"ವ್ಯಕ್ತಿಯಾಗಲು "

 *ವ್ಯಕ್ತಿಯಾಗಲು* 


ಕಣ್ಣ ಹನಿಗಳು ಜಾರಿ

ಕಾಡಿಗೆ ಕಲಕಿತ್ತು, ಚದುರಿತ್ತು

ಜರಿದ ಹನಿಗಳಕೂಡ ಬೆರೆತ್ತಿತ್ತು

ನೋವಿನ ಭಾವವ ತೆರೆದಿತ್ತು


ಸಾವಿರ ಕನಸ್ಸಿನ ಭಾವ ರಸ ಹನಿಗಳಲ್ಲಿ  ಬೆರೆತ್ತಿತ್ತು 

ತಿಳಿಯ ಹನಿಗಳಲ್ಲಿ ಬದುಕು ಬೆರೆತು

ಕೆನ್ನೆಯ ಮೇಲೆ  ಧಾರೆ ಎರೆದಿತ್ತು

ಅದು ಕಾಡಿಗೆಯಿಂದ ಕಪ್ಪಗಾಗಿತ್ತು


ಸುರವ ಹನಿಗಳಲ್ಲಿ

ಕಳೆದ ದಿನಕ್ಷಣ ಆನಂದ ದುಃಖ

ಪ್ರಕಾಶಿಸುತ್ತಿತ್ತು ವ್ಯವರಿಸುತ್ತಿತ್ತು

ಅದುವೇ ಬದುಕಿನ ಸತ್ಯವಾಗಿತ್ತು


ವ್ಯಕ್ತಿಯಾಗಲು ರೊಕ್ಕಯಾಕೆ? ಶಕ್ತಿಯಾಕೆ? ವಯಸ್ಯಾಕೆ?  

ಅಧಿಕಾರ ಯಾಕೆ?

ಕಷ್ಟ, ನೋವು, ದುಃಖ, ಶ್ರಮ

ಇವೇ ಪಾಠಗಳಲ್ಲವೆ?


ತಿಳಿಯಾಗಿ, ಬಿಳಿಯಾಗಿ ಹೊಳೆಯಬೇಕು ಮನ

ಕಪ್ಪಿನಲ್ಲಿ ಕಲಿಯದ ಹನಿಗಳು

ಬೆಲೆಬಾಳುವವು ಕೊನೆಗೆ


ಇದು ಜೀವನ ಎಲ್ಲರಲ್ಲೂ

ಒಂದೊಂದು ಅನುಭವ

ಕೆಲವರು ಎದುರಿಸಿ ಗೆಲ್ಲುತ್ತಾರೆ

ಇನ್ನು ಕೆಲವರು ಸೋತು ಸಾಯುತ್ತಾರೆ


ಸುಟ್ಟು ಸುಟ್ಟು ಸುಣ್ಣವಾದಗಲೇ

ಅದು ಬಣ್ಣ ಆಗೋದು

ಎಲ್ಲ ಬಣ್ಣಗಳ ಬೆರೆಯೋದು

ತಾನು ಹೊಳೆದು, ಹೊಳಿಸೋದು


ಬಣ್ಣವಾಗಬೇಕು ಬದುಕು

ಬೆಳ್ಳಗಾಗಬೇಕು ಮನಸು

ಹೂವಾಗಬೇಕು ಕನಸು

ಹನಿಯಾಗಿ ನೀನು ಗಣಿಸು


ಡಾ. ಮಹಾದೇವ ಪೋತರಾಜ್


Image Description

Post a Comment

0 Comments