*ಕನ್ನಡಕ್ಕಾಗಿ ನನ್ನೀ ಬದಕು *

 *ಕನ್ನಡಕ್ಕಾಗಿ ನನ್ನೀ ಬದುಕು!*


*ನಾನ್ಯಾವತ್ತೂ ನನ್ನ ಜಾತಿಯನ್ನು ಮೆರೆಸಲಿಲ್ಲ;*

*ಕನ್ನಡವನ್ನೇ ನನ್ನ ಜಾತಿಯನ್ನಾಗಿಸಿಕೊಂಡೆ!*


*ನಾನ್ಯಾವತ್ತೂ ಧರ್ಮದ ಬೆನ್ನು ಬೀಳಲಿಲ್ಲ;*

*ಕನ್ನಡವನ್ನೇ ನನ್ನ ಧರ್ಮವನ್ನಾಗಿಸಿಕೊಂಡೆ!*


*ನಾ‌ನ್ಯಾವತ್ತೂ ವೈಯಕ್ತಿಕ ಸ್ವಾರ್ಥವನ್ನು ಬಯಸಲಿಲ್ಲ;*

*ನಿಸ್ವಾರ್ಥ ಕನ್ನಡ ಸೇವೆಯನ್ನೇ ಜೀವನದ ಪರಮ ಧ್ಯೇಯವನ್ನಾಗಿಸಿಕೊಂಡೆ!*


*ಕನ್ನಡವನ್ನೇ ನನ್ನ ಬಾಳಿನೂದ್ದಕ್ಕೂ ಹಸಿರಾಗಿಸಿಕೊಂಡೆ;*

*ಈ ಪಯಣದಲ್ಲಿ ಸಾವಿರದ ನೋವುಗಳ ಉಂಡೆ;*

*ಅವುಗಳನೆ ಉಸಿರಾಗಿಸಿಕೊಂಡೆ!*


*ನಾನ್ಯಾವತ್ತೂ ನನಗಾಗಿ ಬದುಕಲಿಲ್ಲ;*

*ಕನ್ನಡಕ್ಕಾಗಿ ನಾನು ಬದುಕಿದೆ;*

*ಕನ್ನಡ ನನ್ನ ಬದುಕಿಸಿದೆ..*

     ‌‌‌‌        *- ವಿಶ್ವಕನ್ನಡಿಗ ಕುಮಾರ ತಳವಾರ* 

✍️🙏💛❤️💐💐💐


Image Description

Post a Comment

0 Comments