*"ಅಪ್ಪ ನಿನ್ನ ನೆನೆದು"*
ಅಪ್ಪ ಎಂದು ಗಟ್ಟಿಯಾಗಿ ಕೂಗಿದರು ಹೊರ ಬಾರದೆ ನಿಂತು ಹೋಯಿತು ನನ್ನ ಧ್ವನಿ ಇಂದು.
ಅಪ್ಪ ಅಪ್ಪ ಎಂದು ಹೃದಯ ತುಂಬಿ ಕೂಗಿದರು ಕಿವುಡನಾದೆ ಏಕೆ ಇಂದು.
ನಿನ್ನ ಭುಜಕ್ಕೆ ಹೆಗಲ ಕೊಡುವ ಹಾಗೆ ಬೆಳೆಯುತ್ತಿರುವೆವು ನೋಡದೆ ಕುರುಡನಾದೆ ಏಕೆ ಇಂದು.
ನಿನ್ನ ಮಾತು ಕೇಳಲು ಮುಂದೆ ನಿಂತಿರುವೆವು ನಾವುಗಳು ಮಾತು ಬಾರದ ಮೂಕನಾದೆ ಏಕೆ ಇಂದು.
ಅರಿವಿಲ್ಲದೆ ತಪ್ಪು ಮಾಡುತ್ತಿರುವೆವು ಸರಿ ದಾರಿ ತೋರದೆ ದೂರ ಸರಿದು ಬಿಟ್ಟೆಯಲ್ಲಾ ಏಕೆ ಇಂದು ನೀನು.
ಅವ್ವನ ಪ್ರೀತಿ ಕರುಣೆ ಮಮತೆ ತುಂಬಿದರೆ ಅಪ್ಪ ನಿನ್ನ ಪ್ರೀತಿ ಧೈರ್ಯದ ಸ್ಪೂರ್ತಿ ತುಂಬಲು ಸುಮ್ಮನಾಗಿಬಿಟ್ಟೆ ಏಕೆ ಇಂದು ನೀನು.
ನಿನ್ನನು ಸದಾ ನೋಡುವ ಅದೃಷ್ಟ,
ನಿನ್ನ ಮಾತುಗಳು ಕೇಳುವ ಪುಣ್ಯ,
ನಿನ್ನ ಅಪ್ಪುಗೆಯ ಋಣ ಪಡೆಯಲು
ನಿನ್ನ ದೂರ ಮಾಡಿಕೊಂಡಿರುವ ನಾವೇ ದುರದೃಷ್ಟರು.
ನಿನ್ನ ಪ್ರೀತಿಯನ್ನು ಮರು ಜನ್ಮಕ್ಕೂ ಬೇಡುವ ನಿನ್ನ ಮಕ್ಕಳು ನಾವು ಅಪ್ಪ.
ರಾ.ನಾ.ಮಾಂಕ್...
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments