ಎ.ಎಮ್.ಗೊರಚಿಕ್ಕನವರಗೆ ಪಿಎಚ್.ಡಿ
ಕೂಡಲಸಂಗಮ : ಬೇವೂರಿನ ಪಿ.ಎಸ್.ಎಸ್.ಕಾಲೇಜಿನ ಇತಿಹಾಸ ಉಪನ್ಯಾಸಕ ಆದಪ್ಪ ಮಲ್ಲಪ್ಪ ಗೊರಚಿಕ್ಕನವರ ಇವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ. ಮಾನ್ಯತಾ ಸಂಸ್ಥೆಯಾದ ವಿಜಯಪುರದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ಸಂಶೋಧನಾ ಮಾಗ೯ದಶ೯ಕರಾದ ಸಿಂದಗಿಯ ಜಿ.ಪಿ.ಪೋರವಾಲ್ ಕಲಾ , ವಾಣಿಜ್ಯ ಹಾಗೂ ವ್ಹಿ.ವ್ಹಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಮಾ ಎಸ್.ನಿಣಿ೯ ಅವರ ಮಾಗ೯ದಶ೯ನದಲ್ಲಿ." ವೀರಶೈವ ಮತ್ತು ಲಿಂಗಾಯತ ಧರ್ಮ: ಚಾರಿತ್ರಿಕ ವಿಶ್ಲೇಷಣೆ" ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿ ಪಿ.ಎಚ್.ಡಿ ಪದವಿಗೆ ಭಾಜನರಾದ ಇವರಿಗೆ ಕುಟುಂಬ ವರ್ಗ, ಸ್ನೇಹಿತರು,ವೃತ್ತಿ ಬಾಂಧವರು, ವಿಜಯ ಪುರ ಮಾನ್ಯತಾ ಕೇಂದ್ರದ ಕಾಯ೯ದಶಿ೯ಗಳಾದ ಡಾ.ಎಂ.ಎಸ್ ಮಧಭಾವಿ, ಸಂಯೋಜನಾಧಿಕಾರಿಗಳಾದ ಡಾ.ವಿ.ಡಿ.ಐಹೊಳ್ಳಿ, ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಜಗದೀಶ ಗು. ಭೈರಮಟ್ಟಿ, ಹಾಗೂ ಬೋಧಕ ಭೋಧಕೇತರ ಸಿಬ್ಬಂದಿ ವಗ೯ ಅಭಿನಂಧನೆ ಸಲ್ಲಿಸಿದ್ದಾರೆ.
ವರದಿ :ಡಾ. ವಿಲಾಸ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments