* ಸೆಳೆದ ಚೆಲುವು *

 *ಡಾ. ವಾಣಿಶ್ರೀ ಕಾಸರಗೋಡು*

*ಗಡಿನಾಡ ಕನ್ನಡತಿ*


ಸೆಳೆದ ಚೆಲುವು 



ನಗು  ನಗುತಿರಲು  ಚೆಲುವೆ  ಅರಳುವುದು  ಮೊಗವು 

ಕಣ್ಣು ಕರೆದರೆ ನೋಟದಿ  ಸೆಳೆಯುವುದು  ನಯನವು 

ಬಳಿ ಬರುತಿರು  ಒಲವೆ  ಬಡಿಯುವುದು  ಹೃದಯವು

ರೂಪ ಲಾವಣ್ಯದ ಮಾಟದಿ ಮರೆಯುವುದು ಜಗವು


ಸುಂದರ ಚೆಲುವು ಕಂಡು ಹರುಷಗೊಂಡಿತು ಮನವು

ಸುರ ಸುಂದರಿ ಆಗಮನಕೆ ಪುಳಕಗೊಂಡಿತು ತನುವು

ಮನದ ಮಂದಿರ  ಸೆಳೆದು  ಸೂರೆಗೊಂಡಿತು ಚೆಲುವು

ಪ್ರೀತಿ ಪ್ರೇಮ ಚಿಗುರೊಡೆದು  ಜೊತೆಗೂಡಿತು ಒಲವು


ಲಲನೆಯ ಕುಡಿನೋಟಕೆ ಚಿಮ್ಮಿ ಬಂದಿತು  ಪ್ರೇಮವು

ಕಿರು ನಗೆಯ  ಕರೆಯೋಲೆಗೆ  ಶರಣಾಯಿತು  ಜೀವವು

ಮುಂಗುರುಳ ಹಾರಾಟಕೆ ಮನ  ಮಿಡಿಯಿತು ರಾಗವು

ಅಪ್ಸರೆ ಭುವಿಗಿಳಿದು ಬಂದು ಧರೆಯಾಯಿತು ಸ್ವರ್ಗವು

Image Description

Post a Comment

0 Comments