* ಸುಗ್ಗಿ ಸಂಕ್ರಾಂತಿ *

                 

*ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು*🙏🙏💐💐



*ಸುಗ್ಗಿ ಸಂಕ್ರಾಂತಿ*




ಸುಗ್ಗಿಯ ಹಬ್ಬವಿದು ಸಂಕ್ರಾಂತಿ 

ತಂದಿತು ನಮ್ಮಲ್ಲಿ ಸುಖ ಶಾಂತಿ

ಎಳ್ಳೆಣ್ಣೆಯ ಮಜ್ಜನ ಮಾಡುತ

ತನುವಲಿ ಮೂಡಿತು ನವ ಕಾಂತಿ.


ಮಾಗಿಯ ಚಳಿ ಇಳಿವ ಹೊತ್ತು

ರವಿಯ ಕಿರಣಗಳು ನೇರಕ್ಕೆ ಬಿತ್ತು 

ಚೈತ್ರದ ಚಿಗುರು ಮೂಡುವ ಹೊತ್ತು 

ಭೂರಮೆ ವಸಂತಗೆ ಸ್ವಾಗತವಿತ್ತು


ದಕ್ಷಿಣದ ಸೂರ್ಯ ಉತ್ತರದೆಡೆ

ಹೆಜ್ಜೆ ಹಾಕುವ ಸಂಕ್ರಾಂತಿ ಎಂದೊಡೆ

ಚಳಿಯಲ್ಲಿ ನಡುಗಿದ ತನುವೆಲ್ಲ

ನಿಟ್ಟುಸಿರು ಬಿಟ್ಟಿತು ನೇಸರನ ಕೃಪೆಗೆ


ಸುಗ್ಗಿಯ ಸಂಭ್ರಮ ನಾಡೆಲ್ಲ

ರೈತರ ಉಲ್ಲಾಸಕೆ ಪಾರವೇ ಇಲ್ಲ 

ರೈತರೇ ಬಾಳಿನ ಎಳ್ಳು ಬೆಲ್ಲ 

ಜಗಕೆಲ್ಲ ಅನ್ನವ ನೀಡುವರಲ್ಲ.


ಎತ್ತು ಬಂಡಿಯ ಶೃಗಾಂರ ಮಾಡಿ 

ಹಿಗ್ಗಿಲೆ ಸುಗ್ಗಿಗೆ ಹುಗ್ಗಿಯ ಮಾಡಿ 

ಖಣದಿ ರಾಸಿಯ ಗುಡ್ಡೆಯ ಹಾಕಿ 

ಕುಣಿದ ರೈತ ಸುಗ್ಗಿ ಹಾಡಿಗೆ ತಾಳ ಹಾಕಿ 


ಎಳ್ಳು ಬೆಲ್ಲದ ಮಹಿಮೆ ಅರಿತೊಡೆ

ತಿನ್ನುತ್ತ ಒಳ್ಳೊಳ್ಳೆ ಮಾತು ನುಡಿವೊಡೆ

ಬರುವುದು ಶಾಂತಿ ಸಹಬಾಳ್ವೆಯ ನಡೆ

ಜೀವನ ಸಾಗುವುದಾಗ ಉತ್ತುಂಗದೆಡೆ .


          ✍️ಡಾ. ಮಹೇಂದ್ರ ‍ಕುರ್ಡಿ

Image Description

Post a Comment

0 Comments