನಾಟಕ ಕುಟಿಲತೆಗಳಿಗೆ ಭಾರೀ ಬೆಲೆ,,
ಶಿವಹರನೇ ಹೇಳು ಇಲ್ಲಿ ಬರೀ ಮಾನವೀಯತೆಯ ಕೊಲೆಯೇ??
ನೀ ನೋಡುತ ಸುಮ್ಮನಿರುವುದು ಸರಿಯೇ ದೇವಾ??
*ಡಾ ಅನ್ನಪೂರ್ಣ ಹಿರೇಮಠ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments