* ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ವಿಜಯಪುರ ಇವರು ಕೊಡ ಮಾಡುವ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಉತ್ತಮ ಎಸ್ಡಿಎಂಸಿ ಅಧ್ಯಕ್ಷ ಪ್ರಶಸ್ತಿಗೆ: ಸರ್ಕಾರಿ ಪ್ರೌಢಶಾಲೆ ಟಕ್ಕಳಕಿ ತಾಲೂಕ ಜಿಲ್ಲಾ ವಿಜಯಪುರ ಅಧ್ಯಕ್ಷರಾದ ಶ್ರೀ ಶಿವಪ್ಪ ಲಕ್ಷ್ಮಣ ಛಲವಾದಿ ಆಯ್ಕೆ *

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ವಿಜಯಪುರ ಇವರು ಕೊಡ ಮಾಡುವ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಉತ್ತಮ ಎಸ್ಡಿಎಂಸಿ  ಅಧ್ಯಕ್ಷ ಪ್ರಶಸ್ತಿಗೆ ಸರ್ಕಾರಿ ಪ್ರೌಢಶಾಲೆ ಟಕ್ಕಳಕಿ ತಾಲೂಕ ಜಿಲ್ಲಾ ವಿಜಯಪುರ ಅಧ್ಯಕ್ಷರಾದ ಶ್ರೀ  ಶಿವಪ್ಪ ಲಕ್ಷ್ಮಣ ಚಲವಾದಿ  ಇವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ಜನವರಿ 21 ,1,2024 ರಂದು ವಿಜಯಪುರದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಭಾಭವನ ತೊರವಿಯಲ್ಲಿ ನಡೆಯುವ  ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ  ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಜಿ.ಎಸ್.ಕಾಂಬಳೆ ಅಧ್ಯಕ್ಷರು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ವಿಜಯಪುರ  ಹಾಗೂ ಶ್ರೀ ರಮೇಶ ನಾಯಕ ಕಾರ್ಯದರ್ಶಿಗಳು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ವಿಜಯಪುರ ಇವರು ಪತ್ರಿಕಾ ಹೇಳಿಕೆಗೆ ತಿಳಿಸಿದ್ದಾರೆ.

 ಶ್ರೀ  ಶಿವಪ್ಪ ಲಕ್ಷ್ಮಣ ಚಲವಾದಿ ಇವರ ಆಯ್ಕೆ


ಗೆ ಸರ್ಕಾರಿ ಪ್ರೌಢಶಾಲೆ  ಟಕ್ಕಳಕಿಯ  ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಹಾಗೂ ಎಸ್ಡಿಎಂಸಿಯ ಎಲ್ಲ ಸದಸ್ಯ ಬಳಗದವರು ಹಾಗೂ ಊರಿನ ಹಿರಿಯರು ಶುಭ ಹಾರೈಸಿದ್ದಾರೆ.

ವರದಿ :ಡಾ. ವಿಲಾಸ ಕಾಂಬಳೆ

ಹಾರೂಗೇರಿ 

Image Description

Post a Comment

0 Comments