*ಡಾ. ವಾಣಿಶ್ರೀ ಕಾಸರಗೋಡು*
*ಗಡಿನಾಡ ಕನ್ನಡತಿ*
ನಿಜವಾದ ಸುಗುಣ
ಬೆಳಗಿದ ದೀಪವು ಜಗದ ಕರಿಯ ಕತ್ತಲನು ಸರಿಸಿತು
ಪಕ್ವವಾದ ಮನದಲಿ ದ್ವೇಷ ಅಸೂಯೆ ದೂರಾಯಿತು
ಚಿಗುರಿದ ಲತೆಯಲಿ ಹೂ ರವಿ ಕಿರಣ ಸ್ಪರ್ಶದಿ ಅರಳಿತು
ಸತ್ವವಾದ ನುಡಿಯು ಮನುಜನ ಕೀರ್ತಿಯ ಮೆರೆಸಿತು
ಸತ್ಯವಾದ ಜೀವನದಿ ನೀತಿ ನಿಯತ್ತು ತುಂಬಿ ತುಳುಕಿತು
ಪ್ರಾಮಾಣಿಕತೆಯ ಬದುಕಲಿ ನಂಬಿಕೆ ಪುಷ್ಪ ಅರಳಿತು
ಕೂಡಿ ಚೈತನ್ಯದ ಚಿಲುಮೆ ಉತ್ಸಾಹ ಇಮ್ಮಡಿಗೊಳಿಸಿತು
ಕೂಡು ಕುಟುಂಬದಿ ಬೆರೆತರೆ ಬದುಕು ಸಾರ್ಥಕವಾದೀತು
ಅರಿಯದ ವಿಷಯವ ತಿಳಿಯಲು ಮನವು ಪ್ರೆರೇಪಿಸಿತು
ಬರೆಯದ ಬರಹವ ಬರೆಯುತಾ ಮನೆ ಮಾತಾಯಿತು
ಬೆಳೆಯದ ಮಸ್ತಕವ ತಿಳುವಳಿಕೆ ಚುರುಕುಗೊಳಿಸಿತು
ತರತರದ ಕಥೆ ಕವನ ಬರೆಯೇ ನಾಮವು ಸ್ಥಿರವಾಯಿತು
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments