*ಮಹಾ ಆತ್ಮಗಳ ದೀಪಾವಳಿ*

 ಮಹಾ ಆತ್ಮಗಳ ದೀಪಾವಳಿ


--------------------------------------

ಸಿದ್ಧ ದೀಪಾವಳಿಯ ಬುದ್ಧ

ರಾಜ್ಯ ಕೋಶಗಳ ಆಶಾಭಾವದ

ತಮಂದಕೆ ಜ್ಯೋತಿಯಾಗಿ

ಅಂತರಾಳವ ಬೆಳಗಿದರು ll೧ll


ವಚನ ವಿಚಾರ ದೀಪಾವಳಿಯ

ಬಸವಣ್ಣ ಮನದ ಮೌಢ್ಯಗಳ

ಬುಡದ ಕತ್ತಲೆಗೆ ವಿಚಾರದ ಕಿಡಿ

ಹೊತ್ತಿಸಿ ಜಗಜ್ಯೋತಿಯಾದರುll೨ll


ವಿವೇಕ ದೀಪಾವಳಿಯ

ನರೇಂದ್ರದತ್ತ ಭಯದಿ ಬೆಚ್ಚಿ

ಮುಚ್ಚಿ ಮುದುಡಿದ ದುರ್ಬಲ ಮನಗಳ 

ಸಿಡಿಲಬ್ಬರ ನುಡಿಗಳಿಂದ ಮಿಂಚಿಸಿದರು ll೩ll 


ಸ್ವತಂತ್ರ  ದೀಪಾವಳಿಯ

ಗಾಂಧಿ ಗುಲಾಮಿತನದ ಕಗ್ಗತ್ತಲಿಗೆ

ಸತ್ಯಾಗ್ರಹ ಅಹಿಂಸೆ ಉಪವಾಸ

ಬಲದಿಂ ಚಳುವಳಿಯ ಕಿಡಿ ಹೊತ್ತಿಸಿದರು ll೪ll 


ಅಕ್ಷರ ದೀಪಾವಳಿಯ

ಅಂಬೇಡ್ಕರ್ ಕ್ಷಣ ಕ್ಷಣಕ್ಕೂ

ಹೊತ್ತಿಗೆಯ ಸುತ್ತ ಪ್ರಜ್ವಲಿಸಿ

ಅಸಮ ಸಮಾಜಕ್ಕೆ ಬೆಂಕಿಯಾದರು ll೫|| 


ವರ್ಷಕ್ಕೊಮ್ಮೆ ದೀಪಾವಳಿ

ನಮ್ಮದು ಎಣ್ಣೆ ಬತ್ತಿಯ ದೀಪಕೆ

ಮನೆ ಬೆಳಗಿದವು ಮನಗಳಿಗೆ

ಅಂಟಿದ ಕಗ್ಗತ್ತಲು ಸರಿಯಲಿಲ್ಲll೬ll


✍🏻ಪರಸಪ್ಪ ತಳವಾರ

Image Description

Post a Comment

0 Comments