ಏಡ್ಸ್ ಅಳಿಯಲಿ :ಜೀವ ಉಳಿಯಲಿ : ಆರೋಗ್ಯ ಆಪ್ತ ಸಮಾಲೋಚಕ ಶ್ರೀ ಮಹೇಶ ಪಾಟೀಲ್
ಹಾರೂಗೇರಿ : ಪಟ್ಟಣದ ಎಸ್ ಪಿ ಎಮ್ ಕಲಾ ವಾಣಿಜ್ಯ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹೆಚ್ ಐ ವಿ, ಏಡ್ಸ್ ಜಾಗ್ರತಿ ಜಾತಾ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಸಮುದಾಯ ಅರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಶ್ರೀ ಮಹೇಶ್ ಪಾಟೀಲ್, ಇವತ್ತಿನ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೆಚ್ ಐ ವಿ ಏಡ್ಸ್ ಕುರಿತು ಮಾಹಿತಿ ನೀಡಿದರು. ಏಡ್ಸ್ ಸೋಂಕು ಪ್ರಮುಖವಾಗಿ 4 ವಿಧಾನಗಳಲ್ಲಿ ಹರಡುತ್ತದೆ, ಅಸುರಕ್ಷಿತ ಲೈಂಗಿಕ ಸಂಪರ್ಕ, ರಕ್ತ ಪರೀಕ್ಷೆ ಮಾಡದೇ ಇರುವುದು, ತಾಯಿಯಿಂದ ಗರ್ಭವ್ಯವಸ್ಥೆಯಲ್ಲಿ, ಸಂಸ್ಕರಣೆ ಮಾಡದ ಸೂಜಿ ಸಿರಿಂಜು ಬಳಸುವುದರಿಂದ, ಹರಡುವ ವಿಧಾನಗಳನ್ನು ತಿಳಿಸಿದರು. ಹೆಚ್ ಐ ವಿ ಸೋಂಕು ತಡೆಗಟ್ಟುವ ಮಾರ್ಗಗಳು, ಹೆಚ್ ಐ ವಿ ಹೇಗೆ ಹರಡುವುದಿಲ್ಲ, ರೋಗದ ಲಕ್ಷಣಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿ, ಏಡ್ಸ್ ಅಳಿಯಲಿ, ಜೀವ ಉಳಿಯಲಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಚಾರ್ಯರಾದ ಡಾ. ಎಲ್ ಎಸ್ ಧರ್ಮಟ್ಟಿ ವಹಿಸಿದ್ದರು. ವೇದಿಕೆಯ ಮೇಲೆ ಹಿರಿಯ ಆರೋಗ್ಯ ಸಹಾಯಕಿರಾದ ಶ್ರೀಮತಿ ಗೀತಾ ಎನ್. ಮುನವಳ್ಳಿ,ಹಿರಿಯ ಉಪನ್ಯಾಸಕಿರಾದ ಡಾ. ಸಿ ಡಿ ಠಾಣೆ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಪ್ರೊ ಎಸ್ ಬಿ, ಕಲಚಿಮ್ಮಡ್, ಐ ಕ್ಯೂ ಎ ಸಿ ಮುಖ್ಯಸ್ಥರಾದ ಶ್ರೀಮತಿ ಪಿ ಕೆ ಪಾಟೀಲ್,ರೆಡ್ ಕ್ರಾಸ್ ಮುಖ್ಯಸ್ಥರಾದ ಎಲ್ ಸಿ ಬಿರಾದರ್, ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಪ್ರೊ ಬಿ ಎ ಕಾಂಬಳೆ, ಸಹಾಯಕಯರಾದ ಡಾ. ವಿಲಾಸ ಕಾಂಬಳೆ ಉಪಸ್ಥಿತರಿದ್ದರು.ಇನ್ನುಳಿದಂತೆ ಪ್ರೊ ಎಸ್ ಎಮ್ ಹೆಳವರ್, ಪ್ರೊ ಆರ್ ಎಮ್ ಮಾಲಗಾರ, ಪ್ರೊ ಬಿ ಆರ್ ಟೊಮೇರೆ,ಪ್ರೊ ಕಾಂತೇಶ್ ಕೊಚೇರಿ, ಪ್ರೊ ಆರ್ ಕೆ ಕಟಾವಿ,ಪ್ರೊ ಹೆಚ್ ಎಸ್ ಜೋಗನ್ನವರ, ಉಪನ್ಯಾಸಕಿರಾದ ಶ್ರೀಮತಿ ಜೆ ಬಿ ಬರಡ್ಡಿ, ಬಿ ಎಮ್ ಹಾಡಕರ್,ಟಿ ಎಮ್ ಕಟ್ಟಿಮನಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಪ್ರೊ ಎಸ್ ಬಿ ಕಲಚಿಮ್ಮಡ್ ವೇದಿಕೆಯ ಮೇಲಿನ ಗಣ್ಯರನ್ನು ಸ್ವಾಗತಿಸಿ, ಪರಿಚಯಿದರು.ಪ್ರೊ ಡಿ. ಎಮ್ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು . ಕೊನೆಯಲ್ಲಿ ಪ್ರೊ ಕೆ ಎಸ್ ಹಾರೂಗೇರಿ ವಂದಿಸಿದರು.
ವರದಿ: ಡಾ. ವಿಲಾಸ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments