* ಶೀರ್ಷಿಕೆ: ಅಕ್ಷರದವ್ವಗೆ ಅಕ್ಕರೆಯ ಅಕ್ಷರ ನಮನ*

 *ಶೀರ್ಷಿಕೆ: ಅಕ್ಷರದವ್ವಗೆ ಅಕ್ಕರೆಯ ಅಕ್ಷರ ನಮನ*



ಸಮಾಜ ಸುಧಾರಣೆಗೆ ಜನ್ಮವೆತ್ತ ದೈವ ಪುತ್ರಿ

ಮಕ್ಕಳ - ಮಹಿಳೆಯರ ಹೋರಾಟಗಾರ್ತಿ

ದೇಶದ ಮೊದಲ ಶಿಕ್ಷಕಿ ಎಂಬ ಕೀರ್ತಿ

ಶಿಕ್ಷಣದ ಧ್ರುವತಾರೆ, ನಮಗೆಲ್ಲರಿಗೂ ಸ್ಫೂರ್ತಿ


ಶಿಕ್ಷಣದ ಜಗನ್ಮಾತೆಯಾದರು

ಅನಿಷ್ಟ ಪದ್ದತಿಗಳ ವಿರುದ್ಧ ಹೋರಾಡಿದರು

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಾಂದಿ ಹಾಡಿದರು

ತೊಟ್ಟಿಲು ತೂಗುವ ಕೈ ಜಗತ್ತು ಆಳಬಹುದೆಂದು ತೋರಿಸಿದರು


ಬರೆದರು ಕಾವ್ಯಫೂಲೆ ಕವನ ಸಂಕಲನ

ಪಡೆದರು ಮರಾಠಿ ಕಾವ್ಯ ಪ್ರವರ್ತಕಿ ಬಿರುದನ್ನ

ಜ್ಯೋತಿರಾವ್ ಫುಲೆಯವರಿಗೆ ಆದರ್ಶಪತ್ನಿ

ಭಾರತೀಯ ನಾರಿಯರಿಗೆ ಮಾದರಿ ಸಾವಿತ್ರಿ ಎಂಬ ಗಟ್ಟಿಗಿತ್ತಿ


✍🏻

*ಅಮರೇಶ.ಗೊರಚಿಕನವರ*

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ

Image Description

Post a Comment

0 Comments