🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ*🙏🙏
ಶೀರ್ಷಿಕೆ :
*ಸ್ವಾಮಿ ವಿವೇಕಾನಂದ*
ಭಾರತ ಕಂಡ ಪ್ರಭಾವ ಶಾಲಿ ತತ್ವಜ್ಞಾನಿಗಳಲ್ಲೊಬ್ಬರು
ನಿರ್ಭಯತೆ ಆಶಾವಾದ ವಿಶಾಲ ದೃಷ್ಟಿ ಕೋನರು
ನರೇಂದ್ರ ದತ್ತ ಸ್ವಾಮಿ ವಿವೇಕಾ ನಂದರಾದರು
ಅವರ ಜಯಂತಿಯ ಯುವದಿನ ವೆಂದು ಕರೆದರು
ರಾಮಕೃಷ್ಣ ಪರಮಹoಸರ ಪಟ್ಟ ಶಿಷ್ಯರಿವರು
ದೇವರನ್ನು ತೋರಿಸಿ ಎನ್ನುವ ಸವಾಲೆಸೆದರು
ದರ್ಶನ ವಾದಾಗಿನಿಂದ ಆಧ್ಯಾ ತ್ಮಿಕ ಗುರುವಾದರು
ಭರತ ಮಾತೆಯ ವಿಶ್ವಗುರು ವಾಗಿಸಿದರು
ಹಿಂದೂ ಧರ್ಮ ಗ್ರಂಥ ವೇದ ಗಳನ್ನು ಎತ್ತಿ ಹಿಡಿದರು
ಚಿಕಾಗೋ ಧರ್ಮ ಸಮ್ಮೇಳನ ದಲ್ಲಿ ಧರ್ಮ ವಕ್ತಾರರಾದರು
ಅಣ್ಣತಮ್ಮಂದಿರೆ, ಅಕ್ಕತಂಗಿ
ಯರೇ ಎಂದು ಸಂಭೋದಿ ಸಿದರು
ಎಲ್ಲರೂ ಜೋರಾಗಿ ಕರತಾಡನ ಮಾಡಿ ಪ್ರೀತಿ ವ್ಯಕ್ತಪಡಿಸಿದರು
ನಮ್ಮ ಹಣೆಬರಹ ನಿರ್ಧರಿ ಸುವುದು ನಾವೇ ಎಂದರು
ಅಸಾಧ್ಯ ವಾದುದನ್ನು ಸಾಧಿಸಿ ಯೇ ತೋರಿಸಬೇಕೆಂದರು
ಮನಸ್ಸನ್ನು ಶಿಸ್ತು ಬದ್ದವಾಗಿರಿಸಿ ಜ್ಞಾನ ಬೆಳೆಸಿ ಕೊಳ್ಳಬೇಕೆಂದರು
ಜೀವ ನಮ್ಮ ಮಾತು ಕೇಳುವು ದಿಲ್ಲ ಜೀವನ ಕೇಳುವಂತಾಗ ಬೇಕೆಂದರು
ಜಗತ್ತೇ ವ್ಯಾಯಾಮ ಶಾಲೆ ಅದ ನ್ನು ಬಲಪಡಿಸಿಕೊಳ್ಳೋಣ
ಶಿಕ್ಷಣ ಮನುಷ್ಯನನ್ನು ಅಭಿವ್ಯಕ್ತಿ ಗೊಳಿಸುವುದೆನ್ನೋಣ
ಗುರು ಎಂದರೆ ವ್ಯಕ್ತಿಯಲ್ಲ ಅದ ನ್ನು ದೀಪವೆನ್ನೋಣ
ಉಸಿರು ಇರುವವರೆಗೂ ಜ್ಞಾನಾ ರ್ಜನೆ ಕಲಿಕೆ ನಿರಂತರ ಮಾಡೋಣ.
✍️ *ಮಳೆಬಿಲ್ಲು ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments