* ಸಂಕ್ರಾಂತಿ *

 *ಡಾ. ವಾಣಿಶ್ರೀ ಕಾಸರಗೋಡು*

*ಗಡಿನಾಡ ಕನ್ನಡತಿ*


ಸಂಕ್ರಾಂತಿ 



ಸಂಕ್ರಾಂತಿ ಹಬ್ಬವು  ಬಂದಿದೆ  ತುಂಬಿದ  ಹರುಷದಿಂದ 

ಸಂಭ್ರಮ ಸಡಗರ ತಂದಿದೆ  ಎಳ್ಳು  ಬೆಲ್ಲ  ರುಚಿಯಿಂದ

ಕ್ಯಾಲೆಂಡರ್ ವರ್ಷದ ಮೊದಲನೇ  ಹಬ್ಬದ ಸಡಗರವು 

ಪೈರನು ತೆಗೆವ ಶಾಸ್ತ್ರವು  ಸಮೃದ್ಧಿ  ಪಡೆವ  ಸಂಕೇತವು 


ಸೂರ್ಯನು ಚಲಿಪ ಪಥ ಬದಲಾವಣೆಯ ಕಾಲವಿದು 

ಇಚ್ಚಾ ಮರಣಿ ಭೀಷ್ಮ  ಕಾಯವ  ತೊರೆದ ಮಾಸವಿದು 

ಮಕರ ಮಾಸದ ಉತ್ತರಾಯಣ  ಪ್ರಾರಂಭ  ದಿನವಿದು

ಸಮಸ್ತ ದೇವತೆಗಳ ಕಾರ್ಯಗಳಿಗೆ  ಪರ್ವ  ಕಾಲವಿದು


ವರುಷಕ್ಕೂಮ್ಮೆ ಬರುವ ಹಬ್ಬ ಸಂಭ್ರಮದಿ ಆಚರಿಸುವ

ಅರಿತು ಬೆರೆತು ಜೀವನದಲಿ  ಬಾಂಧವ್ಯವ  ಬೆಸೆಯುವ

ಕಳೆದು ಹೋದ ಸಿಹಿ ಕಹಿ ವಿಚಾರಗಳನು  ಮರೆಯುವ

ಕೆಡು ಭಾವನೆ ತೊರೆದು ಸದ್ಗುಣದಿ  ಕೂಡಿ  ಬೆರೆಯುವ

Image Description

Post a Comment

0 Comments