*ಶರಣ ಶ್ರೀ ಆಯ್.ಆರ್.ಮಠಪತಿ ಅವರಿಗೆ ಆತ್ಮೀಯ ಸನ್ಮಾನ*
ರಾಯಬಾಗ: ಮುಂದಿನ ತಿಂಗಳು ಫೆಬ್ರುವರಿ 17 ರಂದು ತಾಲ್ಲೂಕಿನ ಹಂದಿಗುಂದ ಗ್ರಾಮದಲ್ಲಿ ನಡೆಯಲಿರುವ ರಾಯಬಾಗ ತಾಲ್ಲೂಕು 7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಹಾಗೂ ಸಾಮಾಜಿಕ ಸೇವೆ ಪರಿಗಣಿಸಿ ಇತ್ತೀಚೆಗೆ ರಾಜ್ಯಮಟ್ಟದ ಪ್ರತಿಷ್ಠಿತ ಎಚ್.ಎನ್ ಪ್ರಶಸ್ತಿ ಸ್ವೀಕರಿಸಿದ ಪ್ರಯುಕ್ತ ಹಾರೂಗೇರಿ ಪಟ್ಟಣದ ವಿಶ್ರಾಂತ "ಆದರ್ಶ ಶಿಕ್ಷಕರು",ಶರಣ ವಿಚಾರ ವಾಹಿನಿಯ ಸಂಸ್ಥಾಪಕ ಅಧ್ಯಕ್ಷರು, "ನಿರಾಡಂಭರದ ನಿಜ ಶರಣ" ಶ್ರೀ ಆಯ್ ಆರ್ ಮಠಪತಿ ಗುರುಗಳನ್ನು ಅವರ ಮಹಾಮನೆಗೆ ತೆರಳಿ ಕನ್ನಡ ಪ್ರಾಧ್ಯಾಪಕರು,ಸಾಹಿತಿ ಡಾ.ಜಯವೀರ ಎ.ಕೆ. ಹಾಗೂ ರಾಯಬಾಗದ ಜನಾನುರಾಗಿ ನ್ಯಾಯವಾದಿ, ವಾಗ್ಮಿ, ಪ್ರಬುದ್ಧ ಚಿಂತಕರಾದ ಶ್ರೀ ಡಿ.ಎಚ್.ಯಲ್ಲಟ್ಟಿ ಅವರು ಶಾಲು ಹೊದಿಸಿ ಫಲ ತಾಂಬೂಲ ನೀಡಿ ಸತ್ಕರಿಸಿದರು.
ವೃತ್ತಿಯಲ್ಲಿ ಆದರ್ಶ ಶಿಕ್ಷಕರಾಗಿ (ನಿವೃತ್ತ) ಪ್ರವೃತ್ತಿಯಲ್ಲಿ ಶರಣ ವಿಚಾರ ವಾಹಿನಿ ಸಂಘಟನೆ ಮೂಲಕ ಸಹಸ್ರಾರು ಶಿವಾನುಭಗಳನ್ನು ಆಯೋಜಿಸಿ ಬಸವಾದಿ ಶರಣರ ವಚನ ಸಂದೇಶಗಳನ್ನು ಮನೆಮನೆಗೆ ಮನಮನಕ್ಕೆ ಮುಟ್ಟಿಸಿ ಬೇರು ಬಿಟ್ಟ ಮೌಢ್ಯ ಕಂದಾಚಾರಗಳ ಬಗ್ಗೆ ಜನಜಾಗೃತಿ ಮಾಡುವ ಮೂಲಕ ಸಮಾಜ ಸೇವೆಯೇ ತಮ್ಮ ಕಾಯಕ ಎಂದು ಅರಿತುಕೊಂಡು ವೈಚಾರಿಕ ಪ್ರಜ್ಞೆ ಮೂಡಿಸುತ್ತಿರುವ ಮಠಪತಿ ಗುರುಗಳ ಕಾಯಕ ನಿಷ್ಠೆ, ಸಾಮಾಜಿಕ ಕಳಕಳಿ ನಿಜಕ್ಕೂ ಶ್ಲಾಘನೀಯ. ಇಂತಹ ಮೇರು ವ್ಯಕ್ತಿತ್ವದ ಸರಳ ಸಜ್ಜನಿಕೆಯ ಶರಣರಿಗೆ ಈ ಉನ್ನತ ಗೌರವ ಪ್ರಾಪ್ತವಾಗಿದ್ದು ಔಚಿತ್ಯಪೂರ್ಣವಾಗಿದೆ ಎಂದು ಹೇಳಿದರು. ಮಠಪತಿ ಗುರುಗಳ ಬದುಕು ಬರಹ ಸಮಾಜ ಸೇವೆಯ ಸಮಗ್ರ ಚಿತ್ರಣ ಭವಿಷ್ಯದಲ್ಲಿ ಉತ್ತಮ ಸಂಶೋಧನ ಮಾಡುವವರಿಗೆ ವ್ಯಾಪಕ ಆಕರವಾಗಬಲ್ಲದು ಎಂದು ನ್ಯಾಯವಾದಿ ಶ್ರೀ ಡಿ.ಎಚ್.ಯಲ್ಲಟ್ಟಿ ಮಾರ್ಮಿಕವಾಗಿ ನುಡಿದರು. ಮಠಪತಿ ಗುರುಗಳ ಬದುಕು, ಬರಹ, ಸಮಾಜ ಸೇವೆ ಇತರರಿಗೆ ಆದರ್ಶಪ್ರಾಯವಾಗಲಿ ಎಂದು ಆಶಿಸಿದರು.
*ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments