*ಶುಭೋದಯ*
*ವಚನ*
ಕೈ ಮುಂದೆ ಮಾಡಿ ಭೂತಾಯಿಯ ಮೇಲೆ ಪ್ರಮಾಣ,,
ಸಮಾನತೆ ಸಹಬಾಳ್ವೆ ಸಹಕಾರದ ಸಂಕಲ್ಪ ತೊಡುತ,,
ಭ್ರಾತೃತ್ವ ವ್ಯಕ್ತಿಗೌರವ ಸ್ವತಂತ್ರ ಏಕತೆ ಸಮಗ್ರತೆ,ಎನುತ,
ಆಚಾರ ವಿಚಾರ ಅಭಿವ್ಯಕ್ತಿ ನಂಬಿಕೆ ವಿಶ್ವಾಸ
ಸ್ಥಾನಮಾನ ಅವಕಾಶಗಳ ಸಮಾನತೆ ಎನುತಲೇ
ತುಳಿಯುವರು, ದಬ್ಬಾಳಿಕೆ ನಡೆಸುವರು, ನರಳಿಸುವರು,
ನಲುಗಿಸಿ ನಲಿವರು, ಸತ್ಯ ನ್ಯಾಯಕ್ಕೆ ಶಿಕ್ಷೆ ನೋವಿನ ಬಿಕ್ಷೆ,
ಶಿವಹರನನೂ ಬಿಡರು ಆಮಿಷ ತೋರಿಸಿ
ಬುಟ್ಟಿಗಾಕಿಕೊಂಡು ಬೀಗುತ ನನಗಾರು ಸಮನೆಂದು//
*ಡಾ ಅನ್ನಪೂರ್ಣ ಹಿರೇಮಠ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments