ಕವಿ. ಡಾ. ಸಿದ್ದಲಿಂಗಯ್ಯ
ಅಸಮಾನತೆಯ ವಿರುದ್ಧ ಸಿಡಿದ
ಕಿಡಿಯೊಂದು ಬಿರುಗಾಳಿಯಲಿ
ಪ್ರಜ್ವಲಿಸಿತು ಕಣ್ಣವೆ ಮುಚ್ಚಿ
ತೆರವನಿತರೊಳೆ ಅಚ್ಚರಿಯ ಕವಿತೆಗಳು ನೂರು
ಜಾತಿ ಮೌಢ್ಯಗಳ ವಿಷದ ಬೀಜಕೆ
ಸತ್ಯವೆಂಬ ಪಂಜನ್ನಿಡಿದು ಪೌರುಷದಿ
ಕಡೆದುಂಡ ಕರುಣಾಳು ಎದೆಯಲಿ
ನುಗ್ಗಿ ಬಂದ ನೋವುಗಳು ನೂರಾರು
ಪಕ್ಷಪಾತವಿಲ್ಲದ ಹೋರಾಟಗಳಲ್ಲಿ
ಬಿಡದೆ ಗೆದ್ದವರು ಶತಮಾನದ
ಕತ್ತಲೆಯಂಚಿನಲಿ ನೋವುಂಡವರಿಗೆ
ಕಿರುಹಣತೆಯಾಗಿ ಬೆಳಕಾದವರು
ಮೌನವೇ ತುಂಬಿ ನಿಂದಂತೆ ತಮ್ಮೊಳಗೆ
ಬೆಳದಿಂಗಳ ಶಾಂತಿಯ ಕಡಲು ಹರಿದಂತೆ
ಮುಗ್ಧ ಮಾನವ ಕೋಟಿಯ ಗುರುವಾದಿರಿ
ಬುದ್ಧನ ಹಾದಿಯಲ್ಲಿ ನಡೆದು ಹೋದಿರಿ
ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಬೆಂಗಳೂರು -560056
ಮೊ.9739758558
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments