*ಚೆಲುವಿನ ಸೆಳೆತ *

 *ಡಾ. ವಾಣಿಶ್ರೀ ಕಾಸರಗೋಡು*

*ಗಡಿನಾಡ ಕನ್ನಡತಿ*


ಚೆಲುವಿನ ಸೆಳೆತ 


ಪರವಶನಾದೆನು ನಿನ್ನ  ಕಂಡ  ಮೊದಲ ದಿನಕೆ 

ಪುಳಕಿತನಾದೆನು ನಿನ್ನ  ಸೆಳೆಯುವ  ನೋಟಕೆ

ನಿನ್ನಾದೀನನಾದೆನು  ನಿನ್ನ   ಹೊಳೆವ  ಅಂದಕೆ

ಮುಳುಗಿಹೋದೆನು ನಿನ್ನ ಪ್ರೀತಿಯ ಮೋಹಕೆ


ಬೆರಗುಗೊಂಡೆನು ನಿನ್ನ ಚೆಲುವ ರೂಪರಾಶಿಗೆ

ಕಳವಳಗೊಂಡೆನು ನಿನ್ನ ಮೋಹಕ ಕಿರುನಗೆಗೆ

ಸಮ್ಮೋಹಗೊಂಡೆನು ನಿನ್ನ ಆಕರ್ಷಕ ಮಾತಿಗೆ

ಕಳೆದುಹೋದೆನು ನಿನ್ನ ಪ್ರೀತಿ ಪ್ರೇಮದ ಪರಿಗೆ


ಪ್ರಯತ್ನಪಡುವೆನು  ನಿನ್ನ ಬದುಕಿನಲಿ ಸೇರಲು

ಜೊತೆಗೂಡುವೆನು ನಿನ್ನ ಮನದಲಿ ಬೆರೆಯಲು

ಕನಸುಕಾಣುವೆನು ನಿನ್ನ  ಪ್ರೀತಿಯಲಿ  ಕರಗಲು

ಆತುರನಾಗಿಹೆನು ನಿನ್ನ ಕೂಡೆ ಬೆರೆತು ಬಾಳಲು


Image Description

Post a Comment

0 Comments