*ಸಾರಾಯಿ, ಮಟಕಾ ಸಂಪೂರ್ಣ ನಿಷೇಧಕ್ಕೆ ದಿಟ್ಟ ಹೆಜ್ಜೆ ಇಟ್ಟ ಬಾವನ ಸೌಂದತ್ತಿ ಗ್ರಾಮ*

 *ಸಾರಾಯಿ, ಮಟಕಾ ಸಂಪೂರ್ಣ ನಿಷೇಧಕ್ಕೆ ದಿಟ್ಟ ಹೆಜ್ಜೆ ಇಟ್ಟ ಬಾವನ ಸೌಂದತ್ತಿ ಗ್ರಾಮ* 



  *ರಾಯಬಾಗ:*  ಈಗಿನ ಯುವಕರು ಬಹುಬೇಗ ಅನೇಕ ದುಶ್ಚಟಗಳಿಗೆ ಬಲಿ ಆಗುತ್ತಿರುವುದನ್ನು ಕಂಡು ಗ್ರಾಮ ಪಂಚಾಯಿತಿ ವತಿಯಿಂದ  ಗ್ರಾಮದಲ್ಲಿ ಸಾರಾಯಿ, ಮಟಕಾ ಸಂಪೂರ್ಣ ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದೆ.

ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ ದಿನದಿಂದ‌ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಮದ‌ ಮಹಿಳೆಯರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಈ ಮೊದಲು ಸಾಕಷ್ಟು ಬಾರಿ ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತ ಬಂದಿದ್ದರು. ಆಗ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಕಾಟೆ‌ ಅವರು ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅಕ್ರಮ  ಸಾರಾಯಿ ಮಾರಾಟ ಹಾಗೂ ಮಟಕಾ ಸಂಪೂರ್ಣ ನಿಷೇಧ ಮಾಡಲು ನಿರ್ಧರಿಸಿ, ಠರಾವನ್ನು ಅಂಗೀಕರಿಸಿದ್ದು ತಾಲೂಕಿನಲ್ಲಿ ಮಾದರಿಯಾಗಿದೆ.

ಸಿಸಿ ಕ್ಯಾಮರಾ  ಅಳವಡಿಕೆ; 

ಮಾದರಿ ಆಡಳಿತ ಕನಸು ಹೊತ್ತ ಬಾವನಸೌಂದತ್ತಿ  ಗ್ರಾಮ ಪಂಚಾಯತಿ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ ಗ್ರಾಮದ ಪ್ರಮುಖ ಬೀದಿಗಳಲ್ಲಿ, ವೃತ್ತಗಳಲ್ಲಿ ಸಿಸಿ ಕ್ಯಾಮೇರಾ ಅಳವಡಿಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ವಿಭಿನ್ನ ಕಾರ್ಯಕ್ರಮಗಳನ್ನು ಕಂಡು ನಸಲಾಪುರ, ನಂದಿಕುರಳಿ, ದಿಗ್ಗೇವಾಡಿ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಗ್ರಾಮದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಲು ಬರುತ್ತಾರೆ. ಹಾಗೂ ತಮ್ಮ ಗ್ರಾಮದಲ್ಲಿ ಅಳವಡಿಸಲು ಮುಂದಾಗಿರುವುದು ವಿಶೇಷವಾಗಿದೆ.



             *ಹೇಳಿಕೆ*

 【"ಗ್ರಾಮದಲ್ಲಿ ಶಾಂತಿ, ಸುವ್ಯವಸ್ಥೆ, ಸ್ವಚ್ಛತೆ ಕಾಪಾಡಬೇಕು.ವ್ಯಸನಮುಕ್ತ ಗ್ರಾಮ ಮಾಡಬೇಕೆಂದು ಈ ನಿರ್ಣಯ ತೆಗೆದಕೊಳ್ಳಲಾಗಿದೆ. ಗ್ರಾಮದಲ್ಲಿ ವ್ಯಸನ ಮುಕ್ತ ಶಿಬಿರವನ್ನು ಹಮ್ಮಿಕೊಂಡು ವ್ಯಸನವನ್ನು ಬಿಡಿಸುವ ಪ್ರಯತ್ನ ಮಾಡಲಾಗುವುದು".】


*ರಾಮಚಂದ್ರ ಕಾಟೆ*       *ಗ್ರಾಮ ಪಂಚಾಯತ ಅಧ್ಯಕ್ಷರು*. 





*ವರದಿ:ಡಾ.ಜಯವೀರ ಎ.ಕೆ.*

     *ಖೇಮಲಾಪುರ*

Image Description

Post a Comment

0 Comments