"ವೃಕ್ಷಮಾತೆ ತಿಮ್ಮಕ್ಕ " ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರು ತುಮಕೂರು
ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದರು .ತಂದೆ- ಚಿಕ್ಕ ರಂಗಯ್ಯ ತಾಯಿ -ವಿಜಯಮ್ಮ ಇವರಿಗೆ ಯಾವುದೇ ಔಪಚಾರಿಕ ಶಿಕ್ಷಣ ಲಭ್ಯವಾಗದೆ ಹತ್ತಿರದ ಒಂದು ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡಿದರು. ಇವರ ಸಂಗಾತಿ- ಚಿಕ್ಕಯ್ಯ ಈ ದಂಪತಿಗೆ ಮಕ್ಕಳಾಗಲಿಲ್ಲ ಆದ್ದರಿಂದ ಇವರು ಹುಲಿಕಲ್ ಮತ್ತು ಕುದೂರಿನ ನಡುವಿನ ಹೆದ್ದಾರಿ 45 ಕಿ.ಮೀ 28 ಮೈಲಿ ಉದ್ದಕ್ಕೂ 385 ಆಲದಮರಗಳನ್ನು ನೆಟ್ಟು ಪೋಷಿಸಿರುವ. ಅವರು ಹೆಸರುವಾಸಿಯಾಗಿದ್ದಾರೆ. ಅವರು ಸುಮಾರು 8,000 ಇತರ ಮರಗಳನ್ನು ನೆಟ್ಟಿದ್ದಾರೆ ತನ್ನ ಗಂಡನ ಬೆಂಬಲದೊಂದಿಗೆ ಅವಳು ಮರಗಳನ್ನು ನೆಡುವುದರಲ್ಲಿ ಸಾಂತ್ವನ ಕಂಡುಕೊಂಡಳು .ಆಕೆಯನ್ನು ಭಾರತದ ರಾಷ್ಟ್ರೀಯ ನಾಗರಿಕ ಪ್ರಶಸ್ತಿಯೊಂದಿಗೆ ಗೌರವಿಸಲಾಗಿದೆ .ಅವರ ಕೆಲಸವನ್ನು ಭಾರತ ಸರ್ಕಾರ ಗುರುತಿಸಿದೆ. ಮತ್ತು ಅವರಿಗೆ 2019 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. Us ಪರಿಸರ ಸಂಸ್ಥೆಯು ತಿಮ್ಮಕ್ಕನ ಪರಿಸರ ಶಿಕ್ಷಣಕ್ಕಾಗಿ ಸಂಪನ್ಮೂಲಗಳು ಎಂದು ಅವಳ ಹೆಸರು ನೀಡಲಾಗಿದೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು 2020ರಲ್ಲಿ ತಿಮ್ಮಕ್ಕ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.
ಸ್ನೇಹಿತರೆ ಸಾಲುಮರದ ತಿಮ್ಮಕ್ಕ ಅವರ ಹಾಗೆ ಆಗದಿದ್ದರೂ. ನಾವು ನಮ್ಮ ಮನೆಯ ಮುಂದೆ ಕುಂಬಿಗಳಲ್ಲಿ ಎಷ್ಟು ಸಾಧ್ಯವೊ ಅಷ್ಟು ಗಿಡಗಳನ್ನು ಹಚ್ಚಬೇಕು ಆಮ್ಲಜನಕ ಚೆನ್ನಾಗಿ ಬರುತ್ತದೆ. ಮತ್ತು ನಾವು ಆರೋಗ್ಯವಾಗಿರುತ್ತೇವೆ.
✍️ಸರಿತಾ ರಾಜಗೋಳಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments