*ಪ್ರಥಮ ಸ್ಥಾನಕ್ಕೆ ಆಯ್ಕೆ ಮಾಡಿದ ಕವಿತೆ* ಮುಗಿಲಲಿ ಮೂಡಿದ ಮಲ್ಲಿಗೆ ಚಿತ್ತಾರ
ನಲ್ಲೇ ಈ ನಿನ್ನ ಹಣೆಯ ಸಿಂಧೂರ
ನಮ್ಮ ನೆಲದ ಈ ಸಂಸ್ಕಾರ
ಮೆಚ್ಚಿ ನಾನಾದೆ ನಿನ್ನ ಪ್ರಿಯಕರ
ಅಂಬರಕ್ಕೆ ಸುಂದರ ಈ ಚಂದಿರ
ನಲ್ಮೆಯ ಬಾಳಿಗೆ ನೀನೆ ಆಧಾರ
ನಿನ್ನ ನಗೆಯೇ ಮನೆಗೆ ಶೃಂಗಾರ
ನಿನ್ನ ಗುಣ ಅಪ್ಪಟ ಬಂಗಾರ
ನೀನನ್ನ ಬಾಳ ಬೆಳಗು ನೇಸರ
ನಮ್ಮ ಬಾಳಲ್ಲಿ ಇಲ್ಲ ಅಪಸ್ವರ
ಮಾಗಿ ಚಳಿಗೆ ನೀನೇ ಚಾದರ
ನನ್ನೆಲ್ಲ ಭಾವಗಳಿಗೆ ನೀ ಸ್ವರಭಾರ
ನಲ್ಲ ನೀ ಬಾಳಹಾದಿಯ ಗುರಿಕಾರ
ಒಲುಮೆಯಿಂದ ಮಾಡುವೆ ಉಪಚಾರ
ಮರೆಯಲಾರೆ ನೀ ನೀಡಿದ ಸಹಕಾರ
ಎಂದೆಂದಿಗೂ ದಿಗೂ ನಿನ್ನವೆ ನಿನ್ನ ಉಪಕಾರ
ನಲ್ಲ ನಮ್ಮೊಲವಿಗೆ ಆಗಸವೇ ಚಪ್ಪರ
ಸಂಪ್ರೀತಿ ತುಂಬಿದ ನಮ್ಮ ಸಂಸಾರ
ನಮ್ಮಲೆಂದು ಆಳಲಿಲ್ಲ ಅಧಿಕಾರ
ಒಲವಿತ್ತು ನಮ್ಮಿಬ್ಬರಲ್ಲಿ ಪರಸ್ಪರ
ಇದಕ್ಕೆ ಸಾರಿ ಹೇಳೋಣ ಡಂಗುರ
ಒಲವ ಪೂಜೆಗೆ ನಾವು ಕರ್ಪೂರ
ಎಂಥ ಅದ್ಭುತ ಪ್ರೀತಿಯ ಚಮತ್ಕಾರ
ನಿಜವಲ್ಲವೇ ಒಲವೇ ಜೀವನ ಸಾಕ್ಷಾತ್ಕಾರ
0515ಪಿಎಂ25102023
*ಅಮುಭಾವಜೀವಿ ಮುಸ್ಟೂರು*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments