* ಸಂಘರ್ಷದ ಬೆಳಕು ಮತ್ತು ಕ್ರಾಂತಿಯ ಬೆಳಕು ಕೃತಿಗಳ ಲೇಖಕ, ಯುವ ಸಾಹಿತಿ ಸುಬ್ಬಣ್ಣಗೆ:ರಮಾಬಾಯಿ ಅಂಬೇಡ್ಕರ್ ಆದರ್ಶ ದಂಪತಿ ಪ್ರಶಸ್ತಿ*

*ಸಂಘರ್ಷದ ಬೆಳಕು  ಮತ್ತು ಕ್ರಾಂತಿಯ ಬೆಳಕು ಕೃತಿಗಳ ಲೇಖಕ, ಯುವ ಸಾಹಿತಿ ಸುಬ್ಬಣ್ಣಗೆ:ರಮಾಬಾಯಿ ಅಂಬೇಡ್ಕರ್ ಆದರ್ಶ ದಂಪತಿ ಪ್ರಶಸ್ತಿ*




ಬೀದರ ಪ್ರತಾಪ ನಗರದ ಸರಕಾರಿ ನೌಕರರ ಸಮುದಾಯ ಭವನದಲ್ಲಿ ಕಲ್ಯಾಣ ಕರ್ನಾಟಕ ಪ್ರೌಢ ಶಾಲಾ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ತು ಬೆಂಗಳೂರು ಜಂಟಿಯಾಗಿ 7-1-2024 ರಂದು ಸಂಜೆ 5 ಗಂಟೆಯಿಂದ ರಾತ್ರಿ 9 ಘಂಟೆಯವರೆಗೆ ಜರುಗಿರುವ ಸಮಾರಂಭದಲ್ಲಿ ಯುವ ಸಾಹಿತಿ ಸುಬ್ಬಣ್ಣ ಕರಕನಳ್ಳಿ ಬರೆದಿರುವ ಕ್ರಾಂತಿಯ ಬೆಳಕು, ಸಂಘರ್ಷದ ಬೆಳಕು ಕೃತಿಯನ್ನು ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ್ ಮಾಜಿ ಶಾಸಕರಾದ ಶರಣಪ್ಪ ಮಟ್ಟೂರು ಕಲ್ಯಾಣ ಕರ್ನಾಟಕ ಪ್ರೌಢ ಶಾಲಾ ಶಿಕ್ಷಕರ ಸಂಘದ ಸಂಸ್ಥಾಪಕರಾದ ಅಧ್ಯಕ್ಷರಾದ ಪಾಂಡುರಂಗ ಬೆಲ್ದಾರ್  ಡಾ. ಕಾಶಿನಾಥ ಚಲ್ವಾ, ಸರ್ಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ರಾಜೇಂದ್ರ ಕುಮಾರ ಗಂದಗೆ, ಅರ್ಚಸಮಿತಿ ಮಾತೆ ಶಿಕ್ಷಕರ  ವಿವಿಧ ಅಧ್ಯಕ್ಷರುಗಳಾದ ಗೋವಿಂದ ಪೂಜಾರಿ ನಿಸಾರ ಖಾನ, ವಿಶ್ವನಾಥ ಕಟ್ಟಿಮನಿ, ಪ್ರತೇಶ ಬಣಗಾರ, ಶಿವರಾಜ ಕಪಲಾ, ವಿಷ್ಣುಕಾಂತ ಥಾಕುರ್, ಶಿವಕುಮಾರ ಸದಾಫುಲೆ, ಸುರೇಶ ಠಾಳೆ, ವೈಜಿನಾಥ ಸಾಗರ, ನರಸಮ್ಮಪಾಟೀಲ್, ಸಂಘಶೆಟ್ಟಿ ಹಲಬರ್ಗೆ,ಪ್ರೊ ಶಿವಶಂರಣಪ್ಪಾ ಹುಗ್ಗೆ ಪಾಟೀಲ್, ಎಂ ಡಿ ಶಾ ಬೊದ್ದಿನ ಕೃತಿಯನ್ನು ಬಿಡುಗಡೆ ಮಾಡಿದರು. ಪ್ರಿಯಾಂಕಾ ಕರನಕಳ್ಳಿ ಅವರಿಗೆ ರಾಜ್ಯ ಮಟ್ಟದ ರಮಾ ಅಂಬೇಡ್ಕರ್ ಆದರ್ಶ ದಂಪತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಸುಬ್ಬಣ್ಣ ಯುವ ಸಾಂಸ್ಕೃತಿಕ ಚಿಂತಕ, ಸಾಹಿತ್ಯ ಕೃಷಿಕರಿಗಾಗಿ ಸಮಾಜ ಕಾರ್ಯ ಮಾಡುವುದಕ್ಕೆ ಅವರ ಪತ್ನಿ ಸಾಥ ನೀಡುತ್ತಿದ್ದಾರೆ. ಈ ಯುವ ಜೋಡಿಗಳಲ್ಲಿ ಬುದ್ಧ ಬಸವ ಅಂಬೇಡ್ಕರ್, ಕನಕದಾಸ, ಸಾವಿತ್ರಿಬಾಯಿ ಫುಲೆ, ಮಹಾತ್ಮ ಜ್ಯೋತಿರಾವ್ ಫುಲೆ, ಅವರ ತತ್ವ  ಸಿದ್ದಾಂತಗಳು ಮೈಗೂಡಿಸಿಕೊಂಡು ಬಡ ಕುಟುಂಬದ ದಂಪತಿ ರಾಜ್ಯಮಟ್ಟದ ಸಾಂಸ್ಕೃತಿಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆಂದು  ಕರ್ನಾಟಕ ಪ್ರೌಢ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಸೂರ್ಯಕಾಂತ ಶಿಂಗೆ ತಮ್ಮ ಅಭಿಲಾಶವನ್ನು ವ್ಯಕ್ತಪಡಿಸಿದರು.


ವರದಿ :ಡಾ. ವಿಲಾಸ ಕಾಂಬಳೆ

ಹಾರೂಗೇರಿ

Image Description

Post a Comment

0 Comments