"ಬಿ ಆರ್ ಲಕ್ಷ್ಮಣ ರಾವ್ ಅವರ ಹನಿಗವಿತೆಗಳು "
ಕನ್ನಡದ ಹನಿಗವಿತೆಗಳ ವ್ಯಾಪ್ತಿಯನ್ನು ಹಿಗ್ಗಿಸಿದವರಲ್ಲಿ ಪ್ರಮುಖರು ಹಿರಿಯ ಕವಿ ಬಿ ಆರ್ ಲಕ್ಷ್ಮಣರಾವ್ ಅವರು .ಕನ್ನಡದ ಮುಖ್ಯ ಕವಿಗಳಲ್ಲಿ ಒಬ್ಬರಾದ ಅವರು ನವ್ಯದ ಸಂದರ್ಭದಲ್ಲಿ ಕನ್ನಡಿಗರಿಗೆ ಕವಿತೆಯ ಓದನ್ನು ದೂರವಾಗದಂತೆ ನೋಡಿಕೊಂಡವರು . ನವ್ಯೋತ್ತರ ಕಾಲಘಟ್ಟದಲ್ಲಿ ಅವರು ಕನ್ನಡದ ಮುಖ್ಯ ಭಾವಗೀತ ಕವಿಗಳಾಗಿಯೂ ಹೆಸರು ಮಾಡಿದವರು. ಸುಗಮ ಸಂಗೀತದ ಮೂಲಕ ಕ್ಯಾಸೆಟ್ಗಳಾಗಿ ಕವಿತೆ ಮೈತಳೆದಾಗ ಅದರಲ್ಲಿ ತುಂಬ ಪ್ರಸಿದ್ಧರಾದವರಲ್ಲಿ ಅವರೂ ಒಬ್ಬರು. ಕವಿತೆ ಕಥೆ, ,ನಗೆಗವಿತೆ, ಹನಿಗವಿತೆ ಹೀಗೆ ಕನ್ನಡ ಕಾವ್ಯದ ಎಲ್ಲ ಗೀತ ಪ್ರಕಾರಗಳಲ್ಲಿ ಅವರ ಸಾಧನೆ ಅನನ್ಯ. ಅವರು ನಲ್ಕು ಕಥ ಸಂಕಲನಗ ಳನ್ನೂ, ಒಂದು ಕಾದಂಬರಿಯನ್ನು ,ಐದು ಲೇಖನಗಳ ಸಂಕಲನಗಳನ್ನೂ ಬರೆದಿರುವದನ್ನು ಮರೆಯಬಾರದು.
ಭಾಗ-೧
ಒಂಬತ್ತನೆಯ ಸಪ್ಟಂಬರ್ ೧೯೪೬ ರಲ್ಲಿ ಚಿಕ್ಕಬಳ್ಳಾಪೂರ ಜಿಲ್ಲೆಯ ಚೀಮಂಗಲ ಗ್ರಾಮದಲ್ಲಿ ಬಿ.ಆರ್ ರಾಜಾರಾವ್, ಮತ್ತು ವೆಂಕಟಲಕ್ಷಮ್ಮನವರ ಪುತ್ರರಾಗಿ ಶ್ರೀಯುತರು ಜನಿಸಿದರು. ಅವರು ಉಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಬಿಆರ್.ಲ ಎಂದೇ ಹೆಸರಾದ ಲಕ್ಷ್ಮಣರಾವ್ ಅವರು ಕನ್ನಡದ ಮುಖ್ಯ ಕವಿಗಳು. ಹತ್ತು ಕವನ ಸಂಕಲನಗಳು ಸಂಕಲನಗಳು ಪ್ರಕಟವಾಗಿವೆ. ಕನ್ನಡ ನವ್ಯ ಕಾವ್ಯದ ಏರೇತ್ತರದ ಕಾಲಘಟ್ಟದಲ್ಲಿ ನವ್ಯದ ಪ್ರತಿನಿಧಿಯಾಗಿಯೇ ಪ್ರಕmಗೊಂಡ ೧೯೭೧ ರಲ್ಲಿ ಗೋಪಿ ಮತ್ತು ಗಾಂಡಲೀನ ಸಂಕಲನ ತುಂಬ ಪ್ರಸಿದ್ಧವಾಯಿತು. ನಂತರ ಟುವಟಾರ(೧೯೭೮), ಲಿಲ್ಲಿಪುಟ್ಟಿಯ ಹಂಬಲ (೧೯೮೧), ಶಾಂಗ್ರಿ-ಲಾ( ೧೯೮೭), ಅಫರಾಧಂಗಳ ಮನ್ನಿಸೋ ( ೧೯೯೨)ಎಡೆ(೧೯೯೮) ಇವಳು ನದಿಯಲ್ಲ( ೨೦೦೩)ನನ್ನ ಮಟ್ಟಿಗೆ( ೧(೨೦೧೪) ನವೋನ್ಮೇಷ( ೨೦೨೦) ಮನಸು ಬಾವಲಿಯಂತೆ ( ೨೦೨೧) ಅನುವಾದಿತ ಕವಿತೆಗಳು ಅಲ್ಲದೇ, ಹೊಸ ತಲೆಮಾರಿನ ಸ್ಪಂದನದೊಂದಿಗೆ ಅವರ ಗೋಪಿ ಮತ್ತು ಗಾಂಡಲೀನ ಅದು ಪ್ರಕಟವಾದ ೫೦ ವರ್ಷಗಳ ಸಂದರ್ಭದಲ್ಲಿ ಹೊಸ ಓದುಗರ ಸಂವೇದನೆಯೊಂದಿಗೆ ಪ್ರಕಟವಾಗಿದೆ. ಆರು ಆಯ್ದ ಕವಿತೆಗಳ ಸಂಕಲನಗಳೂ, ಎರಡು ಹನಿಗವಿತಾ ಸಂಕಲನಗಳು, ನೀ-ನಗು ನ-ನಗು, ನಗೆ ಬಗೆ ಬಗೆ ಬೆಂದಿAಗಳ ಬಾಲೆ ಎಂಬ ವಿನೋದ ಕವಿತೆಗಳ ಸಂಕಲನಗಳೂ ಪ್ರಕಟವಾಗಿವೆ. ಅಂದರೆ ಕನ್ನಡದಲ್ಲಿ ಪ್ರತ್ಯೇಕವಾದ ವಿನೋದ ಕವಿತೆಗಳನ್ನು ಬರೆದ ಅದ್ವಿತೀಯ ಕವಿ ಅವರು. ಎರಡು ಸಮಗ್ರ ಕವಿತಾ ಸಂಕಲನಗಳು ಬಂದಿವೆ.
ಕನ್ನಡದ ಗದ್ಯ ಸಾಹಿತ್ಯ ಪ್ರಕರದಲ್ಲಿಯೂ ಕೊಡುಗೆ ನೀಡಿದ ಲಕ್ಷ್ಮಣರಾವ್ ಅವರು ಜೆಸ್ಟರ್ , ಕ£ಬ್ಬೆಕ್ಕು, ,ನಿರಂತರ (ಸಂಕಲಿತ ಕಥೆಗಳು) ಪ್ರೀತಿಯ ಬೆಳಕು ( ಸಮಗ್ರ ಕಥಾ ಸಂಕಲನ) ತಂದಿದ್ದಾರೆ. ಹೀಗೊಂದು ಪ್ರೇಮಕಥೆ ಅವರ ಏಕಮೇವ ಕಾದಂಬರಿ, ಹಾಗೆಯೇ ಇಂಗ್ಲೀಷಿನಿಂದ ಕನ್ನಡಕ್ಕೆ ರಜನೀಶ್ ನಿಜರೂಪ ಎಂಬ ಕೃತಿಯನ್ನು ಅನುವಾದಿಸಿದ್ದಾರೆ. ಮತ್ತು ಇತ್ಯಾದಿ, ಆಗಿಂದ್ದಾಗ್ಗೆ , ಪಡಿಮಿಡಿತ, ಬಿನ್ನಹಕೆ ಬಾಯಿಲ್ಲವಯ್ಯ ಎಂಬ ಲೇಖನಗಳ ಸಂಕಲನಗಳನ್ನೂ ಹೊರತಂದಿದ್ದಾರೆ. ನಾಟಕಗಳನ್ನೂ ಬರೆದಿರುವ ಶ್ರೀಯುತರು ಭಲೇಮಲ್ಲೇಶಿ , ನನಗ್ಯಾಕೋ ಡೌಟು, ಶೇಮ್ ಶೆಮ್ ರಾಜಾ ಎಂಬ ಸ್ವತಂತ್ರ ನಾಟಕಗಳನ್ನು ಮೂರು ರಂಗ ರೂಪಾಂತರಗಳು ಎಂಬ ಸಂಕಲಿತ ನಾಟಕ ಸಂಪುಟವನ್ನು ಪ್ರಕಟಿಸಿದ್ದಾರೆ. ಮಣಿಮಾಲೆ ಅವರ ವ್ಯಕ್ತಿ ಚಿತ್ರಗಳ ಸಂಕಲನ
ಕನ್ನಡದಲ್ಲಿ ಕವಿತೆಯ ಹುಟ್ಟು ಅದರ ಸ್ವರೂಪವನ್ನು ತುಂಬ ಲಾಲಿತ್ಯಪೂರ್ಣವಾಗಿ ಚಿಂತಿಸಿದವರಲ್ಲಿ ಬಿ ಅರ್ ಲ ಅವರು ಒಬ್ಬರು .ಕನ್ನಡದ ಕೆಲವು ಪ್ರಸಿದ್ಧ ಕವಿತೆಗಳು ಹುಟ್ಟಿದ ಬಗೆಯನ್ನು ಕವಿ(ತೆ)ಯ ಕತೆ ಎಂಬ ಸಂಕಲನವಾಗಿಸಿದ್ದರು. ಹಾಡಿನ ಜಾಡು ಎಂಬ ಸಮಕಲನದಲ್ಲಿ ಕನ್ನಡದ ಕೆಲವು ಪ್ರಸಿದ್ಧ ಭಾವಗೀತೆಗಳ ಹಿನ್ನೆಲೆಯನ್ನು ಕುರಿತು ಬರೆದಿದ್ದಾರೆ.
ಲ್ಲಿ ತ ಪ್ರಬಂಧ ಕ್ಷೇತ್ರಕ್ಕೂ ಅವರ ಕೊಡುಗೆ ಸಂದಿದೆ. ಮನಸೇ ನನ್ ಮನಸೇ ಎಂಬುದು ಅವರ ಲಲಿತ ಪ್ರಬಂಧಗಳ ಸಂಕಲನ.
ಮೇಲೆ ಹೇಳಿದಂತೆ ಸುಗಮಸಂಗೀತ ಕ್ಷೇತ್ರದಲ್ಲಿ ಅವರ ಭಾವಗೀತೆಗಳಿಗೆ ತಮ್ಮದೇ ಅದ ಪ್ರಮುಖ ಸ್ಥಾನವಿದೆ. ಅವರಪ್ರಸಿದ್ಧ ಭಾವಸಾಂದ್ರಿಕೆಗಳೆಂದರೆ (ಸಿಡಿ) ಸುಬ್ಬಾಭಟ್ಟರ ಮಗಳೇ, ಆಲಿಂಗನ, ಹೇಳಿ ಹೋಗು ಕರಣ, ಬಾ ಮಳೆಯೆ ಬಾ, ಸ್ನೇಹ ಸುಗಂಧ ಮೊದಲಾದವು. ದೂರದರ್ಶನ ಧಾರಾವಾಹಿಗಳಿಗೆ ಅವರ ಗೀತೆಗಳು ಶಿರ್ಷಿಕೆಗೀತಗಳಾಗಿಯೂ ಬಳಸಲ್ಪಟ್ಟಿವೆ. ಚಲನಚಿತ್ರಗೀತಗಳಾಗಿಯೂ ಅವರ ಕವಿತೆಗಳು ಕನ್ನಡಿಗರ ಮನಸಲ್ಲಿ ಉಳಿದಿವೆ.
ಈ ಹಿರಿಯ ಸಾಹಿತಿಗಳಿಗೆ ಕನ್ನಡದ ಹಿರಿಯ ಕಿರಿಯ ಓದುಗರು ಸೇರಿ ‘ಚಿಂತಾಮಣಿ,’ ಮತ್ತು ‘ಗೆಳೆಯ ಲಕ್ಷ್ಮಣ’ ಎಂಬ ಎರಡು ಅಭಿನಂದನ ಗ್ರಂಥಗಳನ್ನು ಸಮರ್ಪಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಗೋರುರು ಸಾಹಿತ್ಯ ಪ್ರಶಸ್ತಿ, ಚುಟುಕು ರತ್ನ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಡ ಪುತಿನ ಕಾವ್ಯ ಪುರಸ್ಕರ, ಆರ್ಯಭಟ ಪ್ರಶಸ್ತಿ ಕರ್ನಟಕ ರಾಜ್ಯೋಸವ ಪ್ರಶಸ್ತಿ ,ಅಮ್ಮ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ..ತ್ಯಾದಿ ಪ್ರಸ್ತಿಗಳೂ ಅವರ ಮುಡಿಸೇರಿವೆ. ಕೋಲರ ಜಿಲ್ಲಸಾಹಿತ್ಯ ಸಮ್ಮೆಳನದ ಕವಿಗೋಷ್ಟಿಯ ಸವಾಧ್ಯಕ್ಷತೆ, ಅಖಿಲ ಭಾರತ ಸಾಹಿತ್ಯ ಸಮ್ಮೆಳನದ ಕವಿಗೋಷ್ಠಿಯ ಅಧ್ಯಕ್ಷತೆ, ಅಮೇರಿಕ ನ್ಯೂಜೆರ್ಸಿಯಲ್ಲಿ ನಡೆದ ಅಕ್ಕ ಸಮಾವೇಶದ ಲ್ಲಿ ಆಹ್ವಾನಿತರೂ ಅಗಿದ್ದಾರೆ. ಸಿಂಗಪೂರ, ದೋಹ ಇಂಗ್ಲAಡ, ದುಬೈ ಶರ್ಜ, ಬಹರೇನ್ ಮೊದಲಾದ ದೇಶಗಳಲ್ಲಿ ನಡೆದ ಕಾವ್ಯ ಸಾಹಿತ್ಯಗೋಷ್ಠಿಗಳಲ್ಲಿ ಅವರು ಪ್ರತಿನಿಧಿಗಳಾಗಿ ಭಾಗವಹಿಸಿ ಸಮ್ಮಾನಿತರಾಗಿದ್ದಾರೆ. ಈ ಕವಿಗಳ ಕವಿತೆಗಳು ಇಂಗ್ಲೀಷ್ ,ಹಿಂದಿ, ಮಲಯಾಳಂ, ತ,ಮಿಳು, ತೆಲುಗು, ಬಂಗಳಿ ಕಸ್ಮಿರಿ, ಮೊದಲಾದ ಭಾರತಿಯ ಇತರ ಭಷೆಗಳಿಗೆ ಅನುವಾದಿತವಾಗಿವ. ಕರ್ನಾಟಕದ ಶಾಲೆಕಾಲೇಜುಗಳಿಗೆ ಪಠ್ಯವೂಆಗಿವೆ. ಅವರ ಕಥಗಳನ್ನು ಆದರಿಸಿ ಚಲನಚಿತ್ರಗಳು, ಧಾರಾವಾಹಿಗಳು ಆಗಿವೆ. ಇಷ್ಟೆಲ್ಲ ಹೇಳಿದರೂ ಅವರ ಕುರಿತು ಹೇಳಬೇಕಾದುದು ಇನ್ನೂ ಇದ್ದೇ ಇದೆ.
ಭಾಗ -೨
ಇಲ್ಲಿ ನನಗೆ ಮುಖ್ಯವಾದುದು ಅವರ ಕವಿತೆಗಳ ಬಗ್ಗೆ ಬರೆಯುವದಲ್ಲ. ಅವರೊಬ್ಬ ಕನ್ನಡ ಮುಖ್ಯ ಹನಿಗವಿ ಗಳಾಗಿರುವದರಿಂದ ಅವರ ಹನಿಗವಿತೆಗಳ ಅವಲೋಕನ ಈ ಲೇಖನದ ಉದ್ದೇಶವಾಗಿದೆ.
ಕನ್ನಡದ ಪ್ರಸಿದ್ಧ ಹನಿಗವಿತೆಗಳನ್ನು ಬರೆದವಬರು ಬಿಆರ್ ಲಕ್ಷ್ಮಣರಾವ್ ಅವರು .ಅವರ ಎರಡು ಹನಿಗವಿತೆಗಳ ಸಂಕಲನಗಳು ಬಂದಿವೆ. ೧೯೯೭ ರಲ್ಲಿ ಭಾರತ ಬಿಂದುರಶ್ಮಿ, ಪ್ರಕಟವಾಗಿತ್ತು.ಅವರ ಅರವತ್ತನೆಯ ಹುಟ್ಟು ಹಬ್ಬದ ಸದರ್ಭದಲ್ಲಿ ಅಂಕಿತ ಪ್ರಕಾಶನದವರು ಅವರ ಎಲ್ಲ ಹನಿಗವಿತೆಗಳನ್ನು ಒಂದೆಡೆ ತರುವ ಉದ್ದೇಶದಿಂದ ‘ಹನಿಗವಿತೆಗಳು’ ಎಂಬ ಸಂಕಲನ ಪ್ರಕಟಿಸಿÀದ್ದರು. ಹಾಸ್ಯ ಮಾತ್ರವೆ ಅಲ್ಲದೇ ಗಂಭೀರವಾದ ಆಲೋಚನೆಗಳನ್ನು ಕನ್ನಡ ಹನಿಗವನಗಳಲ್ಲಿ ವ್ಯಕ್ತ ಮಾಡಿದವರು ಬಿ.ಆರ್. ಲಕ್ಷ್ಮಣರಾವ್ ಅವರು. ಇಡೀ ಕಾವ್ಯ ಸೃಷ್ಟಿಯ ಅತ್ಮವನ್ನೇ ಹಿಡಿದಿಟ್ಟಿದ್ದಾರೆನೋ ಎನ್ನುವಂತಿರುವ ‘ಚಿಟ್ಟೆ’ ಎಂಬ ಹನಿಗವಿತೆ ಹೀಗಿದೆ.
ಪ್ರಿಯೆ, ಅಮೃತಕ್ಕೆ ಹಾರುವ ಗರುಡ,
ಬೇಂದ್ರೆ ಅಡಿಗ,
ಪಾಬ್ಲೋ ನೆರುಡ,
ನಾನೋ ,
ನಿನ್ನಂತ ಸುಂದರ
ಪುಷ್ಪಕ್ಕೆ ಹಾರುವ ಚಿಟ್ಟೆ
ಕ್ಷಣಿಕ ಲೊಳಲೊಟ್ಟೆ
ಆದರೂ ಸಧ್ಯಕ್ಕೆ
ವ್ಯಕ್ತ ಮಧ್ಯಕ್ಕೆ
ಸಾಕು
ಒಂದು ಬಿಂದು
ಮಕರಂದ
ಆನಂದ
ಹನಿಗವಿತೆ ವಾಮನ ಮೂರ್ತಿ .ಅದು ಬೇಂದ್ರೆ , ಅಡಿಗ, ಪಾಬ್ಲೋ ನೆರುಡ ರ ಕಾವ್ಯದ ಹಾಗೇ ಮಹಾಕಾವ್ಯವಲ್ಲ ದಿರಬಹುದು. ಅದರೆ ಸೃಷ್ಟಿಕ್ರಿಯೆಯ ಅದ್ಬುತಕ್ಕೆ ಬೇಕಾದ ಒಂದು ಬಿಂದುವಿನಂತೆ ಅದು ಎನ್ನುವಲ್ಲಿ ಕವಿ ಹನಿಗವಿತೆಯ ಮಹತ್ವವನ್ನು ಕವಿತೆ, ದೀರ್ಘವೋ ಚಿಕ್ಕದೋ ಅದು ಕೊಡುವ ಆನಂದವೆ ಮುಖ್ಯ ಎನ್ನುವದನ್ನು ಸಾರುತ್ತರೆ. ದೈವದ ಮಹತ್ವವನ್ನು, ದೇವರೆಂಬ ಮಯಾವಿ ಯರ ಕೈಗೂ ಸಿಗದ ಆದರೆ ಎಲ್ಲವನ್ನೂ ನಿಯಂತ್ರಿಸುವವನು ಎನ್ನುವದನ್ನು ‘ಬಿಗ್ ಬಾಸ್’ ಎಂಬ ಹನಿಯಲ್ಲಿ ಕವಿ ದರ್ಶಿಸುತ್ತಾರೆ.
ದೇವರನ್ನು ‘ಬಿಗ್ ಬಾಸ್’ ಎಂದಿರುವದೇ ಕುತೂಹಲ ವುಕ್ಕಿಸುತ್ತದೆ.
ಇದ್ದಾನಂತಲ್ಲ ಒಬ್ಬ
ಕರ್ತಾರ,
ಅವನೇ ಇಲ್ಲಿನ ಎಲ್ಲ
ಅಪರಾಧಗಳಿಗೂ
ಜವಾಬ್ದಾರ
ಆದರೆ ಅವನು ಯಾರ ಕೈಗೂ
ಸಿಗಲಾರ
ಸಲೀಸು
ಏಕೆಂದರೆ ಅವನೇ ಅಪರಾಧಿ
ಅವನೇ ಪೋಲಿಸು
‘ಅವನೇ ಅಪರಾಧಿ’ ಮತ್ತು ‘ಅವನೇ ಪೋಲಿಸ್’ ಎನ್ನುವ ಪದಗಳು ‘ತೇನ ವಿನಾ ತೃಣಮಪಿ ನ ಚಲತೀ’ ಎನ್ನುವ ಮಾತಿಗೆ ಬರೆದ ವ್ಯಾಖ್ಯಾನದಂತಿವೆ.
ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತೀರ್ಪು ಬರುವ ಹೊತ್ತನ್ನು, ಇಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವ ಹೊತ್ತಿಗೆ ಏನೆಲ್ಲ ಅಗಿರಬಹುದು ಎಂಬ ಸತ್ಯವನ್ನು ಕವಿ ಛೇಡಿಸುವ ರೀತಿ ಹೀಗಿದೆ. ‘ತೀರ್ಪು ಎಂಬ ಹೆಸರಿನ ಹನಿಗವಿತೆ
ಅಂತೂ
ವರ್ಷಗಳ ನಂತರ ತೀರ್ಪು ಬಂತು
ಕೊಲೆಗಾರನಿಗೆ ನೇಣು
ತಂತು
ಪರಂತು
ಶಿಕ್ಷೆ ಜಾರಿಮಾಡುವದು
ಎಂತು?
ಏಕೆಂದರೆ
ಕೊಲೆಗಾರನಪತ್ನಿ ಈಗಾಗಲೇ
ವಿತಂತು.
ಕವಿತೆಯ ಸ್ಪೋಟಕ ಗುಣ ಇರುವದೇ ಅಂತ್ಯದಲ್ಲಿ .ಕೋರ್ಟು ಅಪರಾಧಿಯ ತಪ್ಪನ್ನು ತಪ್ಪು ಎದು ತೀರ್ಮಾನಿಸಿ ಅವನಿಗೆ ಮರಣ ದಂಡನೆ ವಿಧಿಸುವ ಹೊತ್ತಿಗೆ ಅವನು ಸತ್ತು ಆಗಲೇ ವರ್ಷಗಳೆ ಅಗಿರುವ ವಿಚಿತ್ರ ಸನ್ನಿವೇಶ ಅದು. ಈಗ ಬಂದಿರುವ ತೀರ್ಪು ಯಾರಿಗೆ ನ್ಯಾಯ ನೀಡಿತು? ಎಂಬ ವ್ಯಂಗ್ಯ ವೂ ಅಲ್ಲಿದೆ. ‘ತಂತು’, ‘ಪರಂತು’,’ಎಂತು,’ ‘ವಿತಂತು’ ಪದಗಳನ್ನು ಕವಿತೆ ಯ ಸಾಲುಗಳ ಅಂತ್ಯದಲ್ಲಿ ತುಂಬ ಪ್ರಭಾವಪೂರ್ಣವಾಗಿ ಬಳಸಿರುವ ವೈಶಿಷ್ಟ್ಯವನ್ನೂ ಗಮನಿಸಬೇಕು.
ಜೀವನ ಇರುವವರೆಗೂ ಉತ್ಸಾಹದಿಂದಲೇ ಕಳೆಯಬೇಕು. ಅಸೆಯೇ ದು:ಖಕ್ಕೆ ಮೂಲ ಎನ್ನುವದು ನಮ್ಮಂತಹ ಸಾಮಾನ್ಯರಿಗೆ ಒಪ್ಪಿತವಲ್ಲದ ಮಾತು. ಏಕೆಂದರೆ ನಮಗೆ ಬದುಕಿನ ಆಸೆಗಳು ಸಾಕೆನ್ನಿಸುವುದೇ ಇಲ್ಲ. ಅವು ಸಾಕಾಗುವದು ಯವಾಗ? ಕವಿಯ ಉತ್ತರ ನೋಡಿ.
ಇನ್ನು, ಸಾಕು
ಅನ್ನಿಸುವದು
ಯಾವಾಗ?
ಬಹುಶ:
ನಾನು
ಇನ್ನಿಲ್ಲವಾದಾಗ.
ನಮ್ಮ ಜೀವಿತ ಇರುವವರೆಗೂ ಈ ಆಸೆ ತಪ್ಪಿದ್ದಲ್ಲ ಎನ್ನವು ಸತ್ಯವನ್ನು ಕವಿ ಸಾರುತ್ತಾರೆ.
‘ವಾರೆಂಟ್’ ಎಂಬ ಈ ಪದ್ಯ ಸುಂದರಿಯನ್ನು ಬಂಧಿಸಬೇಕಾಗಿದೆ ಎನ್ನುತ್ತದೆ. ಅದಕ್ಕೆ ಕಾರಣ ಅವಳ ಮಾದಕ ಚೆಲುವು. ಚೆಲವು ಕೂಡಾ ಮಾದಕ ವಸ್ತುಗಳ ಅಡಿಯಲ್ಲಿ ಬರುತ್ತದೆ ಎಂದು ಕವಿ ಛೇಡಿಸಿ ನಗೆಯುಕ್ಕಿಸುತ್ತಾನೆ.
ಚೆಲುವೆ
ಮಾದಕ ವಸ್ತುಗಳ ನಿಷೇಧದ
ಕಾಯಿದೆ
ಪ್ರಕರ
ಈ ಕೂಡಲೇ
ನಿನ್ನನ್ನು
ಬಂದಿಸಬೇಕಾಗಿದೆ
ಕವಿತೆ ಓದಿದೊಡನೆ ಕಿರುನಗೆ ಮೂಡಿ ಮಯವಾಗದಿರದು. ಆಕೆ ಕರಾಟೆ ಪಟುವು ಹೌದು.ಹಃಹ ಕರಾಟೆ ಹೊಡೆಯುವದು ತನ್ನ ಕೈಯ ಹೊಡೆತಗಳಿಂದಲ್ಲ.ಕಣ್ಣ ನೋಟದಿಂದ.
ಆ ಚಲುವೆಯ
ಚಂಚಲ ಕಣ್ಣ ಕರಾಟೆ!
ಎಂತೆಂತಹ belt black ಧೀರರೂ ಹೊಡೆದರೂ
ಅವಳ ಮುಂದೆ ಲಗಾಟೆ
ಏಕೆಂದರೆ ಆ ನೋಟದ ಮುಂದೆ ಎಂತಹ ಕ್ರಿಕೆಟ ಆಟಗಾರರೂ ಔಟ್ ಆದುದನ್ನು ಒಂದು ಹನಿ ವಿವರಿಸಿದೆ ಇಂತಹ ನೂರೆಂಟು ಹನಿಗಳನ್ನು ಅವರಲ್ಲಿ ಕಾಣಬಹುದು. ‘ಪರಿಹಾರ’ ಕವಿತೆಯ ವ್ಯಂಗ್ಯ ಗಮನಿಸಿ.
ಅನುಮಾನಿ ಗಂಡ
ಗೂಡಚಾರನ ನೇಮಿಸಿಕೊಂಡ
ಗಮನಿಸಲು ತನ್ನಾಕೆಯ
ಚಲನವ£ಲನ
ಇದೀಗ ನಿರಾತಂಕ
ಗೂಢಚಾರ ಮತ್ತು ಆಕೆಯ
ಮಧುರ ಮಿಲನ
ಅವನ ಅನುಮಾನಕ್ಕೆ ತಕ್ಕ ಶಿಕ್ಷೆ ತಾನಾಗಿಯೆ ಘಟಿಸಿದ್ದು ಅವನ ಗುಣಕ್ಕೆ ಸಿಕ್ಕ ಕಾಣಿಕೆಯೆ ಆಗಿದೆ. ಇಂತಹ ಹೊಳಹು ನಮ್ಮ ಹನಿಗವಿಗಳಿಗೆ ಮಾತ್ರ ಬರಲು ಸಾದ್ಯ!
ಪದಗಳೊಡನೆ ಆಟವಾಡುವದು ಹನಿಗವಿತೆಗಳ ಮುಖ್ಯ ಗುಣ.ಅದಕ್ಕೆ ಬಿ.ಆರ್ .ಲ ಅವರ ಹನಿಗಳೂ ಹೊರತಾಗಿಲ್ಲ. ಕವಿತೆಯಲ್ಲಿ ಅದನ್ನು ಸೃಷ್ಟಿಸುವ ರೀತಿಯಿಂದಲೇ ನಗೆಯುಕ್ಕಿಸುವ ನುಡಿ ಜಾಣ್ಮೆಯ ಹನಿಗವಿತೆಗಳನ್ನು ಬರೆದವರಲ್ಲಿ ಬಿ.ಆರ್ ಲಕ್ಷ್ಮಣರಾವ್ ಅವರು ಪ್ರಮುಖರು. ಅವರ ಶಿಕ್ಷೆ ಎಂಬ ಹನಿಗವನ ಇದಕ್ಕೆ ಉದಾಹರಣೆಯಾಗಿ ನೋಡಬಹುದು
ಜೈಲಿನಲ್ಲಿರುತ್ತರೆ
ಅಪರಾದ ಮಾಡಿದ
ಮಂದಿ
ಹಾಗೂ ಜೈಲಿನ
ಸಿಬ್ಬಂದಿ
ಮಂದಿ ಮತ್ತು ಸಿಬ್ಬಂದಿ ಎಂಬ ಪದಗಳನ್ನು ದುಡಿಸಿಕೊಂಡಿರುವ ರೀತಿ ಅವರ ಭಾಷಾ ನಾವಿಣ್ಯತೆಗೆ ಸಾಕ್ಷಿಯಾಗಿದೆ.
ಮಹಾಭಾರತ , ರಾಮಾಯಣಗಳಂತಹ ಮಹಕಾವ್ಯಗಳನ್ನು ನಮ್ಮ ಹನಿಗವಿಗಳು ಹಾಸ್ಯ ಮಾಡದೆ ಬಿಟ್ಟಿಲ್ಲ .ದ್ರೌಪದಿಯ ದೌರ್ಬಾಗ್ಯ ಎಂಥದು ಎಂಬುದನ್ನು ಅರಿಯಲು ಲಕ್ಷ್ಮ ಣರಾವ್ ಅವರ ಈ ಹನಿಯನ್ನೆ ಓದಬೆಕು. ಪಾಪ! ಐದು ಜನ ಗಂಡಂದಿರಿದ್ದರೂ ದ್ರೌಪದಿಯ ಆಸೆ ಈಡೆರಿಸಲು ಒಬ್ಬರೂ ಸಮಯಕ್ಕೆ ಸರಿಯಾಗಿ ಸಿಗುತ್ತಿರಲಿಲ್ಲ ಎಂಬ ಸತ್ಯವನ್ನು ಅವರ ‘ತೃಷ್ಣೆ’ ಎಂಬ ಹನಿಗವಿತೆ ಹೀಗೆ ವಿವರಿಸಿದೆ.
ಯುಧಿಷ್ಟರಗೆ ಹೆಣ್ಣೆಂದರೆ
ಉಪಾಎಕ್ಷೆ
ಪಾರ್ಥನಿಗೆ ಸ್ವಂತ ಹೆಣ್ಣುಗಳ
ಅಪೇಕ್ಷೆ
ಭೀಮನಿಗೆ ಪ್ರೇಮವೂ ಒಂದು
ವ್ಯಾಯಾಮ
ನಕುಲ ಸಹದೇವರಿಗೆ
ಎಲೆಗೋಮ
ಹೀಗಾಗಿ ಕೃಷ್ಣೆ
ಪಾಪ! ಸದಾ ತೃಷ್ಣೆ
ಕುಮಾರವದಮ್ಯಾಸನ ದ್ರೌಪದಿ " ಗಂಡರೈವರು ಮೂರುಲೋಕದ ಗಂಡರು, ಹೆಂಡಿರೊಬ್ಬಳ ನಾಳಲಾರಿರಿ "ಎಂದು ಝಂಕಿಸಿದ್ದಳು.ಇಲ್ಲ ದ್ರೌಪದಿ ಸದಾ ಅತೃಪ್ತಳಾಗಿಯೇ ಎಂಬುದನ್ಜು ಕವಿಕಾಣುತ್ತಾರೆ.ರಾಮಾಯಣ ಸೀತೆ ಭೂಜಾತೆ ಎನ್ನುವ ಕವಿ ಅವಳ ಅಳು ನಿಲ್ಲದುದನ್ನು ಹನಿಯಾಗಿಸಿದ್ದಾರೆ.
ತನ್ನ ಪ್ರೇಮವನ್ನು ಛೇಡಿಸುತ್ತಲೆ ಅದರಲ್ಲಿ ಹಾಸ್ಯವನ್ನು ಉಕ್ಕಿಸುವದು ಕನ್ನಡ ಹನಿಗವಿತೆಗಳಲ್ಲಿ ಕಂಡು ಬರುವ ಒಂದು ಪ್ರಮುಖ ಆಯಾಮ ಬಹಳಷ್ಟು ಪ್ರೇಮದ ಹನಿಗಳನ್ನು ಓದಿದಾಗ ನಮ್ಮ ತುಟಿಗಳಲ್ಲಿ ನಗೆಯ ಮಿಂಚು ತಕ್ಷಣಕ್ಕೆ ಮೂಡಿ ಖುಷಿ ಕೊಡುತ್ತದೆ. ಸಹ ಎನ್ನುವ ಕವಿತೆ ಅವರ ಚೇತೋಹಾರಿ ಗುಣಕ್ಕೆ ಸಾಕ್ಷಿಯಾಗಿದೆ
ನಾನು ಎಲ್ಲ ಚೆಲುವೆಯರನ್ನೂ
ಪ್ರೀತಿಸುತ್ತೇನೆ
ಎಂದರೇನು ಮಹ?
ನಾನು ಪ್ರೀತಿಸುತ್ತೇನೆ
ನನ್ನ ಹೆಂಡತಿಯನ್ನು ಸಹ
ಆ ಕ್ಷಣಕ್ಕೆ ಖುಷಿಕೊಡುವ ಅನೇಕ ಹನಿಗಳನ್ನು ಸಂಕಲನದ ತುಂಬ ಕಾಣುತ್ತೇಚೆ.ಗಂಡ ಹೆಙಡತಿಯರ ನಡುವಿನ ಬಙಧವೂ ಇಲ್ಲಿ ಕವಿತೆಯಾಗಿದೆ.ಗಂಡ ಸದಾ ಹೆಂಡತಿಗೆ ಶರಣಾದರೆ ದಾಂಪತ್ಯದಲ್ಲಿ ಸುಖ ಇರುತ್ತದೆ ಎನ್ನು ಕವಿ ಸೋಹಂ- ದಾಸೋಹಂ ಪದಗಳನ್ಜು ಬಬಳಸಿದ ರೀತಿಯ ಸೊಗಸೆ ಸೊಗಸು.ಮತಾಂತರ ಎನ್ನುವ ಹನಿ
ಪ್ರಿಯೆ
ಸೋ$ ಹಂ
ಎಂದು ಅದ್ವೈತಿಯಾಗಿದ್ದ ನಾನು
ಇಂದು
ನಿನಗೆ
' ದಾಸೋ$ ಹಂ '
ಎಂದು
ಶರಣನಾದೆ
ಎಂದು ಶರಣಗತನಾದುದನ್ನು ಹೇಳುತ್ತದೆ.ಪ್ರೀತಿಯ ಸಾಫಲ್ಯಬಿರುವುದೆ ಈ ತಿಳಿವಳಿಕೆಯಲ್ಲಿ.ಅಲ್ಲಿ ಅಹಂ ಗೆಲ್ಲದು.ಇದನ್ನು ತಿಳಿಯದೆ ಪ್ರೇಮವೂ ಗೆಲ್ಲದು.
ನಮ್ಮ ಹೃದಯದ ಬಾಗಿಲಿನ ಬೀಗ ತೆಗೆಯಲು ದೊಡ್ಡ ಕವಿತೆಯೆ ಬೇಕೆಂದಿಲ್ಲ .ಒಂದು ಪದವೂ ಸಾಕು ಎನ್ನುವದು ಕವಿಯ ಅಂಬೋಣ ಅದು ನಿಜವೂ ಹೌದು. ನೂರಾರು ಪುಟಗಳ ಇಒಂದು ಕಾವ್ಯ ಕೊಡಲಾರದ ದರ್ಶನವನ್ನು ಒಂದು ಹನಿಗವಿತೆ ಉಕ್ಕಿಸಬಹುದು ಇದನ್ನೇ ಅವರ ‘ಬೀಗದ ಕೈ’ ಎಂಬ ಹನಿ ಹೀಗೆ ವಿವರಿಸಿದೆ.
ಕೆಲವೊಮ್ಮೆ
ಒಂದು ಸಾಲು
ಒಂದು ಮಂತ್ರ
ಒಂದು ಪದ
ತೆರೆಯಬಹುದು
ಕವಿತೆಯ
ಹೃದಯದ
ಸೌಭಾಗ್ಯದ
ಕದ
ಕವಿತೆ ದೀರ್ಘವೋ , ಚಿಕ್ಕದೋ ಮುಖ್ಯ ಅಲ್ಲ, ಅದು ಮಡುವ ಪರಿಣಾಮ ಮುಖ್ಯ ಎಂದು ಕವಿ ಸಾರುತ್ತಾರೆ.
ಈ ಕವಿಯ ಹನಿಗವನಳಿಗೆ' ಹಿಡಿದರೆ ಹಿಡಿ ತುಂಬ ಬಿಟ್ಟರೆ ಜಗತುಂಬ "ಬೆಳಗುವ ಶಕ್ತಿ ಇರುವದನ್ನು ಆಗಲೇ ಕಾವ್ಯ ಲೋಕ ಒಪ್ಪಿಕೊಂಡಿದೆ.
( ಮುಂದುವರಿಯುವದು)
ವೈ.ಎಂ.ಯಾಕೊಳ್ಳಿ
ಸವದತ್ತಿ
ಮೊ:೯೭೩೧೯೭೦೮೫೭
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments