* ಬದುಕಲಿ ಆಯ್ಕೆ *

 *ಡಾ. ವಾಣಿಶ್ರೀ ಕಾಸರಗೋಡು*

*ಗಡಿನಾಡ ಕನ್ನಡತಿ*


ಬದುಕಲಿ ಆಯ್ಕೆ 



ನಡೆಯಿರಲಿ  ನುಡಿಯಿರಲಿ  ಜನ  ಮೆಚ್ಚುವಂತಿರಲಿ

ಮೇಲಿರಲಿ  ಕೀಳಿರಲಿ  ಸಮಾನವೆಂಬ  ಮನವಿರಲಿ

ಹಣವಿರಲಿ ಇರದಿರಲಿ  ಮಾನವೀಯತೆ ತುಂಬಿರಲಿ

ನೋವಿರಲಿ  ನಲಿವಿರಲಿ  ಮೊಗವೆಂದು  ನಗುತಿರಲಿ


ಕಲ್ಲಿರಲಿ  ಮುಳ್ಳಿರಲಿ ಅಧಿಗಮಿಸೊ  ತಾಳ್ಮೆಯಿರಲಿ

ಕಷ್ಟವಿರಲಿ ನಷ್ಟವಿರಲಿ  ಬದುಕು ಸಹಜ ನೆನಪಿರಲಿ

ಸೋಲಿರಲಿ ಗೆಲುವಿರಲಿ ಸ್ಪರ್ಧಾಭಾವ ಮುಂದಿರಲಿ

ಪ್ರೀತಿಯಿರಲಿ ಪ್ರೇಮವಿರಲಿ ಆರಾಧಿಸೊ ತತ್ವವಿರಲಿ


ಬೆಳಕಿರಲಿ ಕತ್ತಲಿರಲಿ ಮನದ  ಒಳಗಣ್ಣು ತೆರೆದಿರಲಿ

ಒಳ್ಳೆದಿರಲಿ  ಕೆಟ್ಟದಿರಲಿ  ಆರಿಸುವಂಥ  ಗುಣವಿರಲಿ

ದುರ್ಗುಣವಿರಲಿ ಸುಗುಣವಿರಲಿ  ಆಯ್ಕೆ ತಿಳಿದಿರಲಿ

ಹುಟ್ಟಿರಲಿ ಸಾವಿರಲಿ ಬದುಕಿದ ದಿನ ಸಾರ್ಥಕವಿರಲಿ

Image Description

Post a Comment

0 Comments