ಹೃದಯದ ಬಾಗಿಲು ತೆರೆಸುವ ಕವಿತೆಗಳ ಗುಚ್ವ
ತೆರೆಯದ ಬಾಗಿಲು ಕವಿತೆ ಸಂಕಲನದ ಓದು ನಿಮ್ಮೊಂದಿಗೆ ಸ್ವೀಕರಿಸಿ ಧನ್ಯವಾದಗಳು
ಪರಿಚಯ=ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆರೆವಡಿ ಗ್ರಾಮದ ಯುವ ಕವಯತ್ರಿ ಶ್ರವಣ ದೋಷಗಳ್ಳುವಳಾಗಿ ಮಾತು ಮತ್ತು ಕೇಳುವದು ಬಾಲ್ಯದಿಂದಲೆ ಕಳೆದು ಕೊಂಡು ಅವಳ ದೊಡ್ಡಮ್ಮ ಮಹದೇವನಮ್ಮವರ ಆಶ್ರದಲ್ಲಿ ಓದು ಮತ್ತು ಸಾಹಿತ್ಯ ಕೃಷಿಯ ಆಸಕ್ತಿಯಿಂದ ಬರವಣಿಗೆಯಿಂದಲೆ ಬೆಳೆಗುತ್ತಿರುವ ಜ್ಯೋತಿ ಅಂದರೆ ತಪ್ಪಿಲ್ಲ *ಕನಸುಗಳ ಚೀಲ* ಮೊದಲ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಕೊಡುಮಾಡುವ ಜ್ಯೋತಿ ಕೇಂದ್ರಿಯ ವಿದ್ಯಾಲಯದ ೨೦೨೧ನೇ ಸಾಲಿನ *ಜ್ಯೋತಿ ಪುರಸ್ಕಾರ* ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಮ್ಮ ಕನ್ನಡ ಯುವ ಕುಮಾರಿ ಮಧುಕಾರಗಿಯವರು ಕವಿವಿ ಸ್ನಾತಕೋತ್ತರ ಕೇಂದ್ರ ಕೆರೆಮತ್ತಿಹಳ್ಳಿ ಹಾವೇರಿಯಲ್ಲಿ ಎಂ.ಎ .ಕನ್ನಡ ಅಧ್ಯಯನ ಮಾಡುತ್ತ..ಎರಡನೇ ಕೃತಿ *ತರೆಯದ ಬಾಗಿಲು* ಕವಿತೆಗಳ ಸಂಕಲನದ ಬಿಡುಗಡೆಯಾಗಿ ನನ್ನ ಕೈಗೂ ಸೇರಿದೆ.ನನಗೆ ಅನಿಸಿದ್ದು ನಿಮ್ಮೊಂದಿಗೆ
ಕುಮಾರಿ.ಮಧು.ಕಾರಗಿ.ಬ್ಯಾಡಗಿ
ಫೊ=8431997517
ನಾವು
ಭಾವನೆಗಳ ಬೀದಿಯಲ್ಲಿ
ಅನಿರೀಕ್ಷತವಾಗಿ ಭೇಟಿಯಾಗುತ್ತಿದ್ದೆವು
ಶಿಲಾಯುಗದ ಆವೇಷಗಳಿಂದ
ಕಲಿಯುಗದ ವಿದ್ಯುನ್ಮಾನದವರೆಗೂ
ಚರ್ಚೆಗಳು ಜರಗುತ್ತಿದ್ದವು
ಒಂದು ಕವಿತೆ ಬರೆಯುವಾಗ.. ನಮ್ಮ ಕಣ್ಣಿಗೆ ಕಾಣುವ ಐತಿಹಾಸಿಕ ವಸ್ತು ವಿಷಯಗಳು, ಸಿಹಿ,ಕಹಿ,ನೋವು,ನಲಿವುಗಳ, ಅವೇಷದ ಲಕ್ಷಣಗಳು, ಅನಿರೀಕ್ಷತವಾಗಿ ಕಂಡಾಗ...ಅದು ಕವಿಯ ಜೋತೆ ಸೂಕ್ತ ಪದಗಳೊಂದಿಗೆ ಚರ್ಚೆಮಾಡಿಕೊಂಡು.. ರಚಿಸುವಾಗ ಅವರಲ್ಲಿ ಹುಟ್ಟುವ ಭಾವನೆಗಳು ಪ್ರತೀಕವೇ ಒಂದು ಕವಿತೆಯ ಜನನ ಎಂಬವದು ನನಗೆ ಅನಿಸಿದ್ದು. ರೀ
ಹೌದು
ಹೃದಯ ಈಗಲೂ ಕೂಗಿ ಹೇಳುತ್ತದೆ
ನೀನಿಲ್ಲದೆ ನಾ ಅಪೂರ್ಣವೆಂದು
ಹೇಳಲಿ ಬಿಡು ಗೆಳೆಯ
ನಾನಿಲ್ಲವಾದಾಗ ಅದು ನಿಲ್ಲಿಸಿಬಿಡುತ್ತದೆ...
ನೀನಿದ್ದು ನಾನಿಲ್ಲದಾದಾಗಲೇ
ನನಗೆ ನಿಜವಾದ ತೃಪ್ತಿ..
ನನಗೋ ಆಗ ಮುತ್ತೈದೆಯ ಸಾವು...!
ಜಗದ ಕಣ್ಣಿಗೆ ಸೌಭಾಗ್ಯವತಿ..
ನಾನಾಗ ಸೌಭಾಗ್ಯವತಿ..!
ಒಂಟಿತನದ ಭಾವನೆಗಳು ಕಾಡುವ ಹೃದಯದಲ್ಲಿ ಜೊತೆಗಾರನಿಲ್ಲದೆ ಪರಿಪೂರ್ಣತೆ ಇಲ್ಲ ಅನ್ನುವ ಆಡುವ ಬಾಯಿಗಳಿಗೆ ಬೀಗ ಹಾಕಲಾದರು ನನ್ನ ಬಾಳಿಗೆ ಬಾ ಎನ್ನುವ ಕೋರಿಕೆಯಲ್ಲಿರುವೆ ಎನ್ನುವ ನುಡಿಗಳು ತುಂಬಾ ಮನಮುಟ್ಟುಂತೆ ಇದೆ.
ಇದ್ದು ಸತ್ತಂತೆ ಬಾಳುವದಕಿಂತ.ನಿ ನನ್ನ ಬದುಕಲ್ಲಿ ಬಂದರೆ ನಾನೆ ಮೊದಲು ಹೋಗುವೆ.
ಆಗಲಾದರು ನನ್ನನು ಸೌಭಾಗ್ಯವತಿ ಅನ್ನುವರು ಕವಿತಾಳ ಭಾವ ಸ್ವಲ್ಪ ವಿಷಾಧನಿಯಕರವಾದ ನುಡಿ
ಅನಿಸಿತು ಮಾತುಗಳು ಮೂಕವಾಯಿತು.ರೀ
ನಾನು ಕತ್ತಲಾದರೂ
ಕಣ್ಣಿಗೆ ಕಾಣುವುದೆಲ್ಲ ಸತ್ಯವೇ
ವಾದಿಸುವ ವ್ಯರ್ಥ ಪ್ರಯತ್ನ ಬಿಟ್ಟಿರುವೆ;
ಕಾರಣ?
ಬೆಳಕಿನ ಭ್ರಮೆಗೊಳಗಾದವರೊಂದಿಗೆ
ಸತ್ಯದ ಸಾಮಿಪ್ಯ ಸ್ವಪ್ನದ ಮಾತು...!
ಬೆಳಕಿನಲ್ಲಿ ನಡೆದ ಕಹಿ ಸತ್ಯಘಟನೆಗಳು ಕಂಡವರೆ ಅಂಧಕಾರದಲ್ಲಿ ಸಾಗುವಾಗ ನಾನು ಕತ್ತಲ್ಲಲೆ ಇದ್ದು ಸತ್ಯವನ್ನುರಿತು ಭಂಡವಾದ ಮಾಡಿ ಜೈಯಸಿ ಸಾಧಿಸುವದಾದರೇನು ಬೆಳಕು ಕಂಡವರೆಲ್ಲ ಸತ್ಯ ಹರಿಚಂದ್ರರೇ
ನಾನು ಕತ್ತಲಾದರು ನನಗೆ ತೃಪ್ತಿ ಇದೆ ಎನ್ನುವ ಕತ್ತಲು ಬೆಳಕಿನ ಸಂವಾದದ ಕವಿತೆ ಮೆಚ್ಚುವಂತದೆ. ರೀ
ತಂಗಾಳಿ ಬೀಸಿದರೆ
ಸುಮ್ಮ ಸುಮ್ಮನೆ ನಗುತ್ತದೆ
ಒಲವಾಗಿದೆ ಈ ಧರಗೆ
ವಿಸ್ಮಯ ಕಣ್ತುಂಬಿಕೊಳ್ಳಲು
ನಿತ್ಯ ಹಾಜರಿ ನಾನು
ಸೃಷ್ಟಿ ಸೊಬಗಿನ ಸಭೆಗೆ!
ಕವಯತ್ರಿಯಾದರೇನು ಕವಿಯಾದರೇನು ಸೃಷ್ಟಿ ಸೌಂದರ್ಯದ ವಿಸ್ಮಯಗಳು ಬಣ್ಣಿಸಲು ನಿತ್ಯ ಹಾಜರಿ ಹಾಕಲೇ ಬೇಕು ಪ್ರಕೃತಿಯ ಸವಿಪಾಠ ಕಣ್ಣು ತುಂಬಿಕೊಂಡು ತಂಗಾಳಿಯಲ್ಲಿ ಮಿಂದೇಳುತ ಮನಸ್ಸಿಗೂ ಹೃದಯಕ್ಕು ಒಲವು ಬೇಸೆಯುತ್ತ ಸಾಗಿದಾಲೆ ಸಂತೃಪ್ತಿ ಭಾವಲಹರಿ ಉದ್ಭವಿಸುವದು ಎಂಬ ಕವಿತಾಳ ಮಾತು ಒಪ್ಪಲೇ ಬೇಕು ಅನಿಸಿತು.ರೀ
ನವಮಾಸ
ಹೊರದಿದ್ದರೇನಂತೆ?
ನೋವಿನಲಿ ಹೆರದಿದ್ದರೇನಂತೆ?
ತನ್ನ ನೋವನು ಮರೆತು
ಪ್ರೀತಿ ಅಕ್ಕರೆಯ ಹಂಚುವ
ಯಾವ ಹೆಣ್ಣೂ ಬಂಜೆಯಲ್ಲ
ಹೆಣ್ಣು ಮಕ್ಕಳು ಹೇರಲ್ಲಿಲ ಅಂತ ಬಂಜೆಯಲ್ಲ ಅನ್ನುವ ವಾದಕ್ಕೆ ಎನು ಹೇಳುವದು ಹೇಳಿ?..
ಆರು ಹಡದಕ್ಕಿ ಮುಂದೆ ಮೂರು ಹಡದಕ್ಕಿ ಹಗಣ ಮಾಡಿದಳು ಅಂತ ನೇರಮಾತು ಗಾದೆಮಾತು ಅನಿವಯಿಸುವದು ಸತ್ಯ ರೀ...
ಅವರು ಹೇಳುವದರ ಬಗ್ಗೆ ವಿಚಾರ ಮಾಡುತ್ತ ಹೋದಾಗ ಮಕ್ಕಳಿಲ್ಲದ ಶಿಕ್ಷಕಿಯರು ಕಲಿಯಲು ಬಂದ ಪತ್ರಿಮಕ್ಕಳಿಗೂ ಪ್ರೀತಿವಾತ್ಸಲ್ಯದಿಂದ ವಿದ್ಯಾಮಾತೆ ಎನಿಸಿಕೊಂಡವರು ಇದ್ದಾರೆ, ಎಷ್ಟೋ ಅನಾಥಮಕ್ಕಳಿಗೆ ತಾಯಿ ಪ್ರೀತಿ ಕೊಟ್ಟು ಹೆತ್ತವರಿಗಿಂತಲೂ ಮೇಲೆ ಇದ್ದಾರೆ,
ಮರಗಿಡಗಳು ಪೋಸಿಸಿ ಪ್ರೀತಿಸಿ ಪ್ರಕೃತಿಗೆ ಮಾತೆ ಎನಿಸಿದವರು ಇದ್ದಾರೆ,ಖಗ ಮೃಗಗಳಿಗೂ,ಪಶು ಪಕ್ಷಿಗಳಿಗೂ, ಪ್ರತಿಯೊಂದು ಮೂಕಜೀವಿಗಳಿಗೂ,ಮಮತೆಯ ಪ್ರೀತಿ ಹಂಚಿಕೊಂಡು ತಾಯಿ ಪ್ರೀತಿ ನೀಡಿದವರಿದ್ದಾರೆ, ಯಾವ ಹೆಣ್ಣು ಬಂಜೆಯಲ್ಲ ಎನ್ನುವ ನೊಂದ ಹೆಣ್ಣಿನ ಪರ ನುಡಿಗೆ ಶರಣಾದೆ.ರೀ
ಮೌನವೆಂಬುದು.
ಪ್ರಜ್ಞಾವಂತಿಕೆಯ
ಪ್ರತಿರೂಪವೋ ವಿನಃ
ಪಾಂಡಿತ್ಯದ ಅಭಾವವಲ್ಲ..
ಮೌನವೆನ್ನುವದು ಪಾಂಡಿತ್ಯವಲ್ಲ. ದುರಹಂಕಾರಿ ಅಲ್ಲ. ಮೇಧಾವಿ ಅಲ್ಲ, ತಾಳ್ಮೆಯ ಪ್ರತಿರೂಪ ಉದ್ವೇಗಕ್ಕೆ ಒಳಗಾಗದೆ ಮೌನದಿಂದ ಎಲ್ಲರ ಪ್ರೀತಿಗಳಿಸುವ ಶಕ್ತಿ ಅದು ಹಾಗಂತ.
ಸುಮ್ಮನಿದ್ದು ಸ್ವರ್ಗನುಂಗುವರು ಅನ್ನುವ ಹಂಗಿನಮಾತು ನಮಗ್ಯಾಕೆ
ಆವೇಷಕ್ಕೆ ಒಳಗಾಗದೆ ಅವಮಾನಗಳಿಗೆ ಅಂಜದೆ ಯಕ್ತಿಯಿಂದ ಗೆಲ್ಲುವ ಸಾಮರ್ಥ್ಯ ಮೌನಕ್ಕೆ ಇದೆ ಎಂದು ತಿಳಿಸುವ ನಿಮ್ಮ ನುಡಿಗೆ ಚಪ್ಪಾಳೆ.ರೀ
ರಸಕವಿಗಳು
ಅಪರಿಮಿತ ಚೆಲುವನ್ನೆಲ್ಲ
ಹೃದಯದಾಳದಿಂದ ಬಣ್ಣಿಸಿ
ಕವಿತೆ ಬರೆಯತೊಡಗಿದರು
ಬರೆಯುತ್ತಾ ಬರೆಯುತ್ತಾ
ಹೋದಂತೆ ಇವರೋ
ರವಿಕಾಣದ್ದನ್ನು ಕವಿ ಕಂಡ
ಎಂಬ ಬಿರುದನ್ನು ಧರಿಸಿದರು
ಎಷ್ಟು ವಿಚಿತ್ರವಲ್ಲವೇ..
ನೀವು ಕವಯತ್ರಿಯಾಗಿ ಇ ಥರ ರಸಕವಿಗಳಿಗೆ ವಂಗ್ಯಹಾಸ್ಯ ಮಾಡುವದು ತರವಲ್ಲ ಬಾಯರ,ನಾನು ಇದನ್ನು ಖಂಡಿಸುವದಿಲ್ಲ
ಇದರ ಬಗ್ಗೆ ತೆಲೆಗೊಂದು ಹುಳಾ ಬಿಟ್ಟುಕೊಂಡು ಯಾಕೆ ಇ ವೆಂಗ್ಯ ಅಂತ ತಾಳೆ ಮಾಡಿ ನೋಡುವೆ ರೀ.
ಹಿರಿಯರು ಹೇಳುವ ಹಾಗೆ ಅಪ್ಪ ಗುಡಿ ಕಟ್ಟಿದ ಮಗ ಕಳಸ ಇಟ್ಟ ಅನ್ನುವ ಗಾದೆ ಮಾತಿನ ಹಾಗೆ ಯೋಚನೆ ಮಾಡಿದಾಗ ನನಗೆ ಹೋಳೆದಿದ್ದು ಹೀಗೆ ನೋಡಿ...
ರವಿ ತನ್ನ ಕಾಯಕದ ಬಗ್ಗೆ ಮಾತ್ರ ಗಮನಕೊಟ್ಟ, ತನ್ನ ಬೆನ್ನು ತಾನು ತಟ್ಟಿಸಿಕೊಳ್ಳವಂತ ವಿಚಾರ ಯಾವತ್ತು ಮಾಡಲ್ಲಿಲ,ಅದಕ್ಕೆ ಕವಿ
ರವಿಯ ಕಿರಣಗಳು ಬೀಳುವ ಸೂಕ್ಷ್ಮ ಸ್ಥಳಗಳು ಗಮನಿಸಿ..ಅವನ ನಿಶ್ಕಲ್ಮಷವಿಲ್ಲದ ಕಾಯಕ ಬಣ್ಣನೆ ಮಾಡಲು ಹೋಗಿ... ಅವನ ಕಾಯಕ ಮರೆತ. ಕಾರಣ ರವಿಕಾಣದ್ದನ್ನು ಕವಿ ಬಣ್ಣಿಸಿದ ಎಂಬ ಬಿರುದು ಪಡೆದು ಖಾಲಿ ಚೀಲದಲ್ಲಿ ಪದಗಳ ಮುಟೆ ಕಟ್ಟಿಕೊಂಡು ಸಂಚಾರಿಯಾದ ಎಂಬ ನನ್ನ ಅನಿಸಿಕೆಯಾದರೆ. ನುಡಿ ಕೊನೆಯಲ್ಲಿ ವಿಚಿತ್ರ ಎಂಬ ಪದ ಸತ್ಯ ಅನಿಸಿತು ಏಕೆ ಅಂದರೆ ನಿಷ್ಠೆಯಿಂದ ನಡೆದವರಿಗೆ ಅವಮಾನ ನೋವು ಜಾಸ್ತಿ. ಏನು ಮಾಡದೆ ಬೆರೆಯವರ ಎಂಜಿಲು ಉಂಡು ಎದ್ದವರಿಗೆ ಗೌರವ ಸಿಗುವದು ಎಂಬ ಅನಿಸಿಕೆ ಮಾತ್ರ ರೀ ಅನ್ಯತಾ ಭಾವಿಸಬೇಡಿ ನನ್ನ ಅನಿಸಿಕೆಯಿಂದ ಯಾರಿಗಾದರೂ ಬೇಸರವಾದರೆ ಮನ್ನಸಿ ಮಹನೀಯರೆ.
ಈ ದಿನ ಯಾವುದೂ ಇಲ್ಲ
ಆದರೆ ಅದೆಲ್ಲವೂ ಇದ್ದಲ್ಲಿಯೇ ಇದೆ..
ಖಾಲಿ ಕ್ಲಾಸ್ ರೂಮ್ ಗಳು
ಧೂಳು ಕುಳಿತ ಲೈಬ್ರರಿಗಳು
ಭಣ ಭಣವೆನ್ನುವ ಆಟದ ಮೈದಾನುಗಳು
ಇಲ್ಲಿಯೂ ಹಾಗೆಯೇ,
ಖಾಲಿತನದ ಮನಸ್ಸುಗಳು...
ಕಲಿಯುವಾಗ ಇರುವ ಆಸಕ್ತಿ, ಗೌರವ, ಭಕ್ತಿ, ಕಲಿತ ಮೇಲೆ ಯಾಕೀಲ ನಿಮ್ಮ ಪ್ರೀತಿ ಎನ್ನುವ ಸಾಲುಗಳು ವಾಸ್ತವಗಳು ತಿಳಿಸುವಂತೆ ಇದೆ ರೀ.
ಹೌದು ಚಿಕ್ಕವರಿಂದ ದೊಡ್ಡವರು ಆಗುವತನಕ ಶಾಲೆ ಕಾಲೇಜುಗಳು ಆಟದ ಮೈದಾನಗಳಲ್ಲಿಯೆ ಆಸಕ್ತಿನೆ ಹೆಚ್ಚು ಇರುತ್ತೆ.ರಕ್ಕೆ ಬಂದ ಹಕ್ಕಿ ತನ್ನವರೆನ್ನೆ ಬಿಟ್ಟು ಹಾರಲು ಶುರುಮಾಡುತ್ತೆ.ಯಾಕೆ ಅಂದರೆ ಬದುಕು ಕಟ್ಟಿಕೊಳ್ಳುವ ತನಕ ಎಲ್ಲವು ಸಮಯಗಳ ಸಂಚಲನವಿದ್ದಂತೆ,ನಿಂತ ನಿರಾದರೆ ಕೆಡುತ್ತೆ, ವಾಸನೆ ಬರುತ್ತೆ ಅಥವಾ ಬತ್ತಿ ಹೋಗುತ್ತೆ ,ಹರಿಯುವ ನದಿಯಾದರೆ ಹತ್ತೂರಿನ ಧಾಹ ನಿಗೀಸುತ್ತೆ ಅದೆ ತರ ಮಾನವಜೀವಿಯ ಪಯಣ ಕೂಡ ಅನಿಸುತ್ತೆ.
ಹುಟ್ಟುವಾಗಲು ಏನು ತರಲಿಲ್ಲ ,ಹೋಗುವಾಗ ಏನು ವೈಯುವದಿಲ್ಲ, ಬಿಟ್ಟಿರುವ ಸ್ಥಳಗಳು ತುಂಬುವವರಿಗೆ ಮಾತ್ರವಾದರು ಮತ್ತೆ ಉಳಿಯುವದು ಖಾಲಿ ಖಾಲಿ ನಿಮ್ಮ ಅನುಭವದ ನುಡಿಗೆ ನನ್ನ ಚಿಕ್ಕ ಅನಿಸಿಕೆ ರೀ
ಕನಸುಗಳ ಕಛೇರಿಯ
ಮುಖ್ಯ ಅಧಿಕಾರಿಗಳೇ
ಬದುಕೆಂಬ ಗೆಳೆಯನ ಮೇಲೆ
ತುಂಬು ವಿಶ್ವಾಸವಿರಲಿ!
ಕನಸುಗಳ ಕಛೇರಿಯಲ್ಲಿ ಮುಖ್ಯ ಅಧಿಕಾರಿಗಳು ಭವಿಷ್ಯದ ದೃಷ್ಯಗಳು ತೋರಿಸುವಾಗ..ನಮ್ಮ ಬದುಕಿನ ಗೆಳೆಯ ತೆಗೆದುಕೊಂಡ ನಿರ್ಧಾರದ ಮೇಲೆ..ಕನಸು ನನಸಾಗಿಸುವ ಯೋಚನೆಗೆ ಮೊದಲು ನಮ್ಮ ಮೇಲೆ ನಮಗೆ ವಿಶ್ವಾಸವಿದ್ದರೆ ಗೆಲುವು ಖಚಿತ ಎನ್ನುವ ನಿಮ್ಮ ನುಡಿಗಳು ಆಯ್ಕೆ ಮಾಡಿಕೊಂಡ ನನ್ನ ಅನಿಸಿಕೆಗೊಂದು ಚಿಕ್ಕ ವಿರಾಮ ನೀಡುವೆ.ರೀ
ಹಾವೇರಿ ಜಿಲ್ಲೆಯ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಗುರುಗಳ ಮುನ್ನುಡಿಯಲ್ಲಿ, ಕು ಮಾರಿ ಮಧುಕಾರಗಿಯವರ ಮೌನ ಬರವಣಿಗೆಯ ಪ್ರೀತಿಯ ಮಾತಿನೊಂದಿಗೆ, ನಮ್ಮ ನಡುವಿನ ಬಯಲ ಬೆಳಕಿನ ಕವಿ ಎ. ಎಸ್. ಮಕಾನದಾರ.ನಿರಂತರ ಗದಗ ಪ್ರಕಾಶನದಲ್ಲಿ ಮುದ್ರಣಗೊಂಡ *ತೆರೆಯದ ಬಾಗಿಲು* ಸಂಕಲನದ.
ಒಟ್ಟು ಅರವತ್ತೆರಡು ಕವಿತೆಗಳು, ಮೌನ ಪ್ರೀತಿಯ ವಿರಹ ಅನುಭವದ ಭಾವನೆಗಳ ಸುತ್ತ, ಪ್ರಕೃತಿ ಸೊಬಗಿನ ಬುದ್ಧ ಬಣ್ಣನೆಯ ಕವಿತೆಯ ಕವಿಗಳ ನಂಟಿನ ಬಿಂಬಗಳು ಬಿಂಬಿಸುವ, ಪ್ರತಿಯೊಂದು ಕವಿತೆಗಳಲ್ಲಿ ಆತ್ಮಾನುಬಂಧವಿದೆ, ಓದುಗರ ಹೃದಯದ ಬಾಗಿಲು ತೆರೆಯುವಂತೆ ಸೂಚಿಸುವ ಸಾಲುಗಳು ಒಪ್ಪುವಂತೆ ಇದೆ, ನನಗೆ ತಿಳಿದಷ್ಟು ನನ್ನ ಓದು ಅನಿಸಿಕೆಯಲ್ಲಿ ದೋಷ ವಿದ್ದರೆ ಅಕ್ಷರ ದೋಷಗಳು ಇದ್ದರೆ ಸಹಕರಿಸಿ ಎಂದು ತಿಳಿಸುತ್ತ ವಂದನೆಗಳೊಂದಿಗೆ ಪೂರ್ಣ ವಿರಾಮ ನೀಡುವೆ. ರೀ.
ಪ್ರೋತ್ಸಾಹಿಸಿ ಬೆಳೆಸುವ ಕೊಂಡು ಓದುವ ಪ್ರಭುಗಳು ಕೊಂಡು ಓದಿ ಅಭಿಪ್ರಾಯ ಅನಿಸಿಕೆ ತಿಳಿಸಿ ಯುವ ಕವಯತ್ರಿಗೆ ಬೆಳಿಸಿ ಧನ್ಯವಾದಗಳು.
*ಹವ್ಯಾಸಿ ಕವಿ*
*ಸಂತೋಷ ವಿ.ಪಿಶೆ.ಹಾವೇರಿ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments