ಶೀರ್ಷಿಕೆ : ಕನ್ನಡಾಂಬೆ ತಾಯಿ ಭುವನೇಶ್ವರಿ
ಕನ್ನಡಾಂಬೆಯ ದೇವಿ ತಾಯಿ ಭುವನೇಶ್ವರಿ
ಕನ್ನಡತನಕ್ಕೆ ನವ ಸಿರಿ ನವಗರಿ ತಾಯಿ ಶೃಂಗೇರಿ
ನೆಲ ಜಲದಲ್ಲಿ ಹರಿದಾಡುವ ತಾಯಿ ಕಾವೇರಿ
ಕನ್ನಡಾಂಬೆಯ ಜಗನ್ಮಾತೆ ತಾಯಿ ಭುವನೇಶ್ವರಿ ||
ಋಷಿ ಮುನಿ ಕವಿ ಕಾವ್ಯ ಕೋಗಿಲೆಗಳ ಪದ ಸ್ವರ
ಕರುನಾಡಿಗೆ ಹಬ್ಬಿದೆ ಕನ್ನಡ ಪದಗಳ ಸಪ್ತಸ್ವರ
ಮಣ್ಣ ಕಣ ಕಣದಲ್ಲಿ ಕಂಪಿಸುವ ಕನ್ನಡದಕ್ಷರ
ಕ್ಷಣ ಕ್ಷಣ ಎಬ್ಬಿಸುವುದು ಕರುನಾಡಿನ ಕನ್ನಡಿಗರ||
ಕರುಳಿನ ಕುಡಿಯ ಮೊದಲು ಕೂಗು ಅಮ್ಮವೆಂಬ ಪದಕ್ಷರ
ಕನ್ನಡ ಭಾಷೆ ಕನ್ನಡ ನುಡಿಯಲ್ಲಿ ಮಾಡಬೇಡ ನೀ ತಾತ್ಸಾರ
ಕನ್ನಡವೆಂಬುದು ಕಲಿಸುವುದು ಬದುಕಿನ ಸಂಸ್ಕೃತಿ ಸಂಸ್ಕಾರ ಕನ್ನಡವೇ ನಿತ್ಯ ಕನ್ನಡವೇ ಸತ್ಯ ಕನ್ನಡಿಗ ನೆನಪಿರಲಿ ನಿರಂತರ
ಕನ್ನಡ ನಾಡನ್ನು ಕಾಪಾಡುವ ತಾಯಿ ಭುವನೇಶ್ವರಿ
ಸರ್ವ ಕಾಲಕ್ಕೂ ಬೆಳೆಯಲಿ ಉಳಿಯಲಿ ಕನ್ನಡ ಐಸಿರಿ
ಕನ್ನಡದಲ್ಲಿ ಮಾತಾಡಿ ಕನ್ನಡವನ್ನ ಎಲ್ಲಾ ಕಡೆ ಬಳಸಿರಿ
ಕನ್ನಡಾಂಬೆಯ ಮಕ್ಕಳು ನಾವು ಎಂದು ಮರೆಯದಿರಿ ||
ಬಸವೇಶ. ಎಸ್
ಯುವ ಸಾಹಿತಿ
ಶಿಕ್ಷಕರು
ತಿ. ನರಸೀಪುರ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments