*ಏನಿಲ್ಲ ಈ...ಕನ್ನಡ ನಾಡಿನಲ್ಲಿ!*


 ...ಕನ್ನಡ ರಾಜ್ಯೋತ್ಸವ..೧.೧೧.೨೩.


ಶೀರ್ಷಿಕೆ....


*ಏನಿಲ್ಲ ಈ...ಕನ್ನಡ ನಾಡಿನಲ್ಲಿ!*

**********(((((($$$$)))))******


ಕಟ್ಟೋದು ಬೇಡ ನಾವಿಂದು ಹೊಸ ನಾಡಿನ್ನೊಂದನು,ಏನಿಲ್ಲ ಈ ನಾಡಲಿ


ಕಟ್ಟಿಹರು ಹಿರಿಯರು ಕರುನಾಡನು.

ಇದರಲ್ಲೆ ಐಕ್ಯತೆಯಿಂದ ಬಾಳೋಣ!


ಬಿಟ್ಟು ಬಾಳೋಣ ಜಾತಿಕುಲ ಧರ್ಮ

ಭಿನ್ನತೆಯದೂರಿಟ್ಟು ಒಂದಾಗಿರೊಣ


ಗಡಿನಾಡೆ ಇರಲಿ,ನಡುನಾಡೇ ಇರಲಿ.

ಒಡನಾಡಿ ಕನ್ನಡಿಗರಾಗಿ ಬಾಳೋಣ!


ಬಡಿದಾಡಿಕಡಿದಾಡಿ ದ್ವೇಷವಕಾರುತ

ಖಡುವೈರಿಯಂತೆ ಬಾಳೊಂದುಬಾಳೆ


ಕನ್ನಡಮ್ಮನ ಕುಡಿ ಕಂದಮ್ಮಗಳಾವು.

ಕನ್ನಡಮ್ಮಗೆ ನೋವುತರುವುದೇತಕೈ!


ಬೆಟ್ಟಗುಡ್ಡ ಬಯಲು ಹಸಿರುಟ್ಟ ನೆಲ

ಭತ್ತರಾಗಿಜೋಳತೊಗ್ರೆ ಧಾನ್ಯಕಣಜ


ಕಂಗುತೆಂಗು ಅಡಿಕೆಬಾಳೆಹೂದೊಟ

ಕಬ್ಬು ರಬ್ಬರ್ ರೇಷ್ಮೆ ಸಿರಿಯುಟ್ಟನೆಲ


ಕೃಷ್ಣೆ ತುಂಗೆ ಭದ್ರೆ ಕಾವೇರಿ ಜಲಧಾರೆ

ಆಣೆಕಟ್ಟೆ ಜಲಾಶಯ ನೀರಾವರಿಕೆರೆ.


ಚಿನ್ನಬೆಳ್ಳಿ ತಾಮ್ರಕಬ್ಬಿಣ ಧಾತುಆಗರ

ಗಣಿ,ಕೈಗಾರಿಕೆ ಉದ್ಯೋಗಭರಪೂರ


ಚಿನ್ನದಂಬಾರಿಹೊತ್ತು ಮೆರೆವವೈಭವ

ಚಿನ್ನವನ್ನೇ ಮಾರುತ್ತಿದ್ದ ಸಂತೆಯಿಲ್ಲಿ!!


ಕಲ್ಲಿನಲ್ಲಿ ಕಲೆಯನರಳಿಸಿದಶಿಲ್ಪಿಗಳು

ವಿಶ್ವವಿಖ್ಯಾತವಾಸ್ತು,ಶಿಲ್ಪಕಲೆಅಮರ


ದೇಶಭಾಷೆಯಲ್ಲೆ ಅಘ್ರ ಕನ್ನಡಭಾಷೆ

.......ಭಾಷಾ ಸಾಹಿತ್ಯಕೆ ಹೆಚ್ಚು ಜ್ಞಾನಪೀಠ!


ಸಂಗೀತ ಸಾಹಿತ್ಯ ನೃತ್ಯ ಕಲೆಯಾಗರ

ವಚನ ಕೀರ್ತನೆ ಕನ್ನಡಿಗ್ರಿಗೆಜನಜನಿತ


ಸಿಲಿಕಾನ್ ಕಣಿವೆ ಬೆಂಗಳೂರ ನಗರ

ಅಂತರ್ಜಾಲಾಧರಿತವೃತ್ತಿವಿಶ್ವಮಾನ್ಯ


ಇಷ್ಟೆಲ್ಲ ಸಮೃದ್ಧನಾಡು ಇರುವಾಗೇಕೆ

ಇನ್ನೊಂದು ನಾಡುಕಟ್ಟೋ ಕರೆ ಏಕೆ!!


ಇರುವ ಸಿರಿ ಕರುಣಾಡಿನಲ್ಲೆ ನಾವೆಲ್ಲ

ಇರುವ ಸಿರಿಯನ್ನೆಉಳಿಸಿ ಬಾಳೊಣ


ಇರುವ ಸಿರಿಯನುಂಡೆ ಸುಖಿಸೋಣ

ಇರುವ ಸೌಖ್ಯವ ಕೆಡಿಸದೆ ಬಾಳೊಣ


ನಮ್ಮಲ್ಲಿಹ ಬೇಧದೂರಿಟ್ಟರೆ ಸಾಕಷ್ಟೆ

ನಮ್ಮೀ ನಾಡೇ ಸುಖಮಯ ಸಗ್ಗವೊ


ನೆಮ್ಮದಿಯ್ನೆಲೆ ಕನ್ನಡಮ್ಮನ ಮಡಿಲು

ನಮ್ಮೆಲ್ರಲಿರಲಿ ಕನ್ನಡಿಗರೆಂಬ ಹೆಮ್ಮೆ!


ಕನ್ನಡ ನೆಲಜಲ ನುಡಿ ಅಭಿಮಾನವು

ಕನ್ನಡಿಗ್ರಲಿ ಪರಂಪರಾಗತ ಸಾಗುತಿರೆ!


ಆಗಷ್ಟೇ ಉಳಿವೋ ಕನ್ನಡ ಭಾಷೆಗೆ..

ಆಗಷ್ಟೇ ಉಳಿವೋ ಕನ್ನಡ ನಾಡಿಗೆ!!


******************************

ಶ್ರೀ ನಟರಾಜ್ ದೊಡ್ಡಮನಿ.

ಶಿಕ್ಷಕರು.ಶ್ರೀ ವೀರಭದ್ರೇಶ್ವರ ಪ್ರೌಢ ಶಾಲೆ. ಕ್ಯಾಸಿನಕೆರೆ. ಹೊನ್ನಾಳಿ. ತಾ.

ದಾವಣಗೆರೆ. ಜಿ. 9972379466.

Image Description

Post a Comment

0 Comments