* ಬಂದಿದೆ ಮೊದಲ ಸಂಕ್ರಾಂತಿ ಉತ್ಸವ*

 ಬಂದಿದೆ ಮೊದಲ ಸಂಕ್ರಾಂತಿ ಉತ್ಸವ


ಕರುಣೆ ಪ್ರೀತಿ ಸಾರುವ ಹಬ್ಬವು

ಬದುಕಿಗೆ ನವ ಉಲ್ಲಾಸ ನೀಡುವ

ಅನ್ನದಾತರಿಗೆ ಭಾಗ್ಯ ತಂದ ಧಾನ್ಯವು

ಹೊಲದಲಿ ಎಲ್ಲರೂ ಸುಗ್ಗಿಗೆ ಸೇರಿಸುವ

ರಾಸುಗಳಿಗೆ ನೀಡುವ ಧನ್ಯತೆಯ ಭಾವವು

ಫಸಲಿನ ಕಣವನ್ನು ಭೂತಾಯಿಗೆ ಅರ್ಪಿಸುವ

ನಾಡಿನ ಸಂಸ್ಕೃತಿಯ ಸಾರುವ ನಿತ್ಯವು

ಮನೆಯಲಿ ಹುಗ್ಗಿ ಮಾಡಿ ತಿನ್ನುವ

ಈ ಹಬ್ಬಕ್ಕೆಯಿದೆ ವೈಜ್ಞಾನಿಕ ಕಾರಣವು

ಬೇರೆ ಬೇರೆ ರಾಜ್ಯಗಳಲ್ಲಿ ಸಂಕ್ರಾಂತಿಯು

ಚಂದದ  ದನಕರುಗಳ ಶೃಂಗಾರ ಮಾಡುವ

ಎಲ್ಲೆಡೆಯೂ ತನ್ನದೆ ಸಂಭ್ರಮದ ನೀತಿ ರೀತಿಯು

ಅವುಗಳು ಕಿಚ್ಚಾಯಿಸುವುದನ್ನು ಕಣ್ಣು ತುಂಬಿಕೊಳ್ಳುವ

ಬಾಂಧವ್ಯ ಬೆಸೆಯುವ ಯುವ ಪೀಳಿಗೆಯು

ನೋಡಿ ಹೆಣ್ಣು ಮಕ್ಕಳ  ಶೃಂಗಾರವ

ನವ ಚೈತನ್ಯ ನೀಡುವ ಪ್ರಕೃತಿಯು

ಮಾಗಿಯ  ಮನಸ್ಸಿಗೆ  ಪ್ರೀತಿಹಂಚಿ ಹಸಿರಾಗಿಸುವ

ಎಳ್ಳು ಕಡಲೆ ಕೊಬ್ಬರಿಯಿಂದ ಸೌಂದರ್ಯ ವೃದ್ಧಿಯು

ಕಬ್ಬು ಎಳ್ಳು ಬೆಲ್ಲ ಹಂಚಿಕೊಳ್ಳೊ ಸಂಭ್ರಮವ. 


ಶೋಭ ಪ್ರಕಾಶ್. ಶಿವಮೊಗ್ಗ.

Image Description

Post a Comment

0 Comments