*ಅಂತರಂಗದ ಅಳಲು *

 ಅಂತರಂಗದ ಅಳಲು 



ನೀ ಹೋಗುವ ಮುನ್ನ 

ನನ್ನ ಮರೆತು ನೀ ಹೋಗುವ ಮುನ್ನ 

ಚಿಗುರಿದ ಕನಸುಗಳಿಗೆ 

ತಿಳಿಹೇಳಿ ಹೋಗು 


ನೀ ಹೋಗುವ ಮುನ್ನ 

ನನ್ನ ಮರೆತು ನೀ ಹೋಗುವ ಮುನ್ನ 

ನನ್ನೆದೆಯ ಗುಡಿಯಲ್ಲಿ 

ನೀ ತುಂಬಿದ ಬೆಳಕ ಅಳಿಸಿ ಹೋಗು 


ನೀ ಹೋಗುವ ಮುನ್ನ 

ನನ್ನ ಮರೆತು ನೀ ಹೋಗುವ ಮುನ್ನ 

ನನಗೂ ಒಲವಿದೆ ಹೃದಯವಿದೆ ಎಂದೆಲ್ಲಾ 

ಹೇಳಿದ ನನ್ನ ನಂಬಿಕೆಗಳಿಗೆ 

ಬೆಂಕಿ ಹಚ್ಚಿ ಸುಟ್ಟು ಹೋಗು 


ನೀ ಹೋಗುವ ಮುನ್ನ 

ನನ್ನ ಮರೆತು ನೀ ಹೋಗುವ ಮುನ್ನ

ನಿನ್ನ ನಗುವ ಕಾದಿರುವ 

ನನ್ನ ಹೃದಯ ಬಡಿತಗಳ ನಿಲ್ಲಿಸಿ ಹೋಗು


ಉದಂತ ಶಿವಕುಮಾರ್

ಕವಿ ಮತ್ತು ಲೇಖಕ

ಜ್ಞಾನ ಭಾರತಿ ಅಂಚೆ

ಬೆಂಗಳೂರು -560056

ಮೊಬೈಲ್ ನಂ 9739758558

Image Description

Post a Comment

0 Comments