*ಕನ್ನಡ ಮಾತೆ *

 ಕನ್ನಡ ಮಾತೆ 



ಇವಳೆ ನಮ್ಮ ಕನ್ನಡ ಮಾತೆ 

ಇವಳೆ ನಮ್ಮ ಜನ್ಮದಾತೆ 

ಅನ್ನ ನೀರು ಕೊಟ್ಟು ನಮ್ಮ 

ಸಲುಹಿದಂಥ ಕನ್ನಡಾಂಬೆ 


ಇಲ್ಲಿ ಆದಿ ಕವಿ ಪಂಪ 

ಇಲ್ಲಿ ರಾಷ್ಟ್ರಕವಿ ಕುವೆಂಪು 

ಹುಟ್ಟಿ ಬೆಳೆದು ಬರೆದರು 

ಬೆಳಕು ಚೆಲ್ಲಿ ನಿಂತರು 


ಇಲ್ಲಿ  ಹಸಿರನುಟ್ಟು 

ಬೆಟ್ಟ ಕಣಿವೆ ನಲಿದವು 

ಇಲ್ಲಿ ಹೆಣ್ಣು ಹಾಡಲು

ನವಿಲು ನಾಟ್ಯವಾಡಿವೆ 


ಮುಗಿಲ ತಾರೆಗಳೇ 

ನಮ್ಮ ನಾಡ ಚಪ್ಪರ 

ಸೂರ್ಯ ಚಂದ್ರರೇ 

ಉರಿವ ಗಂಧ ಕರ್ಪೂರ 


ಮುತ್ತು ರತ್ನ ಹವಳ 

ಇವಳ ಮಡಿಲ ತುಂಬಿವೆ 

ಬೆಳೆದು ರಾಗಿ ಜೋಳ ಭತ್ತ 

ನಮ್ಮ ಹಸಿವು ಕಳೆದಿವೆ


ದೀಪ ಹಚ್ಚಿ ಧೂಪ ಹಾಕಿ 

ಆರತಿಯ ಬೆಳಗೋಣ 

ಉಧೋ ಕರುನಾಡ ಮಾತೆ 

ಎಂದು ಹೇಳಿ ನಲಿಯೋಣ


    ಉದಂತ ಶಿವಕುಮಾರ್

    ಕವಿ ಮತ್ತು ಲೇಖಕ

    ಜ್ಞಾನ ಭಾರತಿ ಅಂಚೆ

    ಬೆಂಗಳೂರು-560056

     ಮೊ. 9739758558

Image Description

Post a Comment

0 Comments