*ಶಾಲೆಗೆ ಆಪ್ಟಿಕಲ್ ಸ್ಮಾರ್ಟಟಚ್ ಬೋರ್ಡ ವಿತರಣೆ ಮತ್ತು ನೋಟಬುಕ್ಸ ವಿತರಣೆ ಕಾರ್ಯಕ್ರಮ*
ವಿಜಯಪುರ: ವಿಜಯಪುರ ಗ್ರಾಮೀಣ ವಲಯ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಹಾಗೂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇಟ ತಫಿದಾಸ್ ತುಳಸಿದಾಸ್ ವರಜದಾಸ ಚಾರಿಟೇಬಲ್ ಟ್ರಸ್ಟ್ ಮುಂಬೈ. ಅವರಿಂದ ಸ್ಮಾರ್ಟ್ ಆಪ್ಟಿಕಲ್ ಟಚ್ ಬೋರ್ಡ್ ಪ್ರಾಜೆಕ್ಟರ್ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಿಗೆ ನೋಟ್ ಬುಕ್ಸ್ ಗಳನ್ನು ಶಾಲೆಗೆ ದೇಣಿಗೆಯಾಗಿ 7-11-2023 ಮಂಗಳವಾರ ದಂದು ನೀಡಿದರು.
ಸರಕಾರಿ ಶಾಲೆಯಲ್ಲಿರುವ ಬಡಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕೆಂದು,ಅಷ್ಟೇ ಅಲ್ಲದೆ ತಂತ್ರಜ್ಞಾನದ ಬಳಕೆ ಹಾಗೂ ತಂತ್ರಜ್ಞಾನದ ಅರಿವು ಸರಕಾರಿ ಶಾಲೆಯ ಮಕ್ಕಳಿಗೂ ತಿಳಿಯಬೇಕೆಂದು, ಈ ಸ್ಮಾರ್ಟ್ ಬೋರ್ಡ್ ಬಳಕೆಯಿಂದ ಮಕ್ಕಳು ಪ್ರತಿಯೊಂದು ವಿಷಯವನ್ನು ದೃಶ್ಯ ಹಾಗೂ ಶ್ರವಣ ಮಾಧ್ಯಮದ ಮೂಲಕ ನೋಡಿ ಅರ್ಥೈಸಿಕೊಳ್ಳಲು ಸುಲಭವಾಗುವದು ಇದರಿಂದ ಶಿಕ್ಷಕರಿಗೂ ಕಲಿಕಾ ಹೊರೆಯು ಕಡಿಮೆಯಾಗುವುದು ಶಿಕ್ಷಕರು ವಿಡಿಯೋ, ವೆಬ್ಸೈಟ್, ಗೂಗಲ್, ಮೂಲಕ ನೇರವಾಗಿ ಪಾಠಗಳನ್ನು ತೋರಿಸಬಹುದು ಇದರಿಂದ ಮಕ್ಕಳ ಕಲಿಕಾ ಶಕ್ತಿ ತಂತ್ರಜ್ಞಾನದ ಬಳಕೆ ಹೆಚ್ಚುತ್ತದೆ ಎಂದು ಮುಂಬೈ ಚಾರಿಟೇಬಲ್ ಟ್ರಸ್ಟ್ ಸಂಯೋಜಕರಾದ ಶ್ರೀ ವಿಶ್ವನಾಥ ಸಿಂದಗಿ ಅವರ ಶ್ರೀಮತಿ ಪರಿಮಳ ಸಿಂದಗಿಯವರು ಮಾತನಾಡಿದರು. ಇವರು ಕೈಗಾರಿಕಾ ಅಣು ಶಕ್ತಿ ಕೇಂದ್ರದ ನಿವೃತ್ತ ಅಭಿಯಂತರರು ನಿವೃತ್ತಿಯ ನಂತರ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅರಕೇರಿ ಕ್ಲಸ್ಟರ್ ನಲ್ಲಿ ಬರುವ 45 ಶಾಲೆಗಳಾದ LT-6,LT-3 ಪುನರಾವಸ್ತಿ ಸುಮಾರು 250 ಮಕ್ಕಳಿಗೆ
ನೋಟ್ ಬುಕ್ಸ ಗಳನ್ನು ಈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೇಣಿಗೆಯನ್ನು ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಊರಿನ ಮುಖ್ಯಸ್ಥರು, ಶಾಲೆಯ ಸಹಶಿಕ್ಷಕವೃಂದ, ಶಿಕ್ಷಣ ಪ್ರೇಮಿಗಳು ಹಾಗೂ ಮುದ್ದು ಮಕ್ಕಳು ಪಾಲ್ಗೊಂಡಿದ್ದರು.
*ವರದಿ: ಅರಕೇರಿ ಕ್ಲಸ್ಟರಿನ ಶಿಕ್ಷಕರು ಸುನಿತಾ ಪಾರಶೆಟ್ಟಿ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments