ಸ್ವಾಮಿ ವಿವೇಕಾನಂದರು ಭಾರತ ದೇಶದ ಅಸ್ಮಿತೆ : ಡಾ. ವಿಲಾಸ ಕಾಂಬಳೆ
ಹಾರೂಗೇರಿ : ಶಿಕ್ಷಣ ಪ್ರಸಾರಕ ಮಂಡಳ ರಾಯಬಾಗ : ಕಲಾ ವಾಣಿಜ್ಯ ಮತ್ತು ವಿಜ್ಞಾನ ಹಾಗೂ ಎಂ ಎ ಇತಿಹಾಸ, ಸಮಾಜಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರ ಐ ಕ್ಯೂ ಎ ಸಿ, ಎನ್ ಎಸ್ ಎಸ್, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ : ರೋವರ್, ರೇಂಜರ್ ಘಟಕಗಳ ಅಡಿಯಯಲ್ಲಿ ಸ್ವಾಮಿ ವಿವೇಕಾನಂದರ 161 ನೇ ಜಯಂತಿಯನ್ನು ವಿವೇಕಾನಂದರ ಭಾವಚಿತ್ರಕ್ಕೆ ಮುಖ್ಯ ಅತಿಥಿ ಮತ್ತು ವೇದಿಕೆ ಮೇಲಿನ ಗಣ್ಯರಿಂದ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡ ಉಪನ್ಯಾಸಕ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ಪುರಸ್ಕೃತರಾದ ಡಾ. ವಿಲಾಸ ಕಾಂಬಳೆ ಮಾತನಾಡುತ್ತ ವಿವೇಕಾನಂದರ ಬದುಕು ಇವತ್ತಿನ ಯುವ ಜನಾಂಗಕ್ಕೆ ಮಾದರಿಯಾಗಿದೆ.ನಿರಂತರವಾದ ಅಧ್ಯಯನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ, ಅಂತಹ ಸಾಧನೆ ವಿವೇಕಾನಂದರದು.ಕಾಯಕ, ಉಪಾಸನೆ, ಧ್ಯಾನ, ಜ್ಞಾನ ವೈಚಾರಿಕ, ಆಧ್ಯಾತ್ಮಿಕ ತತ್ವಗಳನ್ನು ಅಳವಡಿಸಿಕೊಂಡಿದ್ದರು, ಭಾರತ ದೇಶದ ಸಂಸ್ಕೃತಿಯನ್ನು ಪಾಶ್ಚಾತ್ಯ ದೇಶಕ್ಕೆ ತಿಳಿಸಿಕೊಟ್ಟರು, ಸ್ವಾಮಿ ವಿವೇಕಾನಂದರು ಭಾರತ ದೇಶದ ಅಸ್ಮಿತೆ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.ಅಧ್ಯಕ್ಷತೆಯನ್ನು ಹಿರಿಯ ಉಪನ್ಯಾಸಕರಾದ ಡಾ. ಸಿ ಡಿ ಠಾಣೆ ವಹಿಸಿ,ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ತುಂಬಾ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಪ್ರೊ ಎಸ್ ಬಿ ಕಲಚಿಮಡ್ ಉಪಸ್ಥಿತರಿದ್ದರು.ಜಯಂತಿ ನಿಮಿತ್ಯವಾಗಿ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವೇದಿಕೆಯ ಮೇಲೆ ಸ್ಪರ್ಧೆಯ ನಿರ್ಣಾಯಕರಾಗಿ ಕನ್ನಡ ಉಪನ್ಯಾಸಕರಾದ ಪ್ರೊ ಡಿ ಎಂ. ನಾಯ್ಕ, ಪ್ರೊ ಕೆ ಎಸ್ ಹಾರೂಗೇರಿ, ಶ್ರೀಮತಿ ಜೆ ಬಿ ಬರಡ್ಡಿ ಕಾರ್ಯ ನಿರ್ವಹಿಸಿದರು. ಪ್ರಾರಂಭದಲ್ಲಿ ಕುಮಾರಿ ಬಾಗಿ ಪ್ರಾರ್ಥಿಸಿದರು. ಪ್ರೊ ಕೆ ಎಸ್ ಹಾರೂಗೇರಿ ವೇದಿಕೆಯ ಮೇಲಿನ ಗಣ್ಯರನ್ನು ಸ್ವಾಗತಿಸಿ ಪರಿಚಯಿಸಿದರು.ಕಾರ್ಯಕ್ರಮದ ನಿರೂಪಣೆಯನ್ನು ಸಿದ್ದಪ್ಪ ಹೊಸಮನಿ ಅಚ್ಚು ಕಟ್ಟಾಗಿ ನಿರ್ವಹಿಸಿದರು. ಶ್ರೀಮತಿ ಆರ್ ಬಿ ಮ್ಯಾಗೇರಿ ವಂದಿಸಿದರು.ಇನ್ನುಳಿದಂತೆ ಎಲ್ಲ ಉಪನ್ಯಾಸಕರು ಮತ್ತು ವಿದ್ಯಾರ್ಥಿ /ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ :ಬಸವೇಶ್ವರಿ ವಿ . ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments