ಗುರುವಾರದಂದು
"ಸ್ವರ್ಣಗರಿ"ಜನಾರ್ಪಣೆ
ರಾಯಬಾಗ
ಹಾರೂಗೇರಿಯ ಖ್ಯಾತ ಲೇಖಕಿ, ಉಪನ್ಯಾಸಕಿ ಡಾ.ರತ್ನಾ ಬಾಳಪ್ಪನವರ ರಚಿತ 'ಸ್ವರ್ಣಗರಿ' ಪುಸ್ತಕ ಹಾರೂಗೇರಿಯ ಶ್ರೀ ಸಿದ್ಧಿವಿನಾಯಕ ಗ್ರಾಮೀಣ ಶಿಕ್ಷಣ ಮಹಾವಿದ್ಯಾಲಯದ (ಬಿ.ಈಡಿ)ಸಭಾ ಭವನದಲ್ಲಿ ಗುರುವಾರ ದಿನಾಂಕ 12-10-2023 ರಂದು ಅಪರಾಹ್ನ 2:00 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಡಾ.ದೇವಿಕಾ ನಗರಕರ ಪುಸ್ತಕ ಜನಾರ್ಪಣೆಗೊಳಿಸಲಿದ್ದಾರೆ. ನಿಜ ಶರಣ ಆಯ್.ಆರ್.ಮಠಪತಿ ಸಾನಿಧ್ಯ ವಹಿಸಲಿದ್ದು ಡಾ.ಪ್ರಿಯಂವದಾ ಹುಲಗಬಾಳಿ ಹೊತ್ತಿಗೆ ಮೇಲೆ ಬೆಳಕು ಚೆಲ್ಲಲಿದ್ದಾರೆ. ಡಾ.ಆರ್.ಎಸ್.ಕಾಗವಾಡೆ ಅಧ್ಯಕ್ಷತೆ ವಹಿಸಿಕೊಳ್ಳುವರು. ತಿಮ್ಮಪ್ಪ ದಾಸಪ್ಪನವರˌವಿಠ್ಠಲ ಜೋಡಟ್ಟಿˌಸಂತೋಷ ತಮದಡ್ಡಿ ಪುಸ್ತಕ ಪರಿಮಳ ಪಸರಿಸುವರೆಂದು ಕ.ಸಾ.ಪˌರಾಯಬಾಗ ತಾಲೂಕಾಧ್ಯಕ್ಷ ರವೀಂದ್ರ ಪಾಟೀಲ ತಿಳಿಸಿದ್ದಾರೆ.
ವರದಿ :ಡಾ. ವಿಲಾಸ್ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments