*ಡಾ. ವಾಣಿಶ್ರೀ ಕಾಸರಗೋಡು*
*ಗಡಿನಾಡ ಕನ್ನಡತಿ*
ದೀಪಾವಳಿ
ಸಾಲು ಹಣತೆಯ ದೀಪಗಳು ಜಗವ ಬೆಳಗಿದೆ ನೋಡಿರಿ
ಮನ ಮಂದಿರದ ಕಲ್ಮಶಗಳು ಸರಿದು ಹೋಗಿದೆ ಕಾಣಿರಿ
ದಿವ್ಯ ಜ್ಯೋತಿಯ ಪ್ರಖರತೆ ಬದುಕನು ಬೆಳಗಿದೆ ನಂಬಿರಿ
ಕೂಡಿ ಬಾಳುವ ಜೀವನ ಸಾರ್ಥಕ ಬದುಕೆಂದು ತಿಳಿಯಿರಿ
ಸಣ್ಣ ಹಣತೆಯ ಬೆಳಕು ಕತ್ತಲ ಕರಿಛಾಯೆಯ ಕಳೆವುದು
ಸಂಸ್ಕಾರ ಸಂಸ್ಕೃತಿ ಮನುಜನ ನಿಜಗುಣ ತೋರುವುದು
ದೀಪಗಳ ಹಬ್ಬವು ಮನದಿ ಸಡಗರ ಸಂಭ್ರಮ ತರುವುದು
ಅರಿತು ಬಾಳಿದರೆ ಮನೆಯಲ್ಲಿ ಸುಖಶಾಂತಿ ನೆಲೆಸುವುದು
ಸಾವಿರ ಸಾವಿರ ಹಣತೆಗಳ ದೀಪ ಜಗದಿ ಪ್ರಜ್ವಲಿಸಲಿ
ಮನದಿ ಆನಂದದಿ ಸುಜ್ಞಾನವೆಂಬ ಕಿರು ಬೆಳಕು ಬೆಳಗಲಿ
ಸುಖ ಸಂತಸಗಳು ಬದುಕಲಿ ಇನ್ನಷ್ಟು ಇಮ್ಮಡಿಯಾಗಲಿ
ದೀಪಗಳ ಹಬ್ಬವು ಸಮಸ್ತ ಜನತೆಗೆ ಮಂಗಲಕರವಾಗಲಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments