*ಹಿರಿಯರು ಗಳಿಸಿಟ್ಟ ಆಸ್ತಿ ನಾವೆಲ್ಲರೂ ಬಳಸಿ ಬೆಳೆಸೋಣ- ಪ್ರೋ- ನಾನಾಸಾಹೇಬ ಹಚ್ಚಡದ*.


 "ಹಿರಿಯರು ಗಳಿಸಿಟ್ಟ ಆಸ್ತಿ ನಾವೆಲ್ಲರೂ ಬಳಸಿ ಬೆಳೆಸೋಣ- ಪ್ರೋ- ನಾನಾಸಾಹೇಬ ಹಚ್ಚಡದ.


ಇಂಡಿ. ಇಲ್ಲಿನ ಪೋಲಿಸ್ ಪರೇಡ್ ಮೈದಾನದಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವ ತಾಲೂಕ ಆಡಳಿತ ಇಂಡಿಯ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಉಪನ್ಯಾಸಕರು ಅತಿಥಿಗಳಾಗಿ ಭಾಗವಹಿಸಿ ನಮ್ಮ ಹಿರಿಯರು ನಮಗಾಗಿ ಕನ್ನಡ ನಾಡು ನುಡಿ ರಾಜ್ಯ ಕಟ್ಟಿ ಇಟ್ಟಿದ್ದಾರೆ, ಈಗ ನಾವೆಲ್ಲರೂ ಒಂದಾಗಿ ಸರ್ವ ಜನಾಂಗದ ತೋಟದ ಹೂಗಳಂತೆ ಕೂಡಿಕೊಂಡು ಕನ್ನಡ ಬಳಸಿ ಉಳಿಸಿಕೊಂಡು ಹೋಗೋಣ , ಇದು ನಮ್ಮೆಲ್ಲರ ಜವಾಬ್ದಾರಿ ಕೆಲಸ, ಎಂದು ನುಡಿದರು‌

ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಶ್ರೀ ಅಜಿಮ್ ಗದ್ಯಾಳ ಮಾನ್ಯ ಉಪ ವಿಭಾಗಾಧಿಕಾರಿಗಳು ಹಾಗೂ ಉಪ ವಿಭಾಗೀಯ ದಂಡಾಧಿಕಾರಿಗಳು ಮಾಡಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಯಶವಂತರಾಯಗೌಡ ಪಾಟೀಲ್ ಸಮಾನ್ಯ ಶಾಸಕರು ವಹಿಸಿದ್ದರು.   ಮುಖ್ಯ ಅತಿಥಿಗಳಾಗಿ ಶ್ರೀ ಎಮ್ ಬಿ ಪಾಟೀಲರು ಸನ್ಮಾನ್ಯ ಬೃಹತ್ ಮತ್ತು ಮಾಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವರು ಆಗಮಿಸಿದ್ದರು ಹಾಗೂ

ಕಾರ್ಯಕ್ರಮದ ವಿಶೇಷ ಉಪನ್ಯಾಸಕರು ಪ್ರೊಫೆಸರ್ ನಾನಾಸಾಹೇಬ ಸಹಾಯಕ ಪ್ರಾಧ್ಯಾಪಕರು ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಶರಣಬಸವ ವಿಶ್ವವಿದ್ಯಾಲಯ ಕಲಬುರ್ಗಿ ಇವರು ಕನ್ನಡ ನಾಡು ನುಡಿಯ ಸಂಸ್ಕೃತಿ ವಾಸ್ತುಶಿಲ್ಪ ಹಾಗೂ ಕನ್ನಡ ಭಾಷೆಯ ಇತಿಹಾಸ ಕನ್ನಡ ನಾಡಿನ ವೈಶಿಷ್ಟ್ಯತೆ ಕನ್ನಡ ಭಾಷೆಗೆ ವಿಶಿಷ್ಟ ಭಾಷೆ ಎಂಬುದನ್ನು ಕುರಿತು ಉಪನ್ಯಾಸ ನೀಡಿದರು.

 ಕಾರ್ಯಕ್ರಮದಲ್ಲಿ ಶ್ರೀ ಬಿ ಎಸ್ ಕಡಕಬಾವಿ ಮಾನ್ಯ ತಸಿಲ್ದಾರರು ಇಂಡಿ. ಶ್ರೀ ಬಾಬುರಾವ್ ರಾಥೋಡ್ ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಇಂಡಿ ಪೊಲೀಸ್ ಉಪಾಧ್ಯಕ್ಷರು.  ಶ್ರೀ ಮಹಾಂತೇಶ ಹಂಗರಗಿ ಮುಖ್ಯ ಅಧಿಕಾರಿಗಳು ಪುರಸಭೆ ಹಾಗೂ ತಾಲೂಕಿನ ಎಲ್ಲಾ ಆಡಳಿತ ಮಂಡಳಿಯ ಅಧಿಕಾರಿಗಳು ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿ ಆರ್ ಸಿ ಮತ್ತು ಸಿ ಆರ್ ಸಿ ಗಳು ತಾಲೂಕ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು . ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ಮಕ್ಕಳಿಂದ ವಿಶೇಷ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿಶೇಷ ಸಾಧಕರನ್ನ ಗೌರವಿಸಿ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.

ವರದಿ :ಡಾ. ವಿಲಾಸ್ ಕಾಂಬಳೆ

ಹಾರೂಗೇರಿ 

Image Description

Post a Comment

0 Comments