*ಶ್ರೀ ಹೊನ್ಕಲ್ ಸಾಹಿತ್ಯ ಪ್ರಶಸ್ತಿಗಾಗಿ ಕನ್ನಡ ಕೃತಿಗಳ ಅಹ್ವಾನ.*

 *ಶ್ರೀ ಹೊನ್ಕಲ್ ಸಾಹಿತ್ಯ ಪ್ರಶಸ್ತಿಗಾಗಿ ಕನ್ನಡ ಕೃತಿಗಳ ಅಹ್ವಾನ.*



ಆತ್ಮೀಯರೇ,

ಪ್ರತಿ ವರ್ಷದಂತೆ ನಮ್ಮ ತಂದೆಯ ಸ್ಮರಣಾರ್ಥ ಕಳೆದ ಒಂಬತ್ತು ವರ್ಷಗಳಿಂದ ನಡೆಯಿಸಿಕೊಂಡು ಬಂದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ  ನಮ್ಮ ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಟ್ರಸ್ಟ್ (ರಿ) ದ ಮೂಲಕ  ಕಥೆ,ಕಾದಂಬರಿ, ಕಾವ್ಯ, ಲಲಿತ ಪ್ರಬಂಧ, ಆತ್ಮಕಥನ, ಹೀಗೆ ವಿವಿಧ ಪ್ರಕಾರಗಳಲ್ಲಿ ಐದು ಶ್ರೇಷ್ಠ ಕೃತಿಗಳಿಗೆ *ಶ್ರೀ ಹೊನ್ಕಲ್ ಸಾಹಿತ್ಯಿಕ ಪುರಸ್ಕಾರ, ಬೆಳ್ಳಿ ಪದಕ ಹಾಗೂ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ಗೌರವ‌ ಸನ್ಮಾನದೊಂದಿಗೆ ನೀಡಲಾಗುವುದು. ಪ್ರಶಸ್ತಿಯ ಆಯ್ಕೆ ಸಮಿತಿಯವರು ಆಯ್ಕೆ ಮಾಡಿದ ಕೃತಿಯ ಲೇಖಕ/ಲೇಖಕಿಯರು ಖುದ್ದಾಗಿ ಭಾಗವಹಿಸಿ ಪುರಸ್ಕಾರ ಪಡೆಯುವಂತಿದ್ದರೆ ಮಾತ್ರ ಕಳುಹಿಸಬೇಕು. ಆ ಕಾರಣದಿಂದ ಯಾವುದೇ ಪ್ರಕಾಶಕರು,ಇತರರು ಕಳಿಸಿದ ಕೃತಿಗಳನ್ನು ಪರಿಗಣಿಸುವದಿಲ್ಲ. ಬೇರೆಯವರು ಕಳುಹಿಸಬಾರದು.


 *ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಪುಸ್ತಕ ಲೋಕಾರ್ಪಣೆ, ಕವಿಗೋಷ್ಠಿ* ಮುಂತಾದ ಕಾರ್ಯಕ್ರಮದ ಜೊತೆ ಡಿಸೆಂಬರ್-೨೩ ರ ಒಳಗೆ ನಡೆಸಲಾಗುವುದು ಎಂದು ಪ್ರತಿಷ್ಠಾನದ ಸಂಸ್ಥಾಪಕ-ಲೇಖಕ ಶ್ರೀ ಸಿದ್ಧರಾಮ ಹೊನ್ಕಲ್ ಈ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.


ಆಸಕ್ತರು ತಮ್ಮ ೨೦೨೨ ಹಾಗೂ ೨೦೨೩ ರಲ್ಲಿ ಪ್ರಕಟವಾದ ಕೃತಿಗಳ ಎರಡು ಪ್ರತಿಗಳನ್ನು ಈ ಕೆಳಗಿನ ವಿಳಾಸಕ್ಕೆ ರಿಜಿಸ್ಟರ್ ಬುಕ್ ಪೋಸ್ಟ್, ತೆರೆದ ಅಂಚೆ ಅಥವಾ ಪ್ರೊಫೆಶನಲ್ ಕೋರಿಯರ್ ಮೂಲಕ ಈ ಮುಂದಿನ ವಿಳಾಸಕ್ಕೆ ೨೦-೧೧-೨೦೨೩ ರ ಒಳಗೆ ತಲುಪುವಂತೆ ಕಳಿಸಲು ಕೋರಲಾಗಿದೆ. ಶ್ರೀ ಜಗದೀಶ ಹೊನ್ಕಲ್, ಶ್ರೀ ಅಲ್ಲಮಪ್ರಭು ಪ್ರಕಾಶನ, ಕಾವ್ಯಾಲಯ, ಲಕ್ಷ್ಮೀನಗರ, ಲಕ್ಷ್ಮೀಗುಡಿ ಹತ್ತಿರ, ಅಂಚೆ-ಶಹಾಪುರ- ೫೮೫೨೨೩, ಯಾದಗಿರಿ ಜಿಲ್ಲೆ. ಮೊಬೈಲ್ ನಂ.೯೯೪೫೯೨೨೧೫೧.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು.


*ಶ್ರೀ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ* *ಪ್ರತಿಷ್ಠಾನ ಟ್ರಸ್ಟ್ (ರಿ) ಶಹಾಪುರ.ಯಾದಗಿರಿ ಜಿಲ್ಲಾ.*






Image Description

Post a Comment

0 Comments