ಆಗಂತುಕ (ಪತ್ತೇದಾರಿ ಕಾದಂಬರಿ)
ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಆಗಂತುಕ ಪತ್ತೇದಾರಿ ಕಾದಂಬರಿಯ ೭೫ ನೇ ಸಂಚಿಕೆಯನ್ನು ಪ್ರಕಟಿಸುತ್ತಿದ್ದೇನೆ. ನಾನು ಬರೆದಿರುವ ಕಾದಂಬರಿಗಳನ್ನು ರಾಜ್ಯಾದ್ಯಂತ ಆಸಕ್ತರು ಓದಿ ಹರಸಿ ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತಾ 🙏🙏🙏🙏 ೭೫ ನೇ ಸಂಚಿಕೆಯನ್ನು ಪ್ರಕಟಿಸುತ್ತಿದ್ದೇನೆ.
ಸಂಚಿಕೆ -೭೫
ಹಿಂದಿನ ಸಂಚಿಕೆಯಲ್ಲಿ :
ಕಿಶೋರ್ ಕಡೆಯವರು ಅಣ್ಣ ತಂಗಿ ಇಬ್ಬರನ್ನೂ ಅಪಹರಿಸಿ ಅವರ ತಾಣದಲ್ಲಿರಿಸುತ್ತಾರೆ
ಕಥೆಯನ್ನು ಮುಂದುವರೆಸುತ್ತಾ :
ಕಿಶೋರ್ ಅಣ್ಣ ತಂಗಿಯನ್ನು ಬೇರೆ ಬೇರೆ ರೂಮಿನಲ್ಲಿ ಕೂಡಿಹಾಕಿರುತ್ತಾರೆ. ಆದರೂ ಅಣ್ಣನಿಗೆ ತನ್ನ ತಂಗಿ ಎಲ್ಲಿದ್ದಾಳೋ ಏನು ತೊಂದರೆ ಮಾಡುತ್ತಿದ್ದಾರೋ ಎನಿಸಿದರೆ , ತಂಗಿ ಪುಷ್ಪಾರಾಣಿಗೆ ತನ್ನಣ್ಣ ಎಲ್ಲಿದ್ದಾನೋ ಎನಿಸಿದ್ದು ಭಯ ಮೂಡಿರುತ್ತದೆ.
ಅಣ್ಣ ತಂಗಿ ಇಬ್ಬರೂ ನಿನ್ನೆ ಹೋದವರು ಇನ್ನೂ ಬಂದಿಲ್ಲವೆಂದು ಸುಮಾರು ಸಲ ರಾತ್ರಿಯಿಂದ ಬೆಳಿಗ್ಗೆವರೆಗೆ ಅಣ್ಣ ತಂಗಿ ಇಬ್ಬರಿಗೂ ಫೋನ್ ಮಾಡಿದರೂ ಇಬ್ಬರ ಮೊಬೈಲ್ ಸ್ವಿಚ್ ಆಫ್ ಎಂದು ಬರುತ್ತಿದ್ದು , ಇದರಿಂದ ಹೆದರಿದ ಅವರಮ್ಮನು ತನ್ನ ಮಕ್ಕಳಿಗೆ ಏನು ತೊಂದರೆಯಾಗಿದೆಯೋ? ಯಾರೇನು ಮಾಡಿದ್ದಾರೋ ಎಂದು ಪುಷ್ಪಾರಾಣಿ ತಾಯಿಗೆ ಭಯ ಆತಂಕವಾಗಿ ತಕ್ಷಣ ರಘವೀರ್ ಗೆ ವಿಷಯ ತಿಳಿಸಿದಾಗ
ರಘುವೀರ್ ತಕ್ಷಣ ಅವರ ಮನೆಗೆ ಬಂದು ಪುಷ್ಪಾರಾಣಿಗೆ ಫೋನ್ ಮಾಡಿದರೂ ಸಹಾ ಸ್ವಿಚ್ ಆಫ್ ಬರುತ್ತದೆ.
ಇದು ಕಿಶೋರ್ ಕೆಲಸವೇ ಆಗಿದೆ ಎಂದು ಕನ್ಫರ್ಮ್ ಆಗಿದ್ದು, ವಿಪರೀತ ಸಿಟ್ಟು ಬಂದು, ಆ ಕಿಶೋರ್ ಗೆ ಒಂದು ಗತಿ ಕಾಣಿಸುವವರೆಗೆ ಅವನ ಉಪಟಳ ನಿಲ್ಲುವುದಿಲ್ಲ , ಎಂದುಕೊಳ್ಳುತ್ತಾ , ನೀವು ಧೈರ್ಯವಾಗಿರಿ ನಾನು ನಿಮ್ಮ ಮಕ್ಕಳಿಗೆ ಏನೂ ತೊಂದರೆಯಾಗದಂತೆ ಕರೆದುಕೊಂಡು ಬರುತ್ತೇನೆಂದು ಹೇಳಿ ಸಮಾಧಾನ ಮಾಡಿ,
ನಿಮ್ಮ ಮಕ್ಕಳ ಫೋಟೋಗಳನ್ನು ನೀಡಿ ಒಂದು ಕಂಪ್ಲೇಂಟ್ ಬರೆದುಕೊಡಿರೆಂದು ಹೇಳಿ ಕಂಪ್ಲೇಂಟ್ ಬರೆಸಿಕೊಂಡು ಇಬ್ಬರ ಫೋಟೋ ಪಡೆದು ಸೀದಾ ಕಛೇರಿಗೆ ವಾಪಸ್ ಬಂದ ತಕ್ಷಣ ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ತನ್ನ ಕಛೇರಿಗೆ ಬರಲು ಹೇಳುತ್ತಾರೆ.
ಇನ್ಸ್ ಪೆಕ್ಟರ್ ಬಂದು ಸೆಲ್ಯೂಟ್ ಹೊಡೆದು ಹೇಳಿ ಕಳುಹಿಸಿದ ಕಾರಣ ಕೇಳಿದಾಗ
ಪುಷ್ಪಾರಾಣಿಯ ತಾಯಿ ನೀಡಿದ್ದ ಕಂಪ್ಲೇಂಟನ್ನು ಇನ್ಸ್ ಪೆಕ್ಟರ್ ಗೆ ಕೊಟ್ಟು ಇದನ್ನು ಈಗಲೇ ಎಲ್ಲಾ ಠಾಣೆಗಳಿಗೆ ಕಳುಹಿಸಿ ಅವರಿಬ್ಬರನ್ನು ಹುಡುಕಲು ಪ್ರಯತ್ನಿಸಿ ಎನ್ನುತ್ತಾರೆ
ಅಯ್ಯೋ ಇದೇನ್ ಸಾರ್ ವಜ್ರದ ವ್ಯಾಪಾರಿಯನ್ನು ಕೊಂದು ಈಗ ಅವರ ಮಕ್ಕಳನ್ನು ಅಪಹರಿಸಿದ್ದಾನೆ ಕಿಶೋರ್ ಕೆಲಸವೇ ಆಗಿದೆ ಎನ್ನುತ್ತಾ ಈಗೇನು ಮಾಡಬೇಕು ಸಾರ್ ಎಂದು ಇನ್ಸ್ ಪೆಕ್ಟರ್ ಪ್ರಶ್ನಿಸಿದಾಗ,
ಅವನು ಅವರಿಬ್ಬರ ಜೊತೆಗೆ ನಾವು ಹುಡುಕಿ ನೀಡಿದ್ದ ಡೈಮಂಡ್ಸ್ ಗಳನ್ನು ಅಪಹರಿಸಿದ್ದಾನೆ ಎನ್ನುತ್ತಾರೆ ರಘುವೀರ್
ಕಿಶೋರ್ ಡೈಮಂಡ್ಸ್ ಜೊತೆ ಇಬ್ಬರು ಮಕ್ಕಳನ್ನು ಅಪಹರಿಸಿರುವುದು ಖಾತ್ರಿಯಾಗಿದೆ ಇನ್ನೇಕೆ ಇವರ ಫೋಟೋಗಳನ್ನು ಎಲ್ಲಾ ಠಾಣೆಗೂ ಕಳುಹಿಸಬೇಕು ಎಂದು ಕೇಳಲು,
ನಮ್ಮ ಕರ್ತವ್ಯ ನಾವು ಮಾಡಬೇಕು ಅವನೇ ಅಪಹರಿಸಿದ್ದಾನೆಂದು ಹೇಗೆ ಹೇಳುತ್ತೀರಿ?
ನಿಮ್ಮ ಅನುಮಾನ ಇರಬಹುದಷ್ಟೇ ನಮ್ಮ ಕರ್ತವ್ಯ ನಾವು ಮಾಡಬೇಕು ಈಗ ನಾನು ಹೇಳಿದಂತೆ ಎರಡು ಕುದುರೆಗಳನ್ನು ರಡಿ ಮಾಡಿದ್ದೀರಾ ಎಂದು ರಘುವೀರ್ ಕೇಳಲು,
ಇನ್ಸ್ ಪೆಕ್ಟರ್ ಮಾತನಾಡಿ, ಸಾಧಾರಣ ಕುದುರೆಗಳು ಇವೆ ಸಾರ್ ಅವುಗಳಿಗೆ ವಯಸ್ಸಾದಂತೆ ಇದೆ. ಅವುಗಳು ಕಾಡು ಮೇಡು ಸುತ್ತಲು ಶಕ್ತವಾಗಿಲ್ಲ. ಬೇರೆ ಭರ್ಜರಿಯಾದ ನೂರು ಕಿಲೋಮೀಟರ್ ಓಡಿದರೂ ದಣಿವಾಗದಂತ ಎರಡು ಕುದುರೆಗಳನ್ನು ನೋಡಬೇಕು ಸಾರ್ ಸ್ವಲ್ಪ ತಡವಾಗುತ್ತದೆ ಎನ್ನುತ್ತಾರೆ .
ರೀ ಇನ್ಸ್ ಪೆಕ್ಟರ್ ನಿಮಗೆ ಹೇಳಿದ ಯಾವುದಾದರೂ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದೀರಾ? ಇದೇ ರೀತಿ ಕೆಲಸ ಮಾಡುತ್ತಿರಿ ಕಡೆಗೆ ಇನ್ಸ್ ಪೆಕ್ಟರ್ ಆಗಿಯೇ ರಿಟೈರ್ಡ್ ಆಗುತ್ತೀರಾ ಅಷ್ಟೇ ಎನ್ನಲು,
ಸಾರ್ ಒಂದೆರಡು ದಿನ ಟೈಮ್ ಕೊಡಿ ಸಾರ್ ಒಳ್ಳೆಯ ಕುದುರೆಗಳನ್ನು ವ್ಯವಸ್ಥೆ ಮಾಡುತ್ತೇನೆ ಎಂದಾಗ
ನಿಮಗೆ ಸೀರಿಯಸ್ ನೆಸ್ ಗೊತ್ತಿಲ್ಲಾ ರೀ , ಆ ಬದ್ಮಾಶ್ ಕಿಶೋರನು ವಜ್ರದ ವ್ಯಾಪಾರಿಯ ಮಗ ಮಗಳನ್ನು ಕಿಡ್ನಾಪ್ ಮಾಡಿ ಕಾಡಿನಲ್ಲಿರಿಸಿಕೊಂಡಿದ್ದಾನೆ. ಅವನನ್ನು ಬೇಗ ಹಿಡಿಯದಿದ್ದರೆ ಅವಳನ್ನು ಬಲವಂತವಾಗಿ ಮದುವೆಯಾಗಬಹುದು . ಅಷ್ಟರೊಳಗೆ ಅವನಿರುವ ಜಾಗವನ್ನು ಕಂಡುಹಿಡಿದು ಆ ಮದುವೆ ತಪ್ಪಿಸಬೇಕ್ರೀ….
ಸಾರಿ ಸಾರ್ ಕುದುರೆಗಳು ಸಿಗಲು ಇನ್ನೂ ಕಡೇಪಕ್ಷ ಒಂದುವಾರವಾದರೂ ಬೇಕು ಸಾರ್. ಒಳ್ಳೊಳ್ಳೆ ಕುದುರೆಗಳು ಸ್ಟಡ್ ಫಾರಂನಿಂದ ಬಂದಿಲ್ಲವಂತೆ .ಅವುಗಳು ಬಂದರೂ ಇನ್ಷೂರೆನ್ಸ್ ಮಾಡಿಸದೆ ಹೊರಗೆ ಕಳುಹಿಸುವುದಿಲ್ಲವಂತೆ ಎನ್ನಲು
ಇವೆಲ್ಲ ಪ್ರಕ್ರಿಯೆ ಮುಗಿಯಬೇಕಾದರೆ ತಿಂಗಳು ಬೇಕಾಗುತ್ತಲ್ರೀ? ಛೇ ಅಷ್ಟರೊಳಗೆ ವಜ್ರದ ವ್ಯಾಪಾರಿಯ ಮಗಳನ್ನು ಕಿಶೋರ್ ಮದುವೆಯಾಗಿರುತ್ತಾನೆ. ಎನ್ನುತ್ತಾ, ರಘುವೀರ್ ತನ್ನ ಮನಸ್ಸಿನಲ್ಲಿ ನನ್ನ ಸಂಕಟ ನಿಮಗೆ ಹೇಗೆ ಅರ್ಥವಾಗುತ್ತದೆ ಎಂದುಕೊಂಡು , ನೀವು ಏನು ಮಾಡುತ್ತೀರೋ ನನಗೆ ಗೊತ್ತಿಲ್ಲ. ಇಂದು ಅಥವಾ ನಾಳೆಯೇ ಎರಡು ಕುದುರೆಗಳನ್ನು ನನ್ನ ಮುಂದೆ ತಂದು ನಿಲ್ಲಿಸಬೇಕೆಂದಾಗ
ಸಾರ್ ಕುದುರೆಗಳ ಓನರ್ ಗೆ ಫೋನ್ ಮಾಡಿ ಕೊಡುತ್ತೇನೆ ನೀವೇ ಮಾತನಾಡಿ ಸಾರ್ ಎಂದು ಹೇಳಿ ಇನ್ಸ್ ಪೆಕ್ಟರ್ ಕುದುರೆ ವ್ಯಾಪಾರಿಗೆ ಫೋನ್ ಮಾಡಿ ನಮ್ಮ ಎಸ್ ಪಿ ಸಾಹೇಬರು ಮಾತನಾಡುತ್ತಾರಂತೆ ಎನ್ನುತ್ತಾ ರಘುವೀರ್ ಗೆ ಮೊಬೈಲ್ ಕೊಡಲು
ರಘುವೀರ್ ಹಲೋ ನಾನು ಎಸ್ ಪಿ ರಘುವೀರ್ ಮಾತಾಡೋದು ನಮಗೆ ಎರಡು ಕುದುರೆಗಳು ಅರ್ಜಂಟಾಗಿ ಬೇಕು ಎಂದಾಗ
ಕುದುರೆಗಳಿವೆ ಸಾರ್ ಅವುಗಳಿಗಿಂತ ಕತ್ತೆಗಳೇ ಮೇಲು ಸಾರ್ ಎಂದಾಗ
ನೀವೇನ್ರೀ ಕುದುರೆಯನ್ನು ಕತ್ತೆಗಿಂತ ಕಡಿಮೆ ಮಾಡುತ್ತಿದ್ದೀರಲ್ಲಾ?
ಹೌದು ಸಾರ್ ಸದ್ಯಕ್ಕೆ ನನ್ನ ಬಳಿ ಇರುವುದು ಗಿಡ್ಡ ಕುದುರೆಗಳು ನಿಮಗೆ ಒಳ್ಳೆಯ ಕುದುರೆಗಳು ಬೇಕಿದ್ದರೆ ಒಂದು ವಾರ ಕಾಯಲೇ ಬೇಕು ಎಂದಾಗ
ರಘುವೀರ್ ಗೆ ದಿಕ್ಕು ಕಾಣದಂತಾಗಿರುತ್ತದೆ.
ಕುದುರೆಗಳಿಲ್ಲದೆ ಕಿಶೋರ್ ಬಳಿ ಹೋಗುವುದಕ್ಕೆ ಆಗುವುದಿಲ್ಲ. ಸ್ವಲ್ಪ ತಡವಾದರೂ ಅವನು ಪುಷ್ಪಾರಾಣಿಯನ್ನು ಮದುವೆಯಾಗುತ್ತಾನೆ. ಅವಳಣ್ಣನಿಗೆ ಏನು ಮಾಡುತ್ತಾನೋ? ಏನಾದರೂ ಈರೀತಿಯಾದರೆ ನಾನು ಎಸ್ ಪಿಯಾಗಿ ಇಲ್ಲಿರಲು ಬಿಡುವುದಿಲ್ಲವೆಂದು ನಾನಾ ರೀತಿಯ ಯೋಚನೆ ಬಂದು ಕಂಗಾಲಾಗಿರುತ್ತಾರೆ.
ಪುಷ್ಪಾರಾಣಿಯ ಅಮ್ಮನ ದುಃಖ ಮುಗಿಲು ಮುಟ್ಟಿರುತ್ತದೆ. ನನ್ನ ಮಕ್ಕಳಿಗೆ ಏನಾಗಿದೆಯೋ? ಎಂದು ಅವರೂ ಸಹ ಕಂಗಾಲಾಗಿದ್ದು, ನಮ್ಮ ಮಕ್ಕಳನ್ನು ಪಾಪಿಗಳು ಏನು ಮಾಡಿಬಿಡುತ್ತಾರೋ ನಂತರ ನನ್ನ ಮನೆಗೆ ಬಂದು ನನ್ನ ಜೀವಕ್ಕೂ ತೊಂದರೆ ಮಾಡಬಹುದೆಂಬ ಭಯ ಕಾಡುತ್ತಿದೆ ಸಾರ್ ಎಂದು ರಘುವೀರ್ ಗೆ ಹೇಳಿದಾಗ
ರಘುವೀರ್ ನಾಲ್ಕು ಜನ ಸಿಬ್ಬಂದಿಯನ್ನು ಅವರ ರಕ್ಷಣೆಗೆ ನೇಮಿಸುತ್ತಾರೆ.
ಐದು ದಿನ ಕಳೆದ ನಂತರ ಇನ್ಸ್ ಪೆಕ್ಟರ್ ರಘುವೀರ್ ಗೆ ಫೋನ್ ಮಾಡಿ ಭರ್ಜರಿಯಾದ ಎರಡು ಕುದುರೆಗಳು ಸಿಕ್ಕಿವೆ ಸಾರ್ ಎನ್ನಲು
ಓಕೆ ಆ ಕುದುರೆಗಳನ್ನು ಕಿಶೋರ್ ತಾಣದ ರಸ್ತೆಗೆ ಕರೆದುಕೊಂಡು ಹೋಗಿ ನಾನು ಶೀಘ್ರ ಬರುತ್ತೇನೆ ಎನ್ನುತ್ತಾರೆ
ಇನ್ಸ್ ಪೆಕ್ಟರ್ ಈಗಲೇ ಕುದುರೆಗಳನ್ನು ಅಲ್ಲಿಗೆ ಕಳುಹಿಸುತ್ತೇನೆ ಎಂದು ಹೇಳಿದ ನಂತರ
ರಘುವೀರ್ ತನ್ನ ಸಿಬ್ಬಂದಿ ಮೊಬೈಲಿನಿಂದ ಕುಂದನ್ ಮೊಬೈಲಿನಲ್ಲಿದ್ದ ಲೇಡಿ ಬಾಸ್ ನಂಬರಿಗೆ ಫೋನ್ ಮಾಡಿದಾಗ ಸ್ವಿಚ್ ಆಫ್ ಬರುತ್ತದೆ.
ಇವಳಿಗೆ ಫೋನ್ ಮಾಡಿದರೆ ಏನೂ ಪ್ರಯೋಜನವಿಲ್ಲವೆಂದು ಸೀದಾ ಕಾರಿನಲ್ಲಿ ಕುಳಿತುಕೊಂಡು,
ಕಿಶೋರ್ ಇರುವ ತಾಣದ ರಸ್ತೆಗೆ ಬರುವ ವೇಳೆಗಾಗಲೇ ಎರಡು ಕುದುರೆಗಳು ರಡಿಯಾಗಿ ನಿಂತಿರುತ್ತವೆ.
ರಘುವೀರ್ ಕಾರಿನಿಂದಿಳಿದು ಬಂದು ಆ ಕುದುರೆಗಳನ್ನು ನೋಡಿ ಬಹಳ ಚೆನ್ನಾಗಿದೆ ಎಂದು ಹೇಳಿ ಅವುಗಳ ಮೈದಡವಿ ನಂತರ
ರಘುವೀರ್ ಹಾಗೂ ಇನ್ಸ್ ಪೆಕ್ಟರ್ ಇಬ್ಬರೂ ಕಾರಿನಲ್ಲಿದ್ದ ಸಾಧಾರಣ ಬಟ್ಟೆಯನ್ನು ತೆಗೆದುಕೊಂಡು ಯೂನಿಫಾರಂನ್ನು ಕಾರಿನಲ್ಲಿಟ್ಟು ಕುದುರೆ ಏರಿ ನಾವಿನ್ನು ಕಾಡಿನೊಳಗೆ ಹೋಗುತ್ತೇವೆ. ನೀವಿನ್ನು ಹೊರಡಿ , ನಾವುಗಳು ತಲುಪಿದ ತಕ್ಷಣ ನಿಮಗೆ ನಮ್ಮಿಂದ ಮಿಸ್ ಕಾಲ್ ಬರುತ್ತದೆ. ತಕ್ಷಣ ನೀವು ಫೋನ್ ಮಾಡಿ ನಾವಿರುವ ಸ್ಥಳವನ್ನು ಟ್ರಾಕ್ ಮಾಡಿಕೊಂಡು ಐವತ್ತು ಸಿಬ್ಬಂದಿಗಳೊಂದಿಗೆ ಬನ್ನಿ ಎನ್ನಲು
ಆಯ್ತು ಸಾರ್ ಎಂದು ಹೇಳಿ ಸೆಲ್ಯೂಟ್ ಹೊಡೆದು ಸಿಬ್ಬಂದಿಯವರು ಕಛೇರಿಗೆ ಕಾರಿನಲ್ಲಿ ವಾಪಸ್ ಹೋಗುತ್ತಾರೆ.
ರಘುವೀರ್ ಹಾಗೂ ಇನ್ಸ್ ಪೆಕ್ಟರ್ ಇಬ್ಬರೂ ಕುದುರೆಗಳ ಹೆಜ್ಜೆ ಗುರುತುಗಳನ್ನು ನೋಡಿಕೊಂಡು ಬಹಳ ದೂರ ಬಂದಾಗ, ಅಲ್ಲಿ ಒಂದು ನೀರಿನ ಝರಿ ಹರಿಯುತ್ತಿದ್ದು, ನೋಡಲು ತುಂಬಾ ಸುಂದರವಾದ ತಾಣವಾಗಿರುತ್ತದೆ. ಆಹಾ …..ಎಂತಹ ಪ್ಪಕೃತಿ ಸೌಂದರ್ಯ ಇಲ್ಲಿದೆ!. ಹಿತವಾದ ಶುಭ್ರವಾದ ಗಾಳಿ ಜೊತೆಗೆ ಕಾಡಿನಲ್ಲಿ ಹೂವು ಗಳ ಘಮ ಘಮ ಪರಿಮಳ ಬರುತ್ತಿದ್ದು, ದುಂಬಿಗಳು ಹೂವಿಂದ ಹೂವಿಗೆ ಮಧುವನ್ನು ಸವಿಯಲು ಗುಂಯ್ ಗುಂಯ್ ಎನ್ನುತ್ತಾ , ಕುದುರೆ ಮೇಲೆ ಕುಳಿತು ಹೋಗುತ್ತಿರುವ ಇವರ ತಲೆಯ ಮೇಲೆ ಹಾರುತ್ತಿರುತ್ತವೆ. ನೀರನ್ನು ನೋಡಿದ ಕುದುರೆಗಳು ಬಾಯಾರಿಕೆಯಾಗಿ. ನೀರನ್ನು ಕುಡಿದು ಈ ದಡದಿಂದ ಎದುರು ದಡಕ್ಕೆ ಕರೆದುಕೊಂಡು ಹೋಗುತ್ತವೆ. ಸುಮಾರು ಹತ್ತು ಕಿಲೋಮೀಟರ್ ಕಾಡಿನೊಳಗೆ ಹೋದರೂ ಕಿಶೋರನ ಸುಳಿವು ಇರುವುದಿಲ್ಲ.
ರಘುವೀರ್ ಮಾತನಾಡಿ ರೀ ಇನ್ಸ್ ಪೆಕ್ಟರ್ ನಾವು ದಾರಿ ತಪ್ಪಿ ಬಂದು ಬಿಟ್ಟೆವಾ ಎಂದು ಇನ್ಸ್ ಪೆಕ್ಟರ್ ಗೆ ಕೇಳಿದಾಗ
ಇಲ್ಲಾ ಸಾರ್ ಈ ಕುದುರೆಗಳು ಸುಮ್ಮನೆ ಮುಂದೆ ಹೋಗುವುದಿಲ್ಲ . ಕುದುರೆಗಳು ಓಡಾಡುತ್ತಿರುವ ಸ್ಥಳವಾಗಿರುವುದರಿಂದ ಅವುಗಳ ಇರುವನ್ನು ನೋಡಿಕೊಂಡು ಮುಂದೆ ಹೋಗುತ್ತಿವೆ ಎನ್ನುತ್ತಾರೆ ಇನ್ಸ್ ಪೆಕ್ಟರ್.
ರಘುವೀರ್ ಹಾಗೂ ಇನ್ಸ್ ಪೆಕ್ಟರ್ ಪ್ರಯಾಣ ಮುಂದುವರೆದಿರುತ್ತದೆ.
ಮುಂದುವರೆಯುತ್ತದೆ
ಡಾ. ಎನ್ ಮುರಳೀಧರ್
ವಕೀಲರು ಹಾಗೂ ಸಾಹಿತಿ
ನೆಲಮಂಗಲ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments