*ಗುರುಕುಲ ವಿದ್ಯಾ ರತ್ನ ಪ್ರಶಸ್ತಿಗೆ : ಪ್ರೌಢಶಾಲಾ ಶಿಕ್ಷಕ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ : ನಿಜಗುಣಯ್ಯ ಹೆಚ್ ಎಸ್ ಆಯ್ಕೆ *

 ಗುರುಕುಲ ಕಲಾ ಪ್ರತಿಷ್ಠಾನ ಕೇಂದ್ರ ಸಮಿತಿ ತುಮಕೂರು ವತಿಯಿಂದ ಅಖಿಲ ಭಾರತ ಮಟ್ಟದ 3 ನೇ ಗುರುಕುಲ ಕಲಾ ಸಮ್ಮೇಳನ ವಿಜಯನಗರ ಜಿಲ್ಲೆ ಹಂಪಿಯಲ್ಲಿ ಅದ್ದೂರಿ ಕಾರ್ಯಕ್ರಮ .ಕವಿ ಗೋಷ್ಠಿ .ವಿಚಾರ ಗೋಷ್ಠಿ  ನಡೆಯಲಿದ್ದು  ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು  ಗುರುತಿಸಿ ಸಮಾಜಕ್ಕೆ ಮಾದರಿಯಾಗುವ ಕಾರ್ಯ ಮಾಡುವ ಸಾಧಕರಿಗೆ ಸನ್ಮಾನವಿದ್ದು  ಈ ಕಾರ್ಯಕ್ರಮದಲ್ಲಿ ಗುರುಕುಲ ವಿದ್ಯಾರತ್ನ (ಶಿಕ್ಷಣ)ಪ್ರಶಸ್ತಿಯನ್ನು  ಸಮಾಜ ಕಲ್ಯಾಣ ಇಲಾಖೆಯ ಡಾ ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ನೊಣವಿನಕೆರೆ   ತಿಪಟೂರು ತಾಲ್ಲೂಕು ತುಮಕೂರು ಜಿಲ್ಲೆಯ  ಪ್ರೌಢಶಾಲಾ ಶಿಕ್ಷಕರು ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ  ನಿಜಗುಣಯ್ಯ ಹೆಚ್ ಎಸ್  ಅವರ  ಇದುವರೆಗಿನ ಶೈಕ್ಷಣಿಕ ಸೇವೆ ಶಾಲಾ ಮಟ್ಟ.ತಾಲ್ಲೂಕು ಮಟ್ಟ .ಹಾಗೂ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ಸೇವೆಯನ್ನು ಗುರುತಿಸಿ ಗುರುಕುಲ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ರಾದ ಹುಲಿಯೂರುದುರ್ಗ ಲಕ್ಷ್ಮೀನಾರಾಯಣ್ ರವರು  ಹಾಗೂ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾದ  ವೆಂಕಟೇಶ್ ಬಡಿಗೇರ್ ರವರು ಹಾಗೂ ಸರ್ವ ಪದಾಧಿಕಾರಿಗಳು ಆಯ್ಕೆ ಮಾಡಿದ್ದು ಇದೇ ತಿಂಗಳ 18 ನೇ ತಾರೀಖು ಹಂಪಿಯಲ್ಲಿ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ  ಇವರಿಗೆ ಗುರುಕುಲ ವಿದ್ಯಾ ರತ್ನ (ಶಿಕ್ಷಣ )ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಇವರಿಗೆ ಸಮಸ್ತ ಸ್ನೇಹಿತರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದ್ದಾರೆ.

ವರದಿ :ಡಾ. ವಿಲಾಸ್ ಕಾಂಬಳೆ


ಹಾರೂಗೇರಿ 

Image Description

Post a Comment

0 Comments