ಪ್ರಶಿಕ್ಷಣಾರ್ಥಿಗಳ ಬೀಳ್ಕೂಡುವ, ಸತ್ಕಾರ ಹಾಗೂ ದೀಪದಾನ ಸಮಾರಂಭ
ಸತತ ಅಧ್ಯಯನ ಹಾಗೂ ಕಠಿಣ ಪರಿಶ್ರಮದಿಂದ ಯಶಸ್ಸು ಸಾದ್ಯ : ಪ್ರೊ. ರವೀಂದ್ರನಾಥ ಎನ್ ಕದಂ
ಮುಗಳಖೋಡ: ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿ ತಮ್ಮ ಜೀವನದಲ್ಲಿ ಒಂದು ದೊಡ್ಡದಾದ ಗುರಿಯೊಂದಿಗೆ ಕನಸು ಕಾಣಬೇಕು ಆ ಕನಸು ಸತತ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ನನಸು ಮಾಡಿಕೊಳ್ಳಬೇಕು ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ.ರವೀಂದ್ರನಾಥ ಕದಂ ಹೇಳಿದರು.
ಅವರು ಸಮೀಪದ ಎಸ್.ಪಿ.ಮಂಡಳದ ಸಭಾ ಭವನದಲ್ಲಿ ಎಸ್.ಪಿ.ಎಂ ಶಿಕ್ಷಣ (ಬಿ.ಇಡಿ) ಮಹಾವಿದ್ಯಾಲಯದ ಹಾರೂಗೇರಿಯ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುವ, ಸತ್ಕಾರ ಹಾಗೂ ದೀಪದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಸತ್ಕಾರ ಸ್ವೀಕರಿಸಿ ಮಾತನಾಡಿ ಕೊವಿಡ್ 19 ಹಿನ್ನೆಲೆಯಲ್ಲಿ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಇರುವ ವಾರ್ಷಿಕ ಪ್ರಾಯೋಗಿಕ ಪಾಠಗಳನ್ನು ಕ್ಲಸ್ಟರ್ ಮಟ್ಟದ ಪದ್ದತಿಯಲ್ಲಿ ನಡೆಸಲಾಗುತ್ತಿದ್ದು ಈಗಲೂ ಅದೆ ಮಾದರಿಯಲ್ಲಿದೆ ಆದರೆ ಆ ಪದ್ಧತಿಯು ಎನ್.ಸಿ.ಟಿ ಪ್ರಕಾರ ಅವೈಜ್ಞಾನಿಕವಾಗಿದೆ. ಪ್ರಸಕ್ತ ಸಾಲಿನಿಂದ ಮತ್ತೆ ಹಳೆಯ ಶಾಲಾ ಪದ್ದತಿಯನ್ನು ಮುಂದುವರೆಸುವುದಾಗಿ ಭರವಸೆ ನೀಡಿದರು. ಅಷ್ಟೇ ಅಲ್ಲದೆ ಇತ್ತೀಚೆಗೆ ನಡೆದ ಪದವೀಧರ ಶಿಕ್ಷಕರಗಿ ನೇಮಕಗೊಂಡ ಕೆಲ ಅಭ್ಯರ್ಥಿಗಳ ಅಂಕ ಪಟ್ಟಿ ವೇರಿಪಿಕೇಶನ ಅಗದಿರುವುದರಿಂದ ಅವರು ಕರ್ತವ್ಯಕ್ಕೆ ಹಾಜರಾಗುವ ಆದೇಶ ಇಲ್ಲದೆ ಪರದಾಡುತ್ತಿದಾರೆ ಅವರ ಸಮಸ್ಯೆಯನ್ನು ಕೂಡಾ ಆದಷ್ಟು ಬೇಗ ಬಗೆಹರಿಸಲು ಪ್ರಯತ್ನಿಸುವೆ ಎಂದು ಹೆಳಿದರು.
ನಂತರ ಎಂ.ವ್ಹಿ.ಕೊಳೆಕರ ಮಾತನಾಡಿ ದೀಪದಾನ ಎನ್ನುವುದು ಪ್ರಶಿಕ್ಷಣಾರ್ಥಿಗಳಲ್ಲಿಯ ಜ್ಞಾನದ ಜ್ಯೋತಿಯನ್ನು ವಿದ್ಯಾರ್ಥಿಗಳ ಬಾಳಿನಲ್ಲಿ ಬೇಳಗುವಂತೆ ಮಾಡುವುದು ಎಂದು ಕಾರ್ಯಕ್ರಮ ಉದ್ದೇಶಿಸಿ ಹೆಳಿದರು.
ಬಿ.ಇಡಿ ಶಿಕ್ಷಣ ಮುಗಿಸಿ ತೆರಳುತ್ತಿರುವ ಪ್ರಶಿಕ್ಷಣಾರ್ಥಿಗಳನ್ನು ಹಾಗೂ ಇದೆ ಸಂಸ್ಥೆಯಲ್ಲಿ ಕಲಿತ ನೂತನವಾಗಿ ಸರ್ಕಾರಿ ಶಿಕ್ಷಕರಾಗಿ ಆಯ್ಕೆಯಾದ 57 ಹಳೆಯ ವಿದ್ಯಾರ್ಥಿಗಳನ್ನು ಸಂಸ್ಥೆಯ ಚೇರಮನ್ನರಾದ ಬ್ಯಾರಿಸ್ಟರ್ ಅಮರಸಿಂಹ ಪಾಟೀಲರು ಸತ್ಕರಿಸಿ, ಸನ್ಮಾನಿಸಿದರು.
ನಂತರ ಶಿಲ್ಪಾ ಹಂಜಿ ಮತ್ತು ಪೂಜಾ ಪವಾರ ಪ್ರಶಿಕ್ಷಣಾರ್ಥಿಗಳು ಭರತ ನಾಟ್ಯ ಮಾಡಿದರು. ಪ್ರಶಿಕ್ಷಣಾರ್ಥಿಗಳು ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಅಮರಸಿಂಹ ಪಾಟೀಲ ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರೊ. ಮಾರುತಿ ಹಾಡಕಾರ, ಪ್ರಾಚಾರ್ಯ ಎಂ.ಬಿ.ಪಡೆದಾರ, ಎಂ.ಬಿ. ಕೋಳೆಕರ, ಬಿ ಬಿ ರಾಮತೀರ್ಥ , ಎಸ ಬಿ ಕಿಲ್ಲೆದಾರ, ಎಸ್ ಎಸ್ ಹಾರೂಗೇರಿ, ಎಚ ಎಸ್ ಜೋಗನ್ನವರ, ಎಸ್.ಎಂ ಹೇಳವರ, ಮಹೇಶ ಐಹೊಳೆ, ಡಿ.ಪಿ.ಕಾಪ್ಸಿ, ಜಿ.ಎಸ್.ಕಂಬಾರ, ಎಸ್.ಎಸ್. ನಿಡಗುಂದಿ, ಎಸ್ ವ್ಹಿ ಸಂಗನಗೌಡರ, ಜೆ ಎಸ್ ಭಂಗಿ, ಎಸ್ ವಾಯ್ ವಡೆಯರ ಮಹಿಳಾ ಪ್ರತಿನಿಧಿ ಆಶಾ ಕಂಕಣವಾಡಿ, ಪ್ರಾಚಾರ್ಯ ಎಲ್. ಎಸ್. ಧರ್ಮಟ್ಟಿ ಸ್ವಾಗತಿಸಿದರು, ಪ್ರೊ. ಎಸ್.ಎಂ. ಹೇಳವರ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಶಿಕಲಾ ಮುತ್ನಾಳ ಹಾಗೂ ಪೂಜಾ ಶೇಡಬಾಳ ನಿರೂಪಿಸಿದರು, ವಿದ್ಯಾರ್ಥಿ ಪ್ರತಿನಿಧಿ ಬಸನಗೌಡ ಪಾಟೀಲ ವಂದಿಸಿದರು.
ವರದಿ :ಸಂತೋಷ ಮುಗಳಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments