* ಮಹಾನ ಮೂರ್ತಿ*

 *ನಮ್ಮ ಹಾವೇರಿ ಹಿರಿಯ ಸಾಹಿತಿ ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ್ ಕುಲಕರ್ಣಿ ಗುರುಗಳಿಗೆ ಅಭಿಮಾನದ ಗುರುಕಾಣಿಕೆ ಸಲ್ಲಿಸಲು ಸಹಕಾರ ನೀಡಿದ ಜನಮಿಡಿತ ಪತ್ರಿಕೆಯ ತುಂಬುಹೃದಯದ ಧನ್ಯವಾದದೊಂದಿಗೆ ತಮ್ಮೊಂದಿಗೆ ಧನ್ಯವಾದಗಳು*🙏🙏


            *ಮಹಾನ ಮೂರ್ತಿ*



ಧಾರವಾಡ ಪೆಡಾದ ಸಿಹಿ

ಹಾವೇರಿಗೆ ತಂದರು ಸಾಹಿತ್ಯ ಸಿರಿ

ವಿದ್ಯುತ ಬೆಳಕಿನ ಕಾಯಕ ಮಾಡಿ

ಸಾಹಿತ್ಯಕ್ಕೆ ಬೆಳಕಾದರು ನಮ್ಮ ಗುರುಗಳು


ರಂಗ ಕಲಾ ನಾಟಕದ ಆಸಕ್ತಿ

ಬೆಳೆಸುತ್ತಿರುವರು ಕಲಾಭಕ್ತಿ

ಯುವ ಪ್ರತಿಭೆಗಳಿಗೆ ಸ್ಪೂರ್ತಿ

ಅವರೆಂದರೆ ಹಾವೇರಿ ಜನತೆಗೆ ಹಿರಿಯ ಸಾಹಿತಿ


ಕಟ್ಟತೇವ ಎನ್ನುತ ಕಟ್ಟಿದರು ಹಾಡು

ಆ ಕ್ರಾಂತಿಗೀತೆಗೆ ಪ್ರಖ್ಯಾತ ಪಡೆದರು

ಕರುನಾಡ ಮಣ್ಣಿನ ಹಾವೇರಿಯ ಕಣ್ಮಣಿ

ಅವರೆ ನಮ್ಮ ಸತೀಶ ಕುಲಕರ್ಣಿ ಗುರುಗಳು


ಅನುಭವದಾಸಕ್ತಿಯಿಂದ ಮೂಡಿದವು ನುಡಿಮುತ್ತುಗಳು

ಹಲವಾರು ಪಟ್ಯಪುಸ್ತಕದಲಿ ನೆಲೆಯಾದವು

ಅವರನ್ನಾರಿಸಿ ಬಂದವು ಸಕಲ ಕಲಾವಲ್ಲಭ ಪ್ರಶಸ್ತಿಗಳು

ಈಗ ದೊರೆಯಿತು ೬೮ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ


ಸರಳ ಸ್ವಭಾವತೆಯ ಸ್ನೇಹಜೀವ ವ್ಯಕ್ತಿ

ಸಹಜ ಸಂಪ್ರೀತಿಯ ಮೂರ್ತಿ

ಹಾವೇರಿಗೆ ಸಂಧಿತು ಅವರಿಂದ ಕೀರ್ತಿ

ಆ ಮಹಾನ ಮೂರ್ತಿಗೆ ಹಾವೇರಿ ಜನತೆಯ ಅಭಿನಂದನೆಗಳು



                *ಸಂತೋಷ ವಿ.ಪಿಶೆ*

                      *ಹಾವೇರಿ*

Image Description

Post a Comment

0 Comments