*ನಗುತ್ತಿದ್ದಾನೆ ಇನ್ನು ಬುದ್ಧ..*
ಹಮಾಸ್ ನಲ್ಲಿ ಮುಂದುವರೆದೆ ಇದೇ ಯುದ್ಧ ,
ಅನಿಸುತ್ತಿದೆ ವಾಮನನಿಗೆ ; *ನಗುತ್ತಿದ್ದಾನೆ ಇನ್ನು ಬುದ್ಧ...*
ಶಾಂತಿ ಪ್ರಿಯ ಮತ್ತೆ;
ಅಹಿಂಸಾವಾದಿ ಬುದ್ಧ, ಅನ್ನಿಸುತ್ತಿದೆ ವಾಮನನಿಗೆ ; *ನಗುತ್ತಿದ್ದಾನೆ ಇನ್ನು ಬುದ್ಧ...* ಆಯುಷ್ಯ ಪಣಕ್ಕೂ ; ಇಡುವವ ಬುದ್ಧ,
ಅನಿಸುತ್ತಿದೆ ವಾಮನನಿಗೆ ; *ನಗುತ್ತಿದ್ದಾನೆ ಇನ್ನು ಬುದ್ಧ...*
ಮಹಾಕರುಣಾಮಯಿ ಆತ ; ಕಲ್ಯಾಣಕಾರಿ ತಥಾಗತ ಬುದ್ಧ,
ಅನಿಸುತ್ತಿದೆ ವಾಮನನಿಗೆ ; *ನಗುತ್ತಿದ್ದಾನೆ ಇನ್ನು ಬುದ್ಧ...*
ಆಕ್ರೋಶವೇ ಇದ್ದಿರಲಿ ಇಲ್ಲವೇ ಯಾರಲ್ಲಾದರೂ ಕ್ರೋಧ,
ಅನಿಸುತ್ತಿದೆ ವಾಮನನಿಗೆ ; *ನಗುತ್ತಿದ್ದಾನೆ ಇನ್ನು ಬುದ್ಧ...*
ಯಾರೋ ತಟಸ್ಥರಿರುವರು ; ಯಾರೋ ತುಂಬಾನೇ ಪ್ರಕ್ಷುಬ್ದ,
ಅನಿಸುತ್ತಿದೆ ವಾಮನನಿಗೆ ; *ನಗುತ್ತಿದ್ದಾನೆ ಇನ್ನು ಬುದ್ಧ...*
ಸಾಯುವರು ಅವರು ಕೂಡ ;
ಯಾರ ವಿರುದ್ಧವೂ ಅಲ್ಲ,
ಅನಿಸುತ್ತಿದೆ ವಾಮನನಿಗೆ ; *ನಗುತ್ತಿದ್ದಾನೆ ಇನ್ನು ಬುದ್ಧ...*
ಸೋತಿಹರು ಅಥವಾ ಗೆದ್ದಿಹರೋ ಯಾರೋ ಯುದ್ಧ,
ಅನಿಸುತ್ತಿದೆ ವಾಮನನಿಗೆ ; *ನಗುತ್ತಿದ್ದಾನೆ ಇನ್ನು ಬುದ್ಧ...*
ನಮೋ ಬುದ್ಧಾಯ...
ಜೈ ಭೀಮ್ ...
ಜೈ ಭಾರತ್ ...
ಜೈ ಸಂವಿಧಾನ.
✍️✍️✍️.....
*ಶ್ರೀ ಅರ್ಜುನ್ ನಿಡಗುಂದೆ.*
ಸದಲಗಾ.
ತಾಲೂಕ : - ಚಿಕ್ಕೋಡಿ
ಜಿಲ್ಲಾ :- ಬೆಳಗಾವಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments